ಮನೆ ಕಾನೂನು ಹೆದ್ದಾರಿ ಟೋಲ್ ನಲ್ಲಿ 10 ರೂ. ಹೆಚ್ಚುವರಿ ಕಡಿತ: 8 ಸಾವಿರ ದಂಡ ಪಾವತಿಸಲು ಗ್ರಾಹಕ...

ಹೆದ್ದಾರಿ ಟೋಲ್ ನಲ್ಲಿ 10 ರೂ. ಹೆಚ್ಚುವರಿ ಕಡಿತ: 8 ಸಾವಿರ ದಂಡ ಪಾವತಿಸಲು ಗ್ರಾಹಕ ನ್ಯಾಯಾಲಯದ ಆದೇಶ

0

ಬೆಂಗಳೂರು: ಟೋಲ್ ನಲ್ಲಿ 10 ರೂ. ಹೆಚ್ಚುವರಿ ಕಡಿತಗೊಂಡಿದ್ದರ ವಿರುದ್ಧಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದ ವ್ಯಕ್ತಿಗೆ ಜಯ ಸಿಕ್ಕಿದೆ!

Join Our Whatsapp Group

ಟೋಲ್ ನಲ್ಲಿ 10 ರೂ. ಹೆಚ್ಚುವರಿ ಕಡಿತಗೊಂಡಿದ್ದಕ್ಕೆ ಗ್ರಾಹಕನಿಗೆ 8 ಸಾವಿರ ದಂಡ ಪಾವತಿಸಲು ಜಾಸ್ ಟೋಲ್  ಸಂಸ್ಥೆಗೆ ಗ್ರಾಹಕರ ನ್ಯಾಯಾಲಯ ಆದೇಶ ಹೊರಡಿಸಿದೆ.

ಬೆಂಗಳೂರಿನ ಗಾಂಧಿನಗರದ ಎಂ.ಬಿ.ಸಂತೋಷ್ ಎಂಬುವವರು ಈ ಕುರಿತು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು. 2020ರಲ್ಲಿ ತಮ್ಮ ಕಾರಿನಲ್ಲಿ ತೆರಳುವ ಮಾರ್ಗಮಧ್ಯೆ ಹೆದ್ದಾರಿ ಟೋಲ್ ಪ್ಲಾಜಾದಲ್ಲಿ ಹೆಚ್ಚುವರಿಯಾಗಿ 10 ರೂ. ಕಡಿತಗೊಂಡಿತ್ತು. ಕಾರಿನಲ್ಲಿ ಅಳವಡಿಸಿದ್ದ ಫಾಸ್ಟ್ ಟ್ಯಾಗ್ ಮೂಲಕ ಸಂತೋಷ್ ಅವರ ಬ್ಯಾಂಕ್ ಖಾತೆಯಿಂದ 10 ರೂ. ಹೆಚ್ಚುವರಿ ಕಡಿತಗೊಂಡಿತ್ತು.

ಈ ಕುರಿತು ಸಂತೋಷ್ ಅವರು 25 ಸಾವಿರ ಪರಿಹಾರ ನೀಡುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿದಾವೆ ಹೂಡಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಒಟ್ಟು 8 ಸಾವಿರ ರೂ. ಪರಿಹಾರ ನೀಡಬೇಕೆಂದು ಆದೇಶಿಸಿ ತೀರ್ಪು ಪ್ರಕಟಿಸಿದೆ.