ಮನೆ ಅಪರಾಧ 39 ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದವರ ಬಂಧನ

39 ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದವರ ಬಂಧನ

0

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿರುತ್ತಿದ್ದ ದ್ವಿಚಕ್ರ ವಾಹನಗಳನ್ನು ಹ್ಯಾಂಡ್‌ಲಾಕ್‌ ಮುರಿದು ಹಾಗೂ ನಕಲಿ ಕೀ ಬಳಸಿ ಕಳವು ಮಾಡುತ್ತಿದ್ದ ಮೂವರನ್ನು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿದ್ದು, ಬಂಧಿರಿಂದ 50 ಲಕ್ಷ ಮೌಲ್ಯದ 39 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

‘ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಆನಂದ್‌ (29), ಪಾವಗಡದ ಮಹಾಲಿಂಗಯ್ಯ (27) ಹಾಗೂ ಚಿತ್ತಯ್ಯ (26) ಬಂಧಿತರು.

ಇವರಿಂದ 5 ರಾಯಲ್‌ ಎನ್‌ಫೀಲ್ಡ್‌, 7 ಯಮಹ ಆರ್‌ಎಕ್ಸ್‌, 14 ಹೀರೊ ಹೊಂಡಾ, 2 ಹೊಂಡಾ ಆಕ್ಟಿವಾ, 5 ಹೊಂಡಾ ಡಿಯೊ, 2 ಹೊಂಡಾ ಶೈನ್‌, ತಲಾ ಒಂದು ಬಜಾಬ್‌ ಪಲ್ಸರ್‌, ಯಮಹಾ ಎಫ್‌ಜೆಡ್‌, ಟಿವಿಎಸ್‌ ಸ್ಕೂಟಿ ಹಾಗೂ ಟಿವಿಎಸ್‌ ಎಕ್ಸ್‌ಎಲ್‌ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.