ನಿಮಗೆ ಹಿಂದಿ ಭಾಷೆ ಚೆನ್ನಾಗಿ ಓದಲು, ಬರೆಯಲು, ಅರ್ಥ ಮಾಡಿಕೊಳ್ಳಲು, ಮಾತನಾಡಲು ಬರುತ್ತೆ ಅಂದ್ರೆ ಇಲ್ಲಿದೆ ನೋಡಿ ಬಂಪರ್ ಅವಕಾಶ. ಹಿಂದಿ ಭಾಷೆಯ ಮೇಲೆ ಚೆನ್ನಾಗಿ ಹಿಡಿತ ಹೊಂದಿರುವವರಿಗೆ ಟ್ರಾನ್ಸ್’ಲೇಟರ್ ಹುದ್ದೆ ಖಾಲಿ ಇದೆ. ಹೌದು, ನ್ಯಾಷನಲ್ ಇನ್’ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಖಾಲಿ ಇರುವ 1 ಜೂನಿಯರ್ ಹಿಂದಿ ಟ್ರಾನ್ಸ್’ಲೇಟರ್ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಇದೇ ಮೇ 2 ರಂದು ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸುರತ್ಕಲ್ನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.
ವಿದ್ಯಾರ್ಹತೆ:
ನ್ಯಾಷನಲ್ ಇನ್’ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ವೇತನ:
ದಿನಕ್ಕೆ 897 ರೂ.
ಉದ್ಯೋಗದ ಸ್ಥಳ:
ಸುರತ್ಕಲ್
ವಯೋಮಿತಿ:
ನ್ಯಾಷನಲ್ ಇನ್’ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 30 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಸಂದರ್ಶನ ನಡೆಯುವ ಸ್ಥಳ:
ಬೋರ್ಡ್ ರೂಮ್
ಮುಖ್ಯ ಆಡಳಿತ ಕಟ್ಟಡ
NITK ಸುರತ್ಕಲ್
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ ಬಿಡುಗಡೆ ದಿನಾಂಕ: 17/04/2023
ಸಂದರ್ಶನ ನಡೆಯುವ ದಿನ: ಮೇ 2, 2023