ಮನೆ ಕ್ರೀಡೆ ಐಪಿಎಲ್ ನ 10ತಂಡಗಳ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ

ಐಪಿಎಲ್ ನ 10ತಂಡಗಳ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ

0

ನವದೆಹಲಿ: ಶನಿವಾರದಿಂದ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆರಂಭಗೊಳ್ಳಲಿದ್ದು, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು  ಮೊದಲ ಪಂದ್ಯ ಆಡಲಿವೆ.

ಈ ಬಾರಿ ಐಪಿಎಲ್‌ಗೆ ಹೊಸ ಎರಡು ತಂಡಗಳು (ಲಖನೌ ಹಾಗೂ ಗುಜರಾತ್) ಸೇರ್ಪಡೆಗೊಂಡಿದ್ದು, ಒಟ್ಟು ತಂಡಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಎಲ್ಲ 10 ತಂಡಗಳ ಪ್ರಮುಖ ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ.

ಮುಂಬೈ ಇಂಡಿಯನ್ಸ್:

ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಜಸ್‌ಪ್ರೀತ್ ಬೂಮ್ರಾ (ವೇಗಿ), ಸೂರ್ಯಕುಮಾರ್ ಯಾದವ್ (ಬ್ಯಾಟರ್) ಅಗ್ರ ವಿದೇಶಿ ಆಟಗಾರರು: ಕೀರನ್ ಪೊಲಾರ್ಡ್ (ಆಲ್‌ರೌಂಡರ್), ಫ್ಯಾಬಿಯನ್ ಅಲೆನ್ (ಆಲ್‌ರೌಂಡರ್), ಜೋಫ್ರಾ ಆರ್ಚರ್ (ವೇಗಿ).

ಚೆನ್ನೈ ಸೂಪರ್ ಕಿಂಗ್ಸ್:

ರವೀಂದ್ರ ಜಡೇಜ (ನಾಯಕ), ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಾಹರ್ (ಆಲ್‌ರೌಂಡರ್), ಋತುರಾಜ್ ಗಾಯಕವಾಡ್ (ಬ್ಯಾಟರ್)ಅಗ್ರ ವಿದೇಶಿ ಆಟಗಾರರು: ಮೊಯಿನ್ ಅಲಿ (ಆಲ್‌ರೌಂಡರ್), ಡ್ವೇನ್ ಬ್ರಾವೊ (ಆಲ್‌ರೌಂಡರ್), ಡೆವೊನ್ ಕಾನ್ವೆ (ಬ್ಯಾಟರ್).

ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್ (ನಾಯಕ), ಯಶ್ ಧುಲ್ (ಬ್ಯಾಟರ್), ಪೃಥ್ವಿ ಶಾ (ಬ್ಯಾಟರ್)ಅಗ್ರ ವಿದೇಶಿ ಆಟಗಾರರು: ಡೇವಿಡ್ ವಾರ್ನರ್ (ಬ್ಯಾಟರ್), ಲುಂಗಿ ಗಿಡಿ (ವೇಗಿ), ಎನ್ರಿಚ್ ನಾಕಿಯಾ (ವೇಗಿ).

ಪಂಜಾಬ್ ಕಿಂಗ್ಸ್: ಮಯಂಕ್ ಅಗರವಾಲ್ (ನಾಯಕ), ಶಿಖರ್ ಧವನ್ (ಬ್ಯಾಟರ್), ಶಾರುಖ್ ಖಾನ್ (ಬ್ಯಾಟರ್), ಅರ್ಶದೀಪ್ ಸಿಂಗ್ (ವೇಗಿ)ಅಗ್ರ ವಿದೇಶಿ ಆಟಗಾರರು: ಲಯಾಮ್ ಲಿವಿಂಗ್‌ಸ್ಟೋನ್ (ಬ್ಯಾಟರ್), ಜಾನಿ ಬೆಸ್ಟೊ (ವಿಕೆಟ್ ಕೀಪರ್), ಕಗಿಸೊ ರಬಾಡ (ವೇಗಿ).

ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಯಜುವೇಂದ್ರ ಚಾಹಲ್ (ಸ್ಪಿನ್ನರ್), ರವಿಚಂದ್ರನ್ ಅಶ್ವಿನ್ (ಸ್ಪಿನ್ನರ್), ದೇವದತ್ತ ಪಡಿಕ್ಕಲ್ (ಬ್ಯಾಟರ್)ಅಗ್ರ ವಿದೇಶಿ ಆಟಗಾರರು: ಜೋಸ್ ಬಟ್ಲರ್ (ವಿಕೆಟ್ ಕೀಪರ್), ನಥನ್ ಕೌಲ್ಟರ್ ನೈಲ್ (ವೇಗಿ), ಶಿಮ್ರಾನ್ ಹೆಟ್ಮೆಯರ್ (ಬ್ಯಾಟರ್).

ಕೋಲ್ಕತ್ತ ನೈಟ್ ರೈಡರ್ಸ್: ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್ (ಬ್ಯಾಟರ್), ವರುಣ್ ಚಕ್ರವರ್ತಿ (ಸ್ಪಿನ್ನರ್).ಅಗ್ರ ವಿದೇಶಿ ಆಟಗಾರರು: ಪ್ಯಾಟ್ ಕಮಿನ್ಸ್ (ವೇಗಿ), ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಸುನಿಲ್ ನಾರಾಯಣ್ (ಆಲ್‌ರೌಂಡರ್), ಆ್ಯಂಡ್ರೆ ರಸೆಲ್ (ಆಲ್‌ರೌಂಡರ್)

ಸನ್‌ರೈಸರ್ಸ್ ಹೈದರಾಬಾದ್: ಭುವನೇಶ್ವರ್ ಕುಮಾರ್ (ವೇಗಿ), ವಾಷಿಂಗ್ಟನ್ ಸುಂದರ್ (ಸ್ಪಿನ್ನರ್), ಉಮ್ರಾನ್ ಮಲಿಕ್(ವೇಗಿ), ಅಬ್ದುಲ್ ಸಮದ್ (ಬ್ಯಾಟರ್)ಅಗ್ರ ವಿದೇಶಿ ಆಟಗಾರರು: ಕೇನ್ ವಿಲಿಯಮ್ಸನ್ (ನಾಯಕ), ಮಾರ್ಕೊ ಜ್ಯಾನ್ಸೆನ್ (ಆಲ್‌ರೌಂಡರ್), ರೊಮರಿಯೊ ಶೆಫರ್ಡ್ (ವೇಗಿ), ನಿಕೋಲಸ್ ಪೂರನ್ (ವಿಕೆಟ್ ಕೀಪರ್)

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ಬ್ಯಾಟರ್), ಮೊಹಮ್ಮದ್ ಸಿರಾಜ್ (ವೇಗಿ), ಹರ್ಷಲ್ ಪಟೇಲ್ (ವೇಗಿ).ಅಗ್ರ ವಿದೇಶಿ ಆಟಗಾರರು: ಫಫ್ ಡು ಪ್ಲೆಸಿ (ನಾಯಕ), ವನಿಂದು ಹಸರಂಗ (ಸ್ಪಿನ್ನರ್), ಗ್ಲೆನ್ ಮ್ಯಾಕ್ಸ್‌ವೆಲ್ (ಆಲ್‌ರೌಂಡರ್), ಜೋಶ್ ಹ್ಯಾಜಲ್‌ವುಡ್ (ವೇಗಿ)

ಲಖನೌ ಸೂಪರ್ ಜೈಂಟ್ಸ್: ಪ್ರಮುಖ ಆಟಗಾರರು: ಕೆ.ಎಲ್. ರಾಹುಲ್ (ನಾಯಕ), ಆವೇಶ್ ಖಾನ್ (ವೇಗಿ), ರವಿ ಬಿಷ್ಣೋಯಿ (ಸ್ಪಿನ್ನರ್)ಅಗ್ರ ವಿದೇಶಿ ಆಟಗಾರರು: ಕ್ವಿಂಟನ್ ಡಿ ಕಾಕ್ (ಬ್ಯಾಟರ್), ಜೇಸನ್ ಹೋಲ್ಡರ್ (ವೆಸ್ಟ್‌ಇಂಡೀಸ್), ಮಾರ್ಕಸ್ ಸ್ಟೋಯಿನಿಸ್ (ಆಲ್‌ರೌಂಡರ್).

ಗುಜರಾತ್ ಟೈಟನ್ಸ್:  ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್ (ಬ್ಯಾಟರ್), ಮೊಹಮ್ಮದ್ ಶಮಿ (ವೇಗಿ).ಅಗ್ರ ವಿದೇಶಿ ಆಟಗಾರರು: ಲಾಕಿ ಫರ್ಗ್ಯುಸನ್ (ವೇಗಿ), ರಶೀದ್ ಖಾನ್ (ಸ್ಪಿನ್ನರ್), ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್).