ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಶುಕ್ರವಾರ ಮತ್ತೆ 80 ಪೈಸೆ ಏರಿಕೆಯಾಗಿದ್ದು, ಕಳೆದ ನಾಲ್ಕು ದಿನಗಳಲ್ಲಿ 2.40 ರೂ.ಹೆಚ್ಚಳವಾಗಿದೆ. ಈ ಹೊಸ ಬೆಲೆಗಳು ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬಂದಿವೆ.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಹಿನ್ನಲೆ ಈಗ ಭಾರತದಲ್ಲೂ ತೈಲ ಬೆಲೆ ಏರಿಕೆ ಆರಂಭವಾಗಿದೆ. ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 80 ಪೈಸೆ ಹೆಚ್ಚಳವಾಗಿದೆ.
ದೆಹಲಿಯಲ್ಲಿ 80 ಪೈಸೆ ಹೆಚ್ಚಳದ ಮೂಲಕ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ ರೂ.97.81 ರೂಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ ರೂ. 89.07 ದಾಖಲಾಗಿದೆ.
ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 84 ಪೈಸೆ ಹೆಚ್ಚಳವಾಗಿದ್ದು, ಡೀಸೆಲ್ ಬೆಲೆಯಲ್ಲಿ 85 ಪೈಸೆ ಏರಿಕೆಯಾಗಿದೆ. ಈ ಮೂಲಕ ಲೀ.ಪೆಟ್ರೋಲ್ ದರ ರೂ.112.51, ಡೀಸೆಲ್ ರೂ. 96.70 ದಾಖಲಾಗಿದೆ.
ಚೆನ್ನೈನಲ್ಲಿ ಇಂಧನ ದರದಲ್ಲಿ 76 ಪೈಸೆ ಏರಿಕೆಯಾಗಿದೆ. ಈ ಮೂಲಕ ಲೀಟರ್ ಪೆಟ್ರೋಲ್ ಬೆಲೆ 103.67 ರೂಗೆ ತಲುಪಿದ್ದು, ಡೀಸೆಲ್ ಬೆಲೆ 93.71 ರೂಗೆ ಏರಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ 84 ಪೈಸೆ ಏರಿಕೆಯೊಂದಿಗೆ 106.34 ರೂ ದಆಖಲಾಗಿದೆ. ಹಾಗೆಯೇ ಡೀಸೆಲ್ ಬೆಲೆಯಲ್ಲಿ 80 ಪೈಸೆ ಹೆಚ್ಚಳವಾಗಿದ್ದು 91.42 ರೂ ದಾಖಲಾಗಿದೆ.
ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 102.26 ರೂ ಇದ್ದ ಪೆಟ್ರೋಲ್ ದರ 103.11 ರೂಗೆ ಏರಿಕೆಯಾಗಿದೆ. ಪ್ರತಿ ಲೀಟರ್ಗೆ 86.58 ರೂ ಇದ್ದ ಡೀಸೆಲ್ ದರ ರೂ. 87.37 ಗೆ ಏರಿಕೆಯಾಗಿದೆ.