ಮನೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 130ಕ್ಕಿಂತ ಅಧಿಕ ಸ್ಥಾನ ಗೆಲ್ಲಲಿದೆ : ಕಾರಜೋಳ

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 130ಕ್ಕಿಂತ ಅಧಿಕ ಸ್ಥಾನ ಗೆಲ್ಲಲಿದೆ : ಕಾರಜೋಳ

0

ಬಳ್ಳಾರಿ: ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 130ಕ್ಕಿಂತ  ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಚಿವ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.

Join Our Whatsapp Group

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿಯಿಂದ ಮಂಗಳವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಪಂಚದಲ್ಲಿ ಆರ್ಥಿಕತೆಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಕಳೆದ ಮೂರು ವರ್ಷದಲ್ಲಿ ಬಿಜೆಪಿ ಸರಕಾರ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ರಾಜ್ಯದಲ್ಲಿ ಎಲ್ಲ ಸಮುದಾಯಗಳಿಗೆ ಮೀಸಲಾತಿ ಜಾರಿ ಮಾಡಿ ಅನುಕೂಲ ಮಾಡಿದೆ ಎಂದು ಹೇಳಿದರು.

ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ 700 ಕೋಟಿ ರೂ. ವೆಚ್ಚದಲ್ಲಿ ಕಾಲುವೆ ರಿಪೇರಿ, ಸಣ್ಣ ಸಣ್ಣ ಅಣೆಕಟ್ಟುಗಳು ನಿರ್ಮಿಸಿ ಕೃಷಿಗೆ ಅನುಕೂಲ ಮಾಡಿದೆ. ಕಾಂಗ್ರೆಸ್ 60ವರ್ಷ ಅಡಳಿತ ಮಾಡಿದರೂ ಅಭಿವೃದ್ಧಿ ಮಾಡಲಿಲ್ಲ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಲೋಕಸಭಾ ಪ್ರವೇಶಿಸಲು ಬಿಡಲಿಲ್ಲ, ಭಾರತ ರತ್ನ ಕೂಡ ನೀಡದೆ ಕಡೆಗಣಿಸಿದರೂ. ಡಾ. ಜಗಜೀವನ್ ರಾವ್ ರವರನ್ನು ಕಾಂಗ್ರೆಸ್ ನಿಂದ ಹೊರಹಾಕಿದರು. ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಕೆ. ಪರಮೇಶ್ವರ ರವನ್ನು ಕಾಂಗ್ರೆಸ್ ನವರು ಪಕ್ಷ ಸೋಲಿಸಿ ದಲಿತರನ್ನು ಬೆಳೆಯಲು ಬಿಡಲಿಲ್ಲ. ಕಾಂಗ್ರೆಸ್ ನೀತಿ ದೀನ ದಲಿತರನ್ನು ತುಳಿಯುವಂತ ಕೆಲಸ ಮಾಡುತ್ತಿದೆ. ಬಿಜೆಪಿ ಸಚಿವ ಸಂಪುಟದಲ್ಲಿ ದೀನದಲಿತರಿಗೆ ಹೆಚ್ಚಿನ ಸ್ಥಾನ ನೀಡಿದೆ ಎಂದರು.

ಎಸ್ ಸಿ, ಎಸ್ ಟಿ,  ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಜೆ  ಕಳೆದ ನಾಲವತ್ತು ವರ್ಷಗಳಿಂದ ಹೋರಾಟ ನಡೆಸಿದರೂ ಕಾಂಗ್ರೆಸ್ ಮೀಸಲಾತಿ ಜಾರಿ ಮಾಡಲಿಲ್ಲ ಅದರೆ ಬಿಜೆಪಿ ಸರಕಾರ ಜಾರಿ ಮಾಡಿದೆ. ಈ ಸಾರಿ ಖಂಡಿತವಾಗಿ ಬಿಜೆಪಿ ಗೆಲ್ಲಲಿದೆ. ಮಾಜಿ ಸಿಎಂ ಸಿದ್ಧರಾಮಯ್ಯ ಐದು ವರ್ಷ ಆಡಳಿತ ನಡೆಸಿದರೂ ಶೂನ್ಯ ಸಾಧನೆ. ಕೆಂಪಣ್ಣ ಕಳೆದ ಇಪ್ಪತ್ತು ವರ್ಷಗಳಿಂದ ಯಾವುದೇ ಕಾಮಗಾರಿ ಮಾಡಿಲ್ಲ. ಯಾವುದಾದರೂ ಕಾಮಗಾರಿಯಲ್ಲಿ ಕಮಿಷನ್ ನೀಡಿದರೆ ಬಗ್ಗೆ ದಾಖಲೆಗಳು ಸಲ್ಲಿಸಿಲ್ಲ. ದಾಖಲೆ ನೀಡಿದರೆ ತನಿಖೆ ಸಂಸ್ಥೆಗಳ ಮೂಲಕ ಬಹಿರಂಗ ಪಡಿಸಲಾಗುವುದು.  ಲೋಕಾಯುಕ್ತಗೆ ದಾಖಲೆ ಸಲ್ಲಿಸಿ ಕಮಿಷನ್ ಆರೋಪ ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಜಿತೇಂದ್ರ ರೆಡ್ಡಿ, ಎನ್. ವೈ. ಹನುಮಂತಪ್ಪ, ಕೆ.ಎಂ. ಮಹೇಶ್ವರ ಸ್ವಾಮಿ ಇದ್ದರು.