ಮನೆ ಯೋಗಾಸನ ಎದೆ ಹಾಗೂ ಕಿಬ್ಬೊಟ್ಟೆಯ ಬಲಕ್ಕೆ ಅರ್ಧ ಉಷ್ಟ್ರಾಸನ

ಎದೆ ಹಾಗೂ ಕಿಬ್ಬೊಟ್ಟೆಯ ಬಲಕ್ಕೆ ಅರ್ಧ ಉಷ್ಟ್ರಾಸನ

0

ಅರ್ಧ ಒಂಟೆ ಭಂಗಿ ಎಂಬುದನ್ನು ಅರ್ಧ ಉಷ್ಟ್ರಾಸನ ಎನ್ನುತ್ತಾರೆ. ಇದು ಹೆಚ್ಚಿನ ಭೌತಿಕ ವ್ಯವಸ್ಥೆಗಳನ್ನು ಉತ್ತೇಜಿಸುತ್ತದೆ. ಈ ಭಂಗಿಯು ಮಂಡಿಯೂರಿ ಕುಳಿತುಕೊಂಡು ಹಿಂದಕ್ಕೆ ಬಾಗುವ ಸರಳ ಆಸನವಾಗಿದೆ. ಅರ್ಧ ಉಷ್ಟ್ರಾಸನವು ಹೃದಯ ತೆರೆಯುವಿಕೆ, ಹಿಂಭಾಗ ಮತ್ತು ಮುಂಭಾಗದ ದೇಹವನ್ನು ಹಿಗ್ಗಿಸುತ್ತದೆ. ಈ ಹೆಸರನ್ನು ಸಂಸ್ಕೃ ಪದದಿಂದ ಪಡೆಯಲಾಗಿದೆ. ಉಷ್ಟ್ರ ಅಂದರೆ ಒಂಟೆ ಮತ್ತು ಆಸನ ಅಂದರೆ ಭಂಗಿ. ಈ ಆಸನವನ್ನು ಯೋಗ ಚಾಪೆಯ ಮೇಲೆ ನೇರವಾಗಿ ಮೊಣಕಾಲು ಹಾಕುವ ಮೂಲಕ ಪ್ರಾರಂಭಿಸಿ. ಹೆಚ್ಚುವರಿ ಮೆತ್ತನೆಗಾಗಿ ಮೊಣಕಾಲುಗಳ ಅಡಿಯಲ್ಲಿ ಕಂಬಳಿ ಇರಿಸಬಹುದು. ಅರ್ಧ ಉಷ್ಟ್ರಾಸನವು ಉಷ್ಟ್ರಾಸನದ ಮಾರ್ಪಡಿಸಿದ ಬದಲಾವಣೆ ಮತ್ತು ಪೂರ್ವ ಸಿದ್ಧತಾ ಭಂಗಿಯಾಗಿದೆ. ಬೆನ್ನಿನ ಬೆಂಡ್ನ ತೀವ್ರತೆ ಮತ್ತು ಎದೆಯ ಮುಕ್ತತೆಯು ಅನಾಹತ (ಹೃದಯ) ಚಕ್ರವನ್ನು ಬಲವಾಗಿ ಸಕ್ರಿಯಗೊಳಿಸುತ್ತದೆ.

Join Our Whatsapp Group

ವಿಧಾನ: ಜಮಖಾನದ ಮೇಲೆ ಮಂಡಿಯೂರಿ ಕುಳಿತುಕೊಳ್ಳಿ. ಎರಡೂ ಕಾಲುಗಳ ಮಧ್ಯದಲ್ಲಿ ಅರ್ಧ ಅಡಿ ಅಂತರವಿರಲಿ. ಸೊಂಟದ ಹಿಂಭಾಗಕ್ಕೆ ಎರಡು ಕೈಗಳ ಹೆಬ್ಬೆರಳನ್ನು ಜೋಡಿಸಿಟ್ಟು ನಂತರ ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಹಿಂದಕ್ಕೆ ಬಾಗಿ. ತಲೆ ಮತ್ತು ಕುತ್ತಿಗೆಯನ್ನು ಎಷ್ಟು ಸಾಧ್ಯವೋ ಅಷ್ಟು ಹಿಂದಕ್ಕೆ ಬಾಗಿಸಿ. ಈ ಸ್ಥಿತಿಯಲ್ಲಿ ಇಪ್ಪತ್ತು ಸೆಕೆಂಡು ಸಮ ಉಸಿರಾಟದಲ್ಲಿ ನೆಲೆಸಿ. ಉಸಿರನ್ನು ಬಿಡುತ್ತಾ ಮೊದಲಿನ ಸ್ಥಿತಿಗೆ ಬನ್ನಿ. ಈ ರೀತಿ ಎರಡರಿಂದ 4 ಬಾರಿ ಅಭ್ಯಾಸ ಮಾಡಿ. ತುಸು ವಿಶ್ರಾಂತಿ ಪಡೆಯಿರಿ.

ಪ್ರಯೋಜನ: ಬೆನ್ನೆಲುಬು ಬಲಿಷ್ಠವಾಗುತ್ತದೆ. ಎದೆಯನ್ನು ವಿಸ್ತರಿಸುತ್ತದೆ. ತೊಡೆಗಳು ಮತ್ತು ತೊಡೆ ಸಂದುಗಳನ್ನು ಉದ್ದವಾಗಿಸುತ್ತದೆ. ಮೇಲಿನ ಬೆನ್ನು ಮತ್ತು ಕಾಲುಗಳನ್ನು ಬಲಪಡಿಸುತ್ತದೆ ಭುಜಗಳನ್ನು ತೆರೆಯುತ್ತದೆ. ಉಸಿರಾಟದ ಕಾರ್ಯಗಳನ್ನು ಸುಧಾರಿಸುತ್ತದೆ. ಅಸ್ತಮಾದಿಂದ ಬಳಲುತ್ತಿರುವ ಜನರು ಈ ಆಸನದಿಂದ ಪ್ರಯೋಜನ ಪಡೆಯುತ್ತಾರೆ. ಕಿಬ್ಬೊಟ್ಟೆಯ ಪ್ರದೇಶವನ್ನು ಈ ಆಸನವು ವಿಸ್ತರಿಸುತ್ತದೆ. ಕಿಬ್ಬೊಟ್ಟೆಯ ಅಂಗಗಳು ಬಲಗೊಳ್ಳುತ್ತವೆ. ಜೀರ್ಣಕಾರಿ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಮಿದುಳಿಗೆ ರಕ್ತಪರಿಚಲನೆ ಹೆಚ್ಚಿಸುತ್ತದೆ. ಪರಿಣಾಮವಾಗಿ ಏಕಾಗ್ರತೆಯನ್ನು ಸುಧಾರಿಸುತ್ತದೆ. ಕಶೇರು ಖಂಡಗಳನ್ನು ಸಡಿಲಗೊಳಿಸುತ್ತದೆ. ಬೆನ್ನು ಮೂಳೆಯ ನರಗಳು ಬಲಗೊಳ್ಳುತ್ತದೆ. ಥೈರಾಯ್್ಡ ಗ್ರಂಥಿಯನ್ನು ಉತ್ತೇಜಿಸುತ್ತದೆ.

ವಿ.ಸೂ: ಅಧಿಕ ರಕ್ತದೊತ್ತಡ, ಹರ್ನಿಯಾ, ಉದರ ಭಾಗದಲ್ಲಿ ಗಾಯಗಳಿಂದ ತೊಂದರೆ, ಸಂಧಿವಾತ, ತಲೆಸುತ್ತುವಿಕೆ ಹಾಗೂ ಗರ್ಭಿಣಿಯರು ಈ ಆಸನವನ್ನು ಅಭ್ಯಾಸ ಮಾಡುವುದು ಬೇಡ. ದೀರ್ಘಕಾಲದ ಮೊಣಕಾಲು, ಭುಜ, ಕುತ್ತಿಗೆ ನೋವು ಹಾಗೂ ಬೆನ್ನಿನ ಗಾಯ ಅಥವಾ ಉರಿಯೂತವನ್ನು ಹೊಂದಿರುವವರು ಕೂಡ ಈ ಆಸನ ಅಭ್ಯಾಸ ಮಾಡುವುದು ಬೇಡ.