ಮನೆ ಯೋಗಾಸನ ಸುಖಾಸನ

ಸುಖಾಸನ

0

ನಾನು ಒಮ್ಮೆ ಕೂಡಾ ಯೋಗಾಸನ ಮಾಡಿಲ್ಲ ಅನ್ನುವವರು ಕೂಡ ದಿನವೂ ಒಮ್ಮೆಯಾದರೂ ಮಾಡುವಂಥ ಆಸನವೇ- ಸುಖಾಸನ. ನಾವೆಲ್ಲರೂ ನೆಲದ ಮೇಲೆ ಊಟಕ್ಕೆ ಕೂರುತ್ತೇವಲ್ಲ, ಅದೇ ಸುಖಾಸನದ ಭಂಗಿ. ಹೀಗೆ ಕುಳಿತಾಗ ಮನಸ್ಸಿಗೆ ಒಂದು ರೀತಿಯ ಸಮಾಧಾನ ಆಗುತ್ತದೆ. ಹಾಗಾಗಿಯೇ ಈ ಆಸನಕ್ಕೆ ಸುಖಾಸನ ಎಂದು ಹೆಸರು ಬಂದಿದೆ. ಸಂಸ್ಕೃತದಲ್ಲಿ ಸುಖಮ್ ಎಂದರೆ ಆರಾಮ, ಸುಲಭ, ಸಂತೋಷದಾಯಕ ಇತ್ಯಾದಿ ಅರ್ಥವಿದೆ. ಸುಖಾಸನ ಮಾಡಲು ಕುಳಿತಾಗ ಮೊಣಕಾಲಿನ ಭಾಗವು,

Join Our Whatsapp Group

ಎಳೆತಕ್ಕೆ ಒಳಗಾಗುತ್ತದೆ. ಎಲ್ಲಾ ವಯೋಮಾನದವರೂ ಈ ಆಸನ ಮಾಡಬಹುದು.

ಅಭ್ಯಾಸಕ್ರಮ: ಜಮಖಾನ ಹಾಸಿದ ನೆಲದ ಮೇಲೆ ಬೆನ್ನು, ಕುತ್ತಿಗೆ ನೇರಮಾಡಿ ದಂಡಾಸನದಲ್ಲಿ ಕುಳಿತುಕೊಳ್ಳಬೇಕು. ಅನಂತರ

ಬಲಗಾಲನ್ನು ಮಡಚಬೇಕು. ಎಡಗಾಲನ್ನು ಎಡಬದಿಗೆ ಮಡಚಬೇಕು ಕೈಗಳಲ್ಲಿ ಚಿನ್ಮುದ್ರೆ ಮಾಡಿ ಬೆನ್ನು- ಕುತ್ತಿಗೆಯನ್ನು ನೇರಮಾಡಿ ಕುಳಿತುಕೊಳ್ಳಬೇಕು. ಸ್ವಲ್ಪ ಹೊತ್ತು ನಿರಾಳವಾಗಿ ಉಸಿರಾಡಿ ನಂತರ ವಿರಮಿಸಬೇಕು. ಅನಂತರ ವಿಶ್ರಾಂತಿ ಪಡೆಯಬೇಕು.

ಪ್ರಯೋಜನಗಳು:

ಸುಖಾಸನ ಮಾಡುವುದರಿಂದ ಕಾಲಿನ ನರಗಳ ಸೆಳೆತ ನಿವಾರಣೆ ಯಾ ಗುತ್ತದೆ. ಮೊಣಕಾಲುಗಳು ಬಲಗೊಳ್ಳುತ್ತವೆ. ಬೆನ್ನು ಮೂಳೆ ಗಟ್ಟಿಯಾಗುತ್ತದೆ.