ಮನೆ ರಾಜ್ಯ ಚುನಾವಣಾಧಿಕಾರಿಗಳಿಗೆ ಪ್ರಾಣ ಬೆದರಿಕೆ: ಬಿಜೆಪಿ ಕಾರ್ಯಕರ್ತನ ವಿರುದ್ಧ ದೂರು ದಾಖಲು

ಚುನಾವಣಾಧಿಕಾರಿಗಳಿಗೆ ಪ್ರಾಣ ಬೆದರಿಕೆ: ಬಿಜೆಪಿ ಕಾರ್ಯಕರ್ತನ ವಿರುದ್ಧ ದೂರು ದಾಖಲು

0

ಬೆಂಗಳೂರು ನಗರ: ಚುನಾವಣಾಧಿಕಾರಿಗಳಿಗೆ ಪ್ರಾಣ ಬೆದರಿಕೆ ಹಾಕಿದ ಬಿಜೆಪಿ ಕಾರ್ಯಕರ್ತ ಗಣೇಶ್ ವಿರುದ್ಧ ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Our Whatsapp Group

ಈ ಘಟನೆ ಆನೇಕಲ್ ತಾಲೂಕಿನ‌ ಸೂರ್ಯಸಿಟಿ ವ್ಯಾಪ್ತಿಯ ನಾರಾಯಣ ಘಟ್ಟ ಬಳಿ ನಡೆದಿದ್ದು, ಚುನಾವಣೆ ಮುಗೀಲಿ ನಿನ್ನ ನೋಡಿಕೊಳ್ತೇನೆ ಎಂದು ಗಣೇಶ್ ಬೆದರಿಕೆ ಹಾಕಿರುವುದಾಗಿ,  ಈ ಫ್ಲೈಯಿಂಗ್ ಸ್ಕ್ವಾಡ್ ಟೀಂ ಲೀಡರ್ ಮಹಾಂತೇಶ್​ ಎಂಬುವವರು ದೂರು ನೀಡಿದ್ದಾರೆ.

ನಿನ್ನೆ(ಏ.27) ಸಂಜೆ ಹುಲ್ಲಳ್ಳಿ ಶ್ರೀನಿವಾಸ್ ಪರ ಪ್ರಚಾರ ಮಾಡುತ್ತಿದ್ದ ಗುಂಪಿಗೆ ರ್ಯಾಲಿಗೆ ಪರ್ಮಿಷನ್ ತೆಗೆದುಕೊಂಡಿದ್ದೀರಾ ಎಂದು ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರಚಾರಕ್ಕೆ ಬಂದಿದ್ದ ಯುವಕನೊಬ್ಬ ‘ನೀನು ಯಾರು ಅದನ್ನು ಕೇಳೊಕೆ, ಚುನಾವಣೆ‌ ಮುಗೀಲಿ, ಕಚೇರಿಗೆ ಬಂದು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಇದೀಗ ಯುವಕನ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದು, ನಿನ್ನೆಯಿಂದ ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಸಧ್ಯ ಮಹಾಂತೇಶ್ ಜಿಲ್ಲಾಧಿಕಾರಿಗಳಿಗೂ ನಡೆದಿರುವ ಪ್ರಸಂಗ ವಿವರಿಸಿದ್ದು, ಮುಂದಿನ ಕ್ರಮಕ್ಕೆ ಆಗ್ರಹ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಬೆಳಿಗ್ಗೆಯಿಂದಲೂ ಮಹಾಂತೇಶ್ ಮೊಬೈಲ್ ನಂಬರ್ ನಾಟ್ ರೀಚಬಲ್ ಆಗಿದ್ದು, ನಡೆದ ಘಟನೆಯ ವಿಡಿಯೋಗಾಗಿ ಸೂರ್ಯಸಿಟಿ ಪೊಲೀಸರು ಕಾಯುತ್ತಿದ್ದು, ಗಲಾಟೆ ವಿಡಿಯೋ ಅಧಾರದ ಮೇಲೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಮುಂದಾಗಲಿದ್ದಾರೆ.