ಮನೆ ರಾಷ್ಟ್ರೀಯ ಭಾರತೀಯವಾಯುಪಡೆಯಮಿಗ್ -21 ( MiG-21) ಯುದ್ಧವಿಮಾನಇಂದುಬೆಳಿಗ್ಗೆ ಪತನ

ಭಾರತೀಯವಾಯುಪಡೆಯಮಿಗ್ -21 ( MiG-21) ಯುದ್ಧವಿಮಾನಇಂದುಬೆಳಿಗ್ಗೆ ಪತನ

0

ನವದೆಹಲಿ: ಭಾರತೀಯ ವಾಯುಪಡೆಯ ಮಿಗ್ -21 ( MiG-21) ಯುದ್ಧ ವಿಮಾನ ಇಂದು ಬೆಳಿಗ್ಗೆ, ರಾಜಸ್ಥಾನದ ಹನುಮಾನ್‌ಗಢ ಗ್ರಾಮದ ಬಳಿ ಪತನಗೊಂಡಿದ್ದು, ಸದ್ಯದ ಮಾಹಿತಿ ಪ್ರಕಾರ ಇಬ್ಬರು ನಾಗರೀಕರು ಮೃತಪಟ್ಟಿದ್ದಾರೆ. ಓರ್ವ ತೀವ್ರ ಗಾಯಗೊಂಡಿದ್ಧಾರೆ. ಅದೃಷ್ಟವಶಾತ್ ಪೈಲಟ್ ಸುರಕ್ಷಿತವಾಗಿದ್ದಾರೆ. ಈ ವಿಮಾನ ಇಂದು ಬೆಳಿಗ್ಗೆ ಸೂರತ್ ಗಢದಿಂದ ಟೇಕಾಫ್ ಆಗಿತ್ತು. ಈ ಘಟನೆ ಬಗ್ಗೆ ಭಾರತೀಯ ವಾಯುಪಡೆ ತೀವ್ರ ವಿಷಾದ ವ್ಯಕ್ತಪಡಿಸಿದೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದೆ.

Join Our Whatsapp Group

ಸೇನಾ ಹೆಲಿಕಾಪ್ಟರ್ ಘಟನಾ ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ಇಂದು ಬೆಳಿಗ್ಗೆ ತರಬೇತಿಗಾಗಿ ಹಾರಾಟ ಪ್ರಾರಂಭಿಸಿದ ಮಿಗ್ 21 ವಿಮಾನ, ಕೆಲವೇ ನಿಮಿಷಗಳಲ್ಲಿ ಸಂಪರ್ಕ ಕಳೆದುಕೊಂಡು ಪತನಗೊಂಡಿದೆ. ಪತನಕ್ಕೆ ನಿಖರವಾದ ಕಾರಣ ಪತ್ತೆ ಹಚ್ಚಲಾಗುತ್ತಿದೆ. ವಿಮಾನ ಹಾರಾಟ ಶುರುವಾದ ಕೆಲವೇ ಕ್ಷಣಗಳಲ್ಲಿ ಪೈಲಟ್, ತುರ್ತು ಪರಿಸ್ಥಿತಿಯನ್ನು ಅನುಭವಿಸಿದರು, ಕೂಡಲೇ ಹಾರಾಟವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ವಿಮಾನ ಪತನದ ಬಳಿಕ ಸೂರತ್‌ಗಢದಿಂದ 25 ಕಿಲೋಮೀಟರ್ ದೂರದಲ್ಲಿ ನೆಲಕ್ಕೆ ಬಿದ್ದಿದ್ದ, ಪೈಲಟ್‌ನನ್ನು ಸೇನಾಪಡೆ ರಕ್ಷಿಸಿ, ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದೇ ಮೊದಲೇನಲ್ಲ ಮಿಗ್ 21 ವಿಮಾನ ಪತನ ಪ್ರಕರಣ ಇದೇ ಮೊದಲೇನಲ್ಲ. ಈ ಹಿಂದೆಯೂ ಮಿಗ್ 21 ವಿಮಾನ ಪತನಗೊಂಡ ಇತಿಹಾಸ ಇದೆ. ಜನವರಿಗೂ ಮುನ್ನ, ರಾಜಸ್ತಾನದ ಭಾರತ್‌ಪುರದಲ್ಲಿ ತರಬೇತಿ ಕಸರತ್ತು ನಡೆಸುತ್ತಿದ್ದ ಸುಖೋಯ್ ಸು-30 ಹಾಗೂ ಮಿರೇಜ್ 2000 ಪತನಗೊಂಡು ಪೈಲಟ್‌ವೊಬ್ಬರು ಮೃತಪಟ್ಟಿದ್ದರು. ಏಪ್ರಿಲ್‌ನಲ್ಲಿ ಕೊಚ್ಚಿಯಲ್ಲಿ ಕೋಸ್ಟ್ ಗಾರ್ಡ್ ವಿಮಾನ ಅಪಘಾತ ಸಂಭವಿಸಿತ್ತು. ಕಳೆದ ವಾರ ಕಾಶ್ಮೀರದ ಕುಶ್ವಾರ್ ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ವಿಮಾನ ಪತನಗೊಂಡಿತ್ತು. ಇದೇ ಮಾರ್ಚ್‌ನಲ್ಲಿ ವಿವಿಐಪಿ ಕರ್ತವ್ಯದ ಬಳಿಕ, ನೌಕಾಪಡೆಯ ಹೆಲಿಕಾಪ್ಟರ್ ಪತನಗೊಂಡಿತ್ತು.

2021 ರಲ್ಲಿ ಪಂಜಾಬ್ ನ ಮೊಗಾ ಬಳಿ ವಿಮಾನ ಪತನಗೊಂಡು, ಪೈಲಟ್‌ ಸಾವನ್ನಪ್ಪಿದ್ದರು. 2019 ರಲ್ಲಿ ರಾಜಸ್ಥಾನದ ಬಿಕಾನೇರ್ ನಲ್ಲಿ ಮಿಗ್ 21 ಪತನಗೊಂಡಿತ್ತು. ಆಗ ಪ್ರಾಣ ಹಾನಿ ಸಂಭವಿಸಿರಲಿಲ್ಲ. ಗೋವಾದ ಐಎನ್ ಎಸ್ ಹನ್ಸಾ ಏರ್ ಬೇಸ್ ನಲ್ಲಿ ತರಬೇತಿ ನಿರತವಾಗಿದ್ದ ಮಿಗ್ -29 ಕೆ ಯುದ್ಧ ವಿಮಾನ ಪತನವಾಗಿದ್ದನ್ನೂ ಇಲ್ಲಿ ಸ್ಮರಿಸಬಹುದು. ಭಾರತೀಯ ವಾಯುಸೇನೆ ಹಾರಿಸಿದ ಆರು ಯುದ್ಧ ವಿಮಾನಗಳಲ್ಲಿ MiG-21 ಗಳು ಸೇರಿವೆ. ಏಕ-ಎಂಜಿನ್,  ಸಿಂಗಲ್-ಸೀಟರ್  ಮಲ್ಟಿ-ರೋಲ್  ಫೈಟರ್, ಗ್ರೌಂಡ್ ಅಟ್ಯಾಕ್ ಪ್ಲೇನ್‌ಗಳನ್ನು 1963ರಲ್ಲಿ ಮೊದಲು ಇಂಟರ್‌ಸೆಪ್ಟರ್ ಏರ್‌ ಕ್ರಾಫ್ಟ್ ಆಗಿ ಸೇರಿಸಲಾಯಿತು.

ಮಿಗ್ 21 ಯುದ್ಧ ವಿಮಾನಗಳ ಪತನ, ಇವುಗಳ ಕ್ಷಮತೆ, ಕಾರ್ಯದಕ್ಷತೆ, ಸಾಮರ್ಥ್ಯಗಳ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ. 60 ರ ದಶಕದಲ್ಲಿ ಭಾರತದ ವಾಯುಪಡೆ ಸೇರಿದ, ಸೋವಿಯತ್ ಮೂಲದ ಮಿಗ್ ವಿಮಾನಗಳಿಂದ ಈವರೆಗೆ 200 ಕ್ಕೂ ಹೆಚ್ಚು ಅಪಘಾತಗಳು ಸಂಘವಿಸಿದೆ.