ಮನೆ ರಾಷ್ಟ್ರೀಯ ಎನ್ ಸಿಪಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಶರದ್ ಪವಾರ್

ಎನ್ ಸಿಪಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಶರದ್ ಪವಾರ್

0

ಮುಂಬಯಿ: ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಶರದ್ ಪವಾರ್ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ ಸಿಪಿ) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿರುವುದಾಗಿ ಮಂಗಳವಾರ ಘೋಷಿಸಿದ್ದಾರೆ.

Join Our Whatsapp Group

ಮುಂಬಯಿಯಲ್ಲಿ ತಮ್ಮ ಜೀವನಚರಿತ್ರೆ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಪವಾರ್ ಈ ಹೇಳಿಕೆ ನೀಡಿದ್ದಾರೆ. ಈ ವೇಳೆ ಅವರ ಅಣ್ಣನ ಮಗ ಅಜಿತ್ ಪವಾರ್ ಕೂಡ ಜತೆಗಿದ್ದರು. ಪವಾರ್ ತಮ್ಮ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಎನ್ಸಿಪಿ ಕಾರ್ಯಕರ್ತರು ಮತ್ತು ನಾಯಕರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಾಯಕನ ಹಠಾತ್ ನಿರ್ಧಾರಕ್ಕೆ ಕಣ್ಣೀರಿಟ್ಟಿದ್ದಾರೆ.

ಪಕ್ಷದ ಮುಂದಿನ ನಿರ್ಧಾರವನ್ನು ಹಿರಿಯ ನಾಯಕರ ಸಮಿತಿಯೊಂದು ತೆಗೆದುಕೊಳ್ಳಲಿದೆ ಎಂದು ಶರದ್ ಪವಾರ್ ತಿಳಿಸಿದ್ದಾರೆ.

ತಮ್ಮ ನಿರ್ಧಾರವನ್ನು ಹಿಂದಕ್ಕೆ ಪಡೆಯುವಂತೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಶರದ್ ಪವಾರ್ ಅವರನ್ನು ಒತ್ತಾಯಿಸಿದ್ದಾರೆ. ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿಯದೆ ಇದ್ದರೆ ಈ ಕಾರ್ಯಕ್ರಮದ ಸ್ಥಳದಿಂದ ಕದಲುವುದಿಲ್ಲ ಎಂದೂ ಬೆದರಿಕೆ ಹಾಕಿದ್ದಾರೆ.

ಶರದ್ ಪವಾರ್ ಅವರ ಅಣ್ಣನ ಮಗ ಹಾಗೂ ಪಕ್ಷದ ಹಿರಿಯ ನಾಯಕ ಅಜಿತ್ ಪವಾರ್ ಅವರು ಬಿಜೆಪಿ ಸೇರಿಕೊಳ್ಳಲು ತಯಾರಿ ನಡೆಸಿದ್ದಾರೆ ಎಂಬ ವದಂತಿ ನಡುವೆ ಈ ಬೆಳವಣಿಗೆ ನಡೆದಿದ್ದು, ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

“ನಾನು ಎನ್ ಸಿಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ಯಾವಾಗ ತಡೆಯಬೇಕು ಎನ್ನುವುದು ನನಗೆ ಗೊತ್ತಿದೆ” ಎಂದು ತಮ್ಮ ರಾಜೀನಾಮೆ ಘೋಷಿಸುವಾಗ 82 ವರ್ಷದ ಶರದ್ ಪವಾರ್ ಹೇಳಿದರು. ಇದೇ ವೇಳೆ “ನಾನು ನಿಮ್ಮ ಜತೆ ಇರುತ್ತೇನೆ, ಆದರೆ ಎನ್ ಸಿಪಿ ಅಧ್ಯಕ್ಷನಾಗಿ ಅಲ್ಲ” ಎಂದು ಪಕ್ಷದ ಕಾರ್ಯಕರ್ತರಿಗೆ ಅಭಯ ನೀಡಿದರು.