ಮನೆ ಯೋಗಾಸನ ಪಾದಹಸ್ತಾಸನ ಮಾಡಿ, ಬೊಜ್ಜಿಗೆ ಬೈ ಬೈ ಹೇಳಿ!

ಪಾದಹಸ್ತಾಸನ ಮಾಡಿ, ಬೊಜ್ಜಿಗೆ ಬೈ ಬೈ ಹೇಳಿ!

0

ಯೋಗಾಸನಗಳಲ್ಲಿ ಸಾಕಷ್ಟು ಬಾಗುವ ಆಸನಗಳಿವೆ. ಅದರಲ್ಲಿ ನಿಂತುಕೊಂಡು ಬಾಗುವ ಪ್ರಮುಖ ಆಸನವೆಂದರೆ ‘ಪಾದ ಹಸ್ತಾಸನ’. ಇದು ಮುಂದಕ್ಕೆ ಬಾಗುವಂತಹ ಭಂಗಿಯಾಗಿದೆ. ಇಲ್ಲಿ ಪಾದ ಎಂದರೆ ಕಾಲು, ಹಸ್ತ ಎಂದರೆ ಕೈ. ಈ ಆಸನದಲ್ಲಿ ಹಸ್ತವನ್ನು ಪಾದಕ್ಕೆ ತಾಗಿಸಲಾಗುತ್ತದೆ. ಈ ಆಸನ ಸೂರ್ಯನಮಸ್ಕಾರದ ಕ್ರಮದಲ್ಲಿ ಕೂಡ ಒಳಗೊಂಡಿದೆ.

Join Our Whatsapp Group

ಮಾಡುವ ವಿಧಾನ : ಜಮಖಾನದ ಮೇಲೆ ನಿಂತು, ಕಾಲುಗಳ ನಡುವೆ ಅಂತರ ಕೊಡಬೇಕು. ಉಸಿರನ್ನು ತೆಗೆದುಕೊಳ್ಳುತ್ತಾ ಎರಡು ಕೈಗಳನ್ನು ತಲೆಯ ಮೇಲೆ ನೇರವಾಗಿಸಿ, ಉಸಿರನ್ನು ಬಿಡುತ್ತಾ ನಿಧಾನವಾಗಿ ಸೊಂಟದ ಮೇಲ್ಭಾಗದಿಂದ ಮುಂದಕ್ಕೆ ಬಾಗಬೇಕು. ಎರಡು ಕೈಗಳಿಂದ ಪಾದಗಳನ್ನು ಹಿಡಿಯಲು ಪ್ರಯತ್ನಿಸಬೇಕು. ತಲೆಯನ್ನು ಮೊಣಕಾಲಿನ ಹತ್ತಿರಕ್ಕೆ ತಂದು ಕಣ್ಣು ಮುಚ್ಚಿಕೊಂಡು ಆಳ ಉಸಿರಾಟ ನಡೆಸಬೇಕು. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸಿದ ನಂತರ ಉಸಿರನ್ನು ತೆಗೆದುಕೊಳ್ಳುತ್ತಾ ಮೇಲಕ್ಕೆ ಬರಬೇಕು.

ಉಪಯೋಗಗಳು : ಪಾದ ಹಸ್ತಾಸನದ ಅಭ್ಯಾಸದಿಂದ ಹೊಟ್ಟೆಯ ಬೊಜ್ಜು ಬೇಗನೇ ಕರಗುತ್ತದೆ. ಹೊಟ್ಟೆಯ ಭಾಗಕ್ಕೆ ಉತ್ತಮ ವ್ಯಾಯಾಮ ದೊರಕಿ, ಹೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ, ಜೀರ್ಣಶಕ್ತಿ ವೃದ್ಧಿಯಾಗುತ್ತದೆ. ಗ್ಯಾಸ್ ಸಮಸ್ಯೆ, ಮಲಬದ್ಧತೆ ಮುಂತಾದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ನಿಯಂತ್ರಣವಾಗುತ್ತವೆ. ತೊಡೆಗಳ ಮಾಂಸಖಂಡಗಳು ಪಳಗುತ್ತವೆ. ಬೆಳೆಯುವ ಮಕ್ಕಳಿಗೆ ಎತ್ತರವಾಗಲು ಸಹಕಾರಿ. ದೇಹದ ಪೆಡಸುತನ ಕಳೆಯಲು ಈ ಆಸನ ಸಹಕಾರಿ. ಪಿತ್ತಕೋಶ ಮತ್ತು ಮೂತ್ರಪಿಂಡಗಳು ಚೆನ್ನಾಗಿ ಕಾರ್ಯ ನಿರ್ವಹಿಸುತ್ತವೆ. ಹೊಟ್ಟೆನೋವು ಪರಿಹಾರವಾಗುತ್ತದೆ. ಬೆನ್ನಿನ ಹುರಿಯ ಬಿಗಿತ ನಿವಾರಣೆಯಾಗುತ್ತದೆ. ಹೆಣ್ಣುಮಕ್ಕಳಿಗೆ ಮುಟ್ಟಿನ ದೋಷಗಳು ನಿವಾರಣೆಯಾಗುತ್ತವೆ.

ದಿನಾಲೂ ಪಾದ ಹಸ್ತಾಸನ ಅಭ್ಯಾಸ ಮಾಡುವುದರಿಂದ ಮನಸ್ಸಿನ ಗೊಂದಲ ನಿವಾರಣೆಯಾಗಿ ಲವಲವಿಕೆ ಮೂಡುತ್ತದೆ. ನರಸಂಬಂಧಿ ಸಮಸ್ಯೆಗಳು ಪರಿಹಾರವಾಗುತ್ತದೆ. ತಲೆಭಾರ, ಗೊಂದಲ ಇತ್ಯಾದಿ ತಲೆದೋರುವವರಿಗೆ ಈ ಆಸನದಿಂದ ಪರಿಹಾರವಾಗುತ್ತದೆ. ಕಣ್ಣುಗಳ ಹೊಳಪು ಹೆಚ್ಚುತ್ತದೆ. ಬೆನ್ನು ಮತ್ತು ಸೊಂಟಕ್ಕೆ ಒಳ್ಳೆಯ ವ್ಯಾಯಾಮ ಒದಗಿಬಂದು, ದೇಹದ ಸ್ನಾಯುಗಳಿಗೆ, ಮೂಳೆಗಳಿಗೆ ಆರೋಗ್ಯಕಾರಿಯಾಗಿದೆ.

ತುಂಬಾ ಅಧಿಕ ರಕ್ತದೊತ್ತಡ, ಪೆಪ್ಟಿಕ್ ಅಲ್ಸರ್, ಉದರದ ಹರ್ನಿಯಾ, ಹೃದಯ ದೌರ್ಬಲ್ಯ, ಸೊಂಟ ನೋವು, ಸ್ಲಿಪ್ ಡಿಸ್ಕ್ ಸಮಸ್ಯೆ ಇದ್ದವರು ಈ ಆಸನ ಮಾಡಬಾರದು.