ಮನೆ ರಾಜ್ಯ ರಾಜಸ್ಥಾನದಲ್ಲಿ ಬೃಹತ್‌ ಲೀಥಿಯಂ ನಿಕ್ಷೇಪ ಪತ್ತೆ: ಇದು ಭಾರತಕ್ಕೆ ಏಕೆ ಮುಖ್ಯ?

ರಾಜಸ್ಥಾನದಲ್ಲಿ ಬೃಹತ್‌ ಲೀಥಿಯಂ ನಿಕ್ಷೇಪ ಪತ್ತೆ: ಇದು ಭಾರತಕ್ಕೆ ಏಕೆ ಮುಖ್ಯ?

0

ಜೈಪುರ: ಇದೀಗ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಕೂಡ ಲೀಥಿಯಂ ನಿಕ್ಷೇಪದ ಕುರುಹುಗಳು ಕಾಣಿಸಿಕೊಂಡಿದ್ದು, ಇವು ಕಳೆದ ಮೂರು ತಿಂಗಳ ಹಿಂದೆ ಜಮ್ಮು ಕಾಶ್ಮೀರದಲ್ಲಿ ದೊರೆತ ನಿಕ್ಷೇಪಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇದೆ ಎಂದು ಅಲ್ಲಿನ ‘ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾ’ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೈಲೈಟ್ಸ್‌:

  • ದೇಶದ 80%ರಷ್ಟು ಲೀಥಿಯಂ ಖನಿಜದ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯ
  • ಮುಂದಿನ ಹಂತದಲ್ಲಿ ಲೀಥಿಯಂ ನಿಕ್ಷೇಪಗಳ ಸಂಸ್ಕರಣೆ, ಹೊರತೆಗೆಯುವ ಬಗ್ಗೆ ಚಿಂತನೆ
  • ನಗೌರ್‌ ಜಿಲ್ಲೆಯ ದೇಗಾನಾ ನಗರ ಪಾಲಿಕೆ ವ್ಯಾಪ್ತಿಯ ರೆನ್ವತ್‌ ಪರ್ವತ ಪ್ರದೇಶದಲ್ಲಿ ನಿಕ್ಷೇಪ

ದೇಶದೆಲ್ಲೆಡೆ ಎಲೆಕ್ಟ್ರಿಕ್‌ ವಾಹನಗಳ ಬೇಡಿಕೆ, ಮ್ತತು ಇವುಗಳ ಬಳಕೆ ಹೆಚ್ಚಿದ ಬೆನ್ನಲ್ಲೇ ರಾಜಸ್ಥಾನದಲ್ಲಿ ಬೃಹತ್‌ ನಿಕ್ಷೇಪ ಪತ್ತೆಯಾಗಿದೆ ಎಂದು ರಾಜಸ್ಥಾನದ ಗಣಿ ಇಲಾಖೆ ಅಧಿಕಾರಿಗಳು ಮತ್ತು ‘ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾ’ ಅಧಿಕಾರಿಗಳು ತಿಳಿಸಿದ್ದಾರೆ. ನಗೌರ್‌ ಜಿಲ್ಲೆಯ ದೇಗಾನಾ ನಗರ ಪಾಲಿಕೆ ವ್ಯಾಪ್ತಿಯ ರೆನ್ವತ್‌ ಪರ್ವತ ಪ್ರದೇಶದಲ್ಲಿ ಲೀಥಿಯಂನ ಗಣನೀಯ ಪ್ರಮಾಣದ ನಿಕ್ಷೇಪಗಳನ್ನು ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪತ್ತೆ

3 ತಿಂಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಸುಮಾರು 59 ಲಕ್ಷ ಟನ್‌ ಲಿಥಿಯಂ ನಿಕ್ಷೇಪ ಪತ್ತೆ ಮಾಡಲಾಗಿತ್ತು. ಇದಾಗಿ 3 ತಿಂಗಳ ಬಳಿಕ ರಾಜಸ್ಥಾನದಲ್ಲಿ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಲೀಥಿಯಂ ನಿಕ್ಷೇಪ ಪತ್ತೆಯಾಗಿದೆ. ಇದು ದೇಶದ 80%ರಷ್ಟು ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯವಿದೆ ಎಂದು ‘ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾ’ ಮತ್ತು ಗಣಿ ಇಲಾಖೆಯ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ, ಐಎಎನ್‌ಎಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

”ಸಧ್ಯಕ್ಕೆ ಇಲ್ಲಿ ಅಂದಾಜು ಎಷ್ಟು ಟನ್‌ ಲೀಥಿಯಂ ಇದೆ ಎಂಬುದನ್ನು ಅಲ್ಲದೇ ಅದನ್ನು ಹೊರತೆಗೆದು ಸಂಸ್ಕರಣೆ ಸಾಧ್ಯವೇ ಎಂಬ ಬಗ್ಗೆಯೂ ಜಿಯಾಲಾಜಿಕಲ್‌ ಸರ್ವೆ ಆಫ್‌ ಇಂಡಿಯಾ  ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ ಭಾರತದ ಪಾಲಿಗೆ ಮುಂದೆ ಇದೊಂದು ದೊಡ್ಡ ವರದಾನವಾಗಲಿದೆ ಎನ್ನಲಾಗಿದೆ.