ಮನೆ ರಾಜಕೀಯ ಸೆಕ್ಟರ್ ಆಫೀಸರ್ಗಳ ನೈಜ ಕೆಲಸಕ್ಕೆ ಅಡ್ಡಿ: ಸಿಬ್ಬಂದಿಗಳ ಅಸಮಾಧಾನ

ಸೆಕ್ಟರ್ ಆಫೀಸರ್ಗಳ ನೈಜ ಕೆಲಸಕ್ಕೆ ಅಡ್ಡಿ: ಸಿಬ್ಬಂದಿಗಳ ಅಸಮಾಧಾನ

0

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭ ಬೂತ್‌ಗಳ ನಿರ್ವಹಣೆಗೆ ಸೆಕ್ಟರ್‌ ಆಫೀಸರ್‌ಗಳನ್ನು ನೇಮಕ ಮಾಡಲಾಗುತ್ತಿದ್ದು ಸೆಕ್ಟರ್ಗಳು ಹೆಚ್ಚುವರಿ ಜವಾಬ್ದಾರಿ ಕೆಲಸಗಳನ್ನು ನಿರ್ವಹಿಸಬೇಕಾಗಿದೆ. ಆದರೆ ಮತಗಟ್ಟೆಯ ಚಲನವಲನ ಬಗ್ಗೆ ಸಂಪೂರ್ಣ ಜವಾಬ್ದಾರಿ ನಿರ್ವಹಿಸಬೇಕಾದಂಥಹತಹ ಸೆಕ್ಟರ್‌ ಆಫೀಸರ್‌ಗಳಿಗೆ ಬೂತ್‌ಗಳಿಗೆ ಆಹಾರ ಸರಬರಾಜು ಮಾಡುವ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಇದು ಸಿಬ್ಬಂದಿ ಅಸಮಾಧಾನಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಪ್ರತಿ ಚುನಾವಣೆ ಸಂದರ್ಭದಲ್ಲೂ ಆ ವ್ಯಾಪ್ತಿಯಲ್ಲಿಯೇ ಊಟ-ತಿಂಡಿಯ ವ್ಯವಸ್ಥೆ ಮಾಡಲಾಗುತ್ತದೆ. ಅಥವಾ ಆ ವ್ಯಾಪ್ತಿಯಲ್ಲಿರುವ ಯಾವುದಾದರೊಂದು ಕ್ಯಾಟರಿಂಗ್‌ನವರಿಗೆ ಜವಾಬ್ದಾರಿ ನೀಡಲಾಗುತ್ತಿತ್ತು, ಅವರು ಬೂತ್‌ಗಳಿಗೆ ಊಟ- ಉಪಾಹಾರವನ್ನು ಪೂರೈಸುತ್ತಿದ್ದರು. ಆದರೆ ಈ ಬಾರಿ ಚುನಾವಣಾಧಿಕಾರಿಗಳು ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ್ದು, ಊಟ-ಉಪಹಾರ ವ್ಯವಸ್ಥೆಯನ್ನು ಕೇಂದ್ರೀಕರಿಸಿ ಸರಬರಾಜು ಮಾಡಲಾಗಿದೆ.

ಮಂಗಳೂರು ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಮಂಗಳೂರು ನಗರದಲ್ಲೇ ಊಟ-ತಿಂಡಿ ತಯಾರಿ ಮಾಡಿ ಎಲ್ಲ ಕ್ಷೇತ್ರಗಳಿಗೂ ಸರಬರಾಜು ಮಾಡಬೇಕು. ಇದೇ ರೀತಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಕೇಂದ್ರೀಕೃತವಾಗಿ ಊಟ-ತಿಂಡಿ ಮಾಡಿ ಸರಬರಾಜು ಮಾಡಲಾಗುತ್ತಿದೆ. ಇದೇ ಮಾದರಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ 23-26ರಿಂದ ಸೆಕ್ಟರ್‌ ಆಫೀಸರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳಗ್ಗೆ 3ರಿಂದ 4ಗಂಟೆಗೆ ತಿಂಡಿ ತಯಾರಿ ಮಾಡಲಾಗುತ್ತಿದ್ದು, ಅದನ್ನು ಸೆಕ್ಟರ್‌ ಆಫೀಸರ್‌ ವಾಹನಗಳ ಮೂಲಕ 10 ರಿಂದ 14 ಬೂತ್‌ಗಳಿಗೆ ಸಾಗಿಸಬೇಕು. ಇದಾದ ಬಳಿಕ ಮಧ್ಯಾಹ್ನ ಊಟ, ಸಂಜೆಯ ಚಾ-ತಿಂಡಿ ಸರಬರಾಜು ಮಾಡಬೇಕಾಗಿದೆ. ಹೀಗಿರುವಾಗ ಸೆಕ್ಟರ್‌ ಆಫೀಸರ್‌ಗಳು ತಮ್ಮ ನೈಜ ಕರ್ತವ್ಯವನ್ನು ನಿರ್ವಹಿಸಲಾಗದೆ ಬರಿ ಊಟ-ತಿಂಡಿ ಸರಬರಾಜಿಗೆ ಹೆಚ್ಚಿನ ಟೆನ್ಷನ್‌, ಸಮಯ ನೀಡಬೇಕಾಗಿದೆ. ಇದು ಮಾತ್ರವಲ್ಲದೆ ಯಾವುದೇ ಬೂತ್‌ನಲ್ಲಿ ಮತಯಂತ್ರ ಕೈಕೊಟ್ಟರೆ ಅಥವಾ ಯಾವುದೇ ತೊಂದರೆಯಾದರೆ ಸೆಕ್ಟರ್‌ ಆಫೀಸರ್‌ ಆ ಜವಾಬ್ದಾರಿ ವಹಿಸಿಕೊಳ್ಳುವುದು ಇದರಿಂದಾಗಿ ಅವರ ನೈಜ ಕೆಲಸಕ್ಕೂ ಕಷ್ಟವಾಗಲಿದೆ.

ಸೆಕ್ಟರ್‌ ಆಫೀಸರ್‌ ನೈಜ ಕೆಲಸವೇನು?

ಸೆಕ್ಟರ್‌ ಆಫೀಸರ್‌ಗಳು ಮತದಾನ ದಿನ ಸೆಕ್ಟರಲ್‌ ಮ್ಯಾಜಿಸ್ಪ್ರೇಟ್‌ ಆಗಿ ಕಾರ್ಯನಿರ್ವಹಿಸುತ್ತಾರೆ. ಮತದಾನ ಮುಂಚಿನ ದಿನ ಎಲ್ಲರೂ ಮತದಾನ ಕೇಂದ್ರಕ್ಕೆ ತಲುಪಿದ್ದಾರಾ? ಅಲ್ಲಿ ಸಿಬ್ಬಂದಿ, ಮತದಾರರಿಗೆ ವ್ಯವಸ್ಥೆಗಳು ಹೇಗಿದೆ? ಎಲ್ಲವೂ ಸರಿಯಾಗಿದೆಯೇ ನೋಡಬೇಕು. ಮತದಾನ ದಿನ ಬೆಳಗ್ಗೆ ಮತದಾನ ಆರಂಭಿಸಬೇಕು, ಪ್ರತಿಯೊಂದು ಬೂತ್‌ಗೆ ಭೇಟಿ ನೀಡಬೇಕು, ಅಲ್ಲಿಯ ಪರಿಸ್ಥಿತಿಯನ್ನು ಅವಲೋಕನ ಮಾಡಬೇಕು, ಯಾವ ಬೂತ್‌ನಲ್ಲಿಎಷ್ಟು ಮತದಾನವಾಯಿತು? ಮತದಾನ ಯಂತ್ರಗಳು ಹೇಗೆ ಕಾರ್ಯನಿರ್ವಹಿಸುತ್ತಿದೆ ? ಎಂಬ ಬಗ್ಗೆ ಸೆಕ್ಟರ್‌ ಆಫೀಸರ್‌ ನಿಗಾಯಿಡಬೇಕು.

ಸೆಕ್ಟರ್‌ ಆಫೀಸರ್‌ಗಳಿಗೆ ಅವರ ಜವಾಬ್ದಾರಿ ಹೊರತು ಬೇರೇನೂ ಕೆಲಸ ನೀಡುವಂತಿಲ್ಲ. ಆದರೆ ಈ ಬಾರಿ 10-12 ಬೂತ್‌ಗಳಿಗೆ ಊಟ-ಉಪಹಾರ ಸರಬರಾಜು ವ್ಯವಸ್ಥೆ ನೀಡಲಾಗಿದ್ದು, ಇದರಿಂದ ಒತ್ತಡ ಹೆಚ್ಚಾಗಿದೆ. ಇದು ಮಾತ್ರವಲ್ಲದೆ ಸೆಕ್ಟರ್‌ ಆಫೀಸರ್‌ ನೈಜ ಕೆಲಸಕ್ಕೆ ಅಡ್ಡಿಯಾಗಿ ಮತದಾನಕ್ಕೆ ತೊಂದರೆಯಾಗಲಿದೆ ಎಂದು ಮಂಗಳೂರು ನಗರ ಸೆಕ್ಟರ್‌ ಆಫೀಸರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.