ಮನೆ ಆರೋಗ್ಯ ದಿನ ಫ್ರಿಡ್ಜ್’ನಲ್ಲಿಟ್ಟಿರುವ ಕೋಲ್ಡ್ ನೀರು ಕುಡಿದರೆ, ನಿಮ್ಮ ಹೃದಯಕ್ಕೆ ಪ್ರಾಬ್ಲಮ್!!

ದಿನ ಫ್ರಿಡ್ಜ್’ನಲ್ಲಿಟ್ಟಿರುವ ಕೋಲ್ಡ್ ನೀರು ಕುಡಿದರೆ, ನಿಮ್ಮ ಹೃದಯಕ್ಕೆ ಪ್ರಾಬ್ಲಮ್!!

0

ಈಗ ಬೇಸಿಗೆ ಆಗಿರುವುದರಿಂದ ನಾವು ಸಾಧ್ಯವಾದಷ್ಟು ನಮ್ಮ ದೇಹವನ್ನು ತಂಪಾಗಿ ಇಟ್ಟು ಕೊಳ್ಳಲು ನೋಡುತ್ತೇವೆ. ಈ ಸಂದರ್ಭದಲ್ಲಿ ತಂಪಾಗಿರುವ ಆಹಾರ ತಿನ್ನುವುದು ಅಥವಾ ತಂಪು ಪಾನೀಯ ಸೇವಿಸುವುದು ನಮಗೆ ಅಭ್ಯಾಸವಾಗಿರುತ್ತದೆ. ರೆಫ್ರಿಜರೇಟರ್ ನಲ್ಲಿ ನಾವು ಹಲವಾರು ಹಣ್ಣುಗಳನ್ನು ಈ ಸಲುವಾಗಿ ಇಟ್ಟಿರುತ್ತೇವೆ.

Join Our Whatsapp Group

ರೆಫ್ರಿಜರೇಟರ್ ನಿಂದ ನೇರವಾಗಿ ತಂಪಾದ ನೀರನ್ನು ತೆಗೆದುಕೊಂಡು ಕುಡಿಯುವುದರಿಂದ ಹೃದಯಕ್ಕೆ ಏನೇನು ಸಮಸ್ಯೆ ಉಂಟಾಗಲಿದೆ ಎಂದು ತಿಳಿಯೋಣ.

ಇದರಿಂದ ಹೃದಯದ ಸಮಸ್ಯೆ ಬರುವ ಸಾಧ್ಯತೆ

•       ತಂಪಾದ ಪಾನೀಯ ವನ್ನು ಬೇಸಿಗೆ ದಿನಗಳಲ್ಲಿ ಸೇವಿಸುವುದು ಅಗತ್ಯವಾಗಿದೆ. ಇದು ರೆಫ್ರಿಜರೇಟರ್ ಪಾನೀಯ ಎಂದು ಹೇಳಿದರೂ ತಪ್ಪಾಗುವುದಿಲ್ಲ.

•       ಆದರೆ ರೆಫ್ರಿಜರೇಟರ್ ನಲ್ಲಿರುವ ಅತಿಯಾದ ತಂಪಿನ ಯಾವುದೇ ಪಾನೀಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ಇದು ಹೃದಯಕ್ಕೆ ತೊಂದರೆಯಾಗು ತ್ತದೆ.

ಹೃದಯ ರೋಗಿಗಳು ಕೋಲ್ಡ್ ನೀರು ಕುಡಿಯಬಾರದು!

ಅವರು ಹೇಳುವ ಪ್ರಕಾರ ಹೃದಯ ರೋಗಿಗಳು ಅತಿಯಾಗಿ ತಂಪಾದ ನೀರನ್ನು ಕುಡಿಯಬಾರದು. ಇದು ಹೃದಯದ ಬಡಿತ ಗಳಲ್ಲಿ ಏರುಪೇರು ಉಂಟುಮಾಡುತ್ತದೆ ಮತ್ತು ಕೆಲ ವೊಮ್ಮೆ ಗಂಭೀರ ಸ್ವರೂಪದಲ್ಲಿ ಹೃದಯಘಾತವನ್ನು ತಂದು ಕೊಡುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ.

ಏಕೆ ಹೀಗಾಗುತ್ತದೆ?

•       ವೈದ್ಯಕೀಯ ಭಾಷೆಯಲ್ಲಿ ಇದನ್ನು Vasospasm ಎಂದು ಕರೆಯುತ್ತಾರೆ. ಇದರ ಪ್ರಕಾರ ರಕ್ತನಾಳಗಳು ಗಾತ್ರದಲ್ಲಿ ಚಿಕ್ಕದಾಗಿ ರಕ್ತ ಸಂಚಾರವನ್ನು ಅಡ್ಡಿಪಡಿಸುತ್ತವೆ.

•       ಕೇವಲ ಹೃದಯದ ಭಾಗದಲ್ಲಿ ಮಾತ್ರವಲ್ಲ ಕೈಗಳ ಬೆರಳುಗಳು ಮತ್ತು ಕಾಲುಗಳ ಹೆಬ್ಬೆರಳುಗಳ ಭಾಗದಲ್ಲಿ ಮತ್ತು ದೇಹದ ಇನ್ನಿತರ ಭಾಗಗಳಲ್ಲಿ ರಕ್ತ ಸಂಚಾರಕ್ಕೆ ಅಡ್ಡಿ ಉಂಟಾಗುತ್ತದೆ.

•       ತಂಪಾದ ನೀರು ಸೇವನೆಯಿಂದ ಎದೆ ನೋವು, ತಲೆ ಸುತ್ತು, ಹೃದಯ ರಕ್ತನಾಳದ ಸಮಸ್ಯೆ ಇತ್ಯಾದಿ ತೊಂದ ರೆಗಳು ಎದುರಾಗುತ್ತವೆ. ಆದರೆ ಕೈ ಬೆರಳು ಮತ್ತು ಕಾಲು ಬೆರಳುಗಳಲ್ಲಿ ಆಗುವ ತೊಂದರೆ ಚರ್ಮದ ಬಣ್ಣವನ್ನು ಬದಲಿಸುತ್ತದೆ ಮತ್ತು ಕೈಕಾಲುಗಳಲ್ಲಿ ಚುಚ್ಚಿದ ಅನು ಭವ ಉಂಟಾಗುತ್ತದೆ.

ಹಾಗಾದ್ರೆ ಯಾವ ನೀರು ಕುಡಿಯಬೇಕು?

•       ಡಾಕ್ಟರ್ ಹೇಳುವ ಪ್ರಕಾರ ಸಾಧಾರಣ ಕೊಠಡಿಯ ತಾಪಮಾನದಲ್ಲಿರುವ ನೀರನ್ನು ಕುಡಿಯುವುದು ಒಳ್ಳೆಯದು.

•       ಏಕೆಂದರೆ ಬೇಸಿಗೆ ಕಾಲದಲ್ಲಿ ದೇಹವನ್ನು ನಿರ್ಜ ಲೀಕರಣ ಆಗದಂತೆ ನೋಡಿ ಕೊಳ್ಳಬೇಕು.

•       ಸಾಕಷ್ಟು ಆಯುರ್ವೇದ ತಜ್ಞರು ಉಗುರು ಬೆಚ್ಚಗಿನ ನೀರನ್ನು ಊಟ ಆದ ನಂತರದಲ್ಲಿ ಕುಡಿಯುವುದರಿಂದ ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ ಎಂದು ಹೇಳಿದ್ದಾರೆ.

ಮೂತ್ರದ ಬಣ್ಣ

•       ಬೇಸಿಗೆಕಾಲದಲ್ಲಿ ಯಾವುದೇ ಸಂದರ್ಭದಲ್ಲಿ ಬಾಯಾರಿಕೆ ಆಗುವವರೆಗೆ ಕಾಯಬಾರದು. ಆಗಾಗ ನೀರನ್ನು ಕುಡಿಯು ತ್ತಿರಬೇಕು.

•       ಅಷ್ಟೇ ಅಲ್ಲದೆ ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ಮೂತ್ರದ ಬಣ್ಣವನ್ನು ಸಹ ಗಮನಿಸಬೇಕು. ತುಂಬಾ ಗಾಢವಾದ ಮೂತ್ರದ ಬಣ್ಣ ಇದ್ದರೆ ನೀರನ್ನು ಹೆಚ್ಚಾಗಿ ಕುಡಿಯಬೇಕು ಎಂದರ್ಥ.

ರೆಫ್ರಿಜರೇಟರ್ ನೀರಿನ ಬದಲು

ಹೊರಗಡೆ ಬಿಸಿಲು ಜಾಸ್ತಿ ಇದ್ದಾಗ ಮನೆಗೆ ಬಂದು ತಂಪಾದ ರೆಫ್ರಿಜರೇಟರ್ ನೀರು ಕುಡಿಯಬೇಕು ಎನಿಸುವುದು ಸಹಜ. ಆದರೆ ಈ ರೀತಿ ಅನಿಸಿದಾಗ ಸಾಧ್ಯವಾದಷ್ಟು ಹಣ್ಣು, ತರಕಾರಿಗಳು, ಮಜ್ಜಿಗೆ, ಸೌತೆಕಾಯಿ, ಕಲ್ಲಂಗಡಿ ಹಣ್ಣು ಇವುಗಳ ಕಡೆಗೆ ಗಮನ ಹರಿಸಿ.