ಮನೆ ರಾಜಕೀಯ ಐಡಿ ಕಾರ್ಡ್‌ ಇಲ್ಲ ಅಂತ ಮಹಾರಾಣಿ ಪ್ರಮೋದಾ ದೇವಿಯವರನ್ನೇ ವಾಪಸ್ ಕಳಿಸಿದ ಅಧಿಕಾರಿಗಳು

ಐಡಿ ಕಾರ್ಡ್‌ ಇಲ್ಲ ಅಂತ ಮಹಾರಾಣಿ ಪ್ರಮೋದಾ ದೇವಿಯವರನ್ನೇ ವಾಪಸ್ ಕಳಿಸಿದ ಅಧಿಕಾರಿಗಳು

0

ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜ್ಯಾದ್ಯಂತ ಭರ್ಜರಿ ಮತದಾನ ನಡೆಯುತ್ತಿದೆ. ಮೈಸೂರು ಜಿಲ್ಲೆಯಲ್ಲಿಯೂ ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳತ್ತ ಬಂದು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಅದೇ ರೀತಿ ಮೈಸೂರು ಒಡೆಯರ್‌ ರಾಜಮನೆತನದ ರಾಜಮಾತೆ ಪ್ರಮೋದಾ ದೇವಿ ಕೂಡ ಹಕ್ಕು ಚಲಾಯಿಸಲು ಮತಗಟ್ಟೆಗೆ ತೆರಳಿದ್ದರು. ಆದರೆ, ಅವರಿಗೆ ಮತದಾನ ಮಾಡಲು ಮತಗಟ್ಟೆ ಸಿಬ್ಬಂದಿ ಅವಕಾಶ ನಿರಾಕರಿಸಿದ್ದಾರೆ.

ಯಾಕೆಂದರೆ, ಪ್ರಮೋದಾ ದೇವಿ ಅವರು ಗುರುತಿನ ಚೀಟಿ ತರದೇ ಮತದಾನಕ್ಕೆ ಬಂದಿದ್ದರಿಂದ ಅವರಿಗೆ ಮತದಾನಕ್ಕೆ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶ್ರೀಕಾಂತ ಶಾಲೆಯ ಮತ ಕೇಂದ್ರದಲ್ಲಿ ಮತದಾನ ಮಾಡಲು ಪ್ರಮೋದಾ ದೇವಿಯವರು ಬಂದಿದ್ದರು. ಆದರೆ, ಗುರುತಿನ ಚೀಟಿ ತಂದಿರದ ಕಾರಣ ಮತದಾನಕ್ಕೆ ಅವಕಾಶ ನೀಡಲಿಲ್ಲ. ಝೆರಾಕ್ಸ್‌ ಪ್ರತಿಯನ್ನು ನೀಡಿದರೂ ಚುನಾವಣಾ ಸಿಬ್ಬಂದಿ ಒಪ್ಪಿಲ್ಲ.

ಬಳಿಕ ಮೂಲ ಐಡಿ ಕಾರ್ಡ್‌ ಅನ್ನು ತರಿಸಿದ್ದಾರೆ. ಅಷ್ಟರವರೆಗೂ ಕಾರಿನಲ್ಲಿಯೇ ಪ್ರಮೋದಾ ದೇವಿ ಕುಳಿತಿದ್ದರು. ಮೂಲ ಗುರುತಿನಿ ಚೀಟಿ ಒದಗಿಸಿದ ಬಳಿಕ ಮತದಾನಕ್ಕೆ ಅವಕಾಶ ನೀಡಲಾಗಿದೆ. ಆ ನಂತರ ರಾಜಮಾತೆ ಪ್ರಮೋದಾ ದೇವಿ ಮತ ಚಲಾಯಿಸಿದ್ದಾರೆ.