ಮನೆ ಪ್ರವಾಸ ನೀವು ಸೋಲೋ ಟ್ರಿಪ್ ಹೋಗಲು ಬಯಸುವಿರಾದರೆ ಈ  ಸ್ಥಳಗಳಿಗೆ ಭೇಟಿ ನೀಡಿ

ನೀವು ಸೋಲೋ ಟ್ರಿಪ್ ಹೋಗಲು ಬಯಸುವಿರಾದರೆ ಈ  ಸ್ಥಳಗಳಿಗೆ ಭೇಟಿ ನೀಡಿ

0

ಒತ್ತಡದ ಕೆಲಸದ ನಡುವೆ ಬ್ರೇಕ್ ಬೇಕು ಎಂದು ಬಯಸುವವರು ಮೊದಲು ಆಯ್ಕೆ ಮಾಡಿಕೊಳ್ಳುವುದು ಪ್ರವಾಸ.

Join Our Whatsapp Group

ಫ್ಯಾಮಿಲಿ ಅಥವಾ ಸ್ನೇಹಿತರ ಜೊತೆ ಟ್ರಿಪ್ ಹೋಗುವವರು ಹೆಚ್ಚು ಮಂದಿ. ಆದರೆ ಒಂದಷ್ಟು ಮಂದಿ ಏಕಾಂಗಿಯಾಗಿ ಟ್ರಿಪ್‍’ಗೆ ಹೋಗೋಕೆ ಇಷ್ಟ ಪಡುತ್ತಾರೆ. ಅಂಥವರಿಗಾಗಿ ಈ ಲೇಖನ. ನಮ್ಮ ಕರ್ನಾಟಕದಲ್ಲಿಯೇ ಅನೇಕ ಸ್ಥಳಗಳು ಏಕಾಂಗಿ ಪ್ರವಾಸಕ್ಕೆ ಸೂಕ್ತವಾಗಿವೆ. ಅವು ಯಾವುವು ಎಂದು ತಿಳಿಯಲು ಮುಂದೆ ಓದಿ.

ಚಿತ್ರದುರ್ಗದ ಕಲ್ಲಿನ ಕೋಟೆ:

ಕೋಟೆ ನಾಡು ಚಿತ್ರದುರ್ಗ ಪ್ರವಾಸಿಗರ ಆಕರ್ಷಣೆಯ ತಾಣ. ಸೋಲೋ ಟ್ರಿಪ್ ಹೋಗೋರಿಗೆ ಇದು ಸೂಪರ್ ಸ್ಪಾಟ್. ದೇಶ, ವಿದೇಶಗಳಿಂದ ಪ್ರವಾಸಿಗರ ದಂಡು ಇಲ್ಲಿಗೆ ಬರುತ್ತದೆ. ಈ ಸುಂದರವಾದ ಸ್ಥಳವು ಬಂಡೆಗಳು, ಹಾಗೂ ಕಣಿವೆಗಳಿಂದ ಸುತ್ತುವರೆದಿದೆ. ಇಲ್ಲಿನ ‘ಕಲ್ಲಿನ ಕೋಟೆ’ಯ ಪ್ರತಿಯೊಂದು ಕಲ್ಲು ಶೌರ್ಯದಿಂದ ತುಂಬಿದ ಇತಿಹಾಸ

ಹೇಳುತ್ತದೆ. ಚಿತ್ರದುರ್ಗದ ಕೋಟೆಗೆ ಏಳು ಸುತ್ತಿನ ಕೋಟೆ ಎನ್ನುತ್ತಾರೆ. ಇಲ್ಲಿ ಸುಮಾರು 35 ರಹಸ್ಯ ಪ್ರವೇಶ ದ್ವಾರಗಳಿವೆ. ಕೋಟೆಯ ಅತ್ಯಂತ ಆಕರ್ಷಣೀಯವಾದ ಸ್ಥಳ ಒನಕೆ ಓಬವ್ವನ ಕಿಂಡಿ.

ಹಂಪಿ:

ಹಂಪಿಯು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದ್ದು, ಏಕಾಂಗಿ ಪ್ರಯಾಣಕ್ಕೆ ಅದ್ಭುತ ಐತಿಹಾಸಿಕ ಸ್ಥಳವಾಗಿದೆ. ಇದು ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪ ತುಂಗಭದ್ರಾ ನದಿಯ ದಡದಲ್ಲಿದೆ. ಇಲ್ಲಿ ಪುರಾತನ ಸ್ಮಾರಕಗಳು ಹಾಗೂ ಸುಂದರವಾದ ದೇವಾಲಯಗಳಿವೆ. ಇಲ್ಲಿ ವಿರೂಪಾಕ್ಷ ದೇವಸ್ಥಾನ, ಕಲ್ಲಿನ ರಥ,  ಲೋಟಸ್ ಪ್ಯಾಲೇಸ್ ಸೇರಿ ಅನೇಕ ಸ್ಥಳಗಳಿವೆ. ಇಲ್ಲಿ ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಸಾರುವ ಕುರುಹುಗಳಿವೆ. ಹಂಪಿಯ ಒಂದೊಂದು ಶಿಲೆಯೂ ಅದ್ಭುತ ಕತೆಯನ್ನು ಹೇಳುತ್ತವೆ.

ಬಸವ ಕಲ್ಯಾಣ:

ಬಸವಕಲ್ಯಾಣವು ಬೀದರ್ ಜಿಲ್ಲೆಯಲ್ಲಿದೆ. ಇದು ಹನ್ನೆರಡನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ನಡೆದ ಪಟ್ಟಣ. ಇದು ಧಾರ್ಮಿಕವಾಗಿಯೂ ಮಹತ್ವ ಪಡೆದ ಕ್ಷೇತ್ರ. ಇಲ್ಲಿ ಅನೇಕ ಐತಿಹಾಸಿಕ ಆಕರ್ಷಣೆಯ ಸ್ಥಳಗಳು ಹಾಗೂ ದೇವಾಲಯಗಳಿವೆ. ಕಲ್ಯಾಣ ಚಾಲುಕ್ಯರು ಇದನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದ್ದರು. ಬಸವಣ್ಣನವರು ಇಲ್ಲಿಗೆ ಸಾಮಾಜಿಕ, ಧಾರ್ಮಿಕ ಕ್ರಾಂತಿಯನ್ನು ನಡೆಸಿದರು. ನಂತರ ಕಲ್ಯಾಣ ಶರಣರ ನಾಡು, ಭಕ್ತಿಯ ಬೀಡು ಆಯಿತು. ಇಲ್ಲಿ ಜಗತ್ತಿನ ಅತಿ ಎತ್ತರದ ಬಸವಣ್ಣನವರ ಪ್ರತಿಮೆಯಿದೆ. ಕುಳಿತಿರುವ ಭಂಗಿಯಲ್ಲಿರುವ ಈ ಪ್ರತಿಮೆಯು 108 ಅಡಿಗಳಷ್ಟು ಎತ್ತರವಿದೆ. ಹಾಗೂ ಅಕ್ಕಮಹಾದೇವಿ ಸೇರಿ ಅನೇಕ ಶರಣರ ಗವಿಗಳಿವೆ. ಇಲ್ಲಿ ಕಲ್ಯಾಣ ಕೋಟೆ ಎಂತಲೂ ಕರೆಯಲ್ಪಡುವ ಹತ್ತನೇಯ ಶತಮಾನದಲ್ಲಿ ನಿರ್ಮಾಣವಾದ ಕೋಟೆಯಿದೆ.

ಬೇಲೂರು:

ಹಾಸನ ಜಿಲ್ಲೆಯ ಬೇಲೂರು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಹೊಯ್ಸಳ ಶಿಲ್ಪಕಲೆಯ ಅತ್ಯಂತ ಸುಂದರ ರೂಪಕವಾದ ಚೆನ್ನಕೇಶವ ದೇವಸ್ಥಾನದಿಂದಾಗಿ ಈ ಪಟ್ಟಣ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಹಲವು ಪುರಾತನ ದೇವಾಲಯಗಳು ಪ್ರಾಚೀನ ಶಿಲ್ಪಕಲೆ, ಕುಸುರಿ-ಕೆತ್ತನೆಯ ಕಾರ್ಯದಿಂದ ಜನರ ಮೆಚ್ಚುಗೆ ಪಡೆದಿವೆ. ರಾಜರ ಕಾಲದಲ್ಲಿ ನಿರ್ಮಾಣವಾಗಿರುವ ಶ್ರೀಮಂತ ಶಿಲ್ಪಕಲೆಯ ದೇವಾಲಯಗಳು ಅಂದಿನ ವೈಭವಕ್ಕೆ ಸಾಕ್ಷಿಯಾಗಿ ಇಂದಿಗೂ ಭವ್ಯವಾಗಿ ತಲೆಯೆತ್ತಿ ನಿಂತಿವೆ.