ಮನೆ ಸುದ್ದಿ ಜಾಲ ಕಾವೇರಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್’ನಿಂದ 16ನೇ ಬ್ಯಾಚ್ ವಿದ್ಯಾರ್ಥಿಗಳಿಗೆ ಪದವಿ ಪುರಸ್ಕಾರ

ಕಾವೇರಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್’ನಿಂದ 16ನೇ ಬ್ಯಾಚ್ ವಿದ್ಯಾರ್ಥಿಗಳಿಗೆ ಪದವಿ ಪುರಸ್ಕಾರ

0

ಮೈಸೂರು: ಕಾವೇರಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ವತಿಯಿಂದ 16ನೇ ಬ್ಯಾಚ್ ವಿದ್ಯಾರ್ಥಿಗಳಿಗೆ ಪದವಿ ಪುರಸ್ಕಾರ ಮಾಡಲಾಯಿತು.

Join Our Whatsapp Group

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನದ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ವೆಂಕಟಗಿರಿ, ಅಧ್ಯಯನದ ಅವಧಿಯಲ್ಲಿ ಕ್ಲಿನಿಕಲ್ ಅಭ್ಯಾಸದ ಮಾತುವನ್ನು ಒತ್ತಿ ಹೇಳಿದರು.

ಎಲ್ಲಾ ಸೌಲಭ್ಯಗಳಲ್ಲಿಯೂ ಬಳಸಿಕೊಂಡು ಇಂತಹ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿರುವುದು ನಿಮಗೆ ಅಭಿನಂದನೆಗಳು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾವೇರಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಎಲ್ಲಾ ಪದವೀಧರರು ಅತಿಥಿಗಳಿಂದ ಸ್ಫೂರ್ತಿಯನ್ನು ಪಡೆಯಬೇಕು. ಆರೋಗ್ಯ ರಕ್ಷಣೆಯಲ್ಲಿ  ನಾವಿನ್ಯತೆಯನ್ನು ಮಹತ್ವದ ಬಗ್ಗೆ ವಿವರಣೆಯನ್ನು ನೀಡಿದರು ಪದವೀಧರರು ಹೆಚ್ಚು ಹೆಚ್ಚು ಸಂಶೋಧನೆಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಅಲೈಟ್ ಹೆಲ್ತ್ ಸೈನ್ಸ್ ನರ್ಸಿಂಗ್ ಮತ್ತು ಫಿಜಿಯೋಥೆರಪಿಯ ವಿವಿಧ ಶಾಖೆಗಳಿಂದ 225ಕ್ಕೂ ಹೆಚ್ಚು ಪದವೀಧರರನ್ನು ಗೌರವಿಸಲಾಯಿತು. 85 ವಿದ್ಯಾರ್ಥಿಗಳ ಡಿಸ್ಟಿಂಕ್ಷನ್ ಮತ್ತು ವಿಶ್ವವಿದ್ಯಾನಿಲಯದಲ್ಲಿ ಶ್ರೇಣಿಯನ್ನು ಪಡೆದವರಿಗೆ ಪದಕಗಳನ್ನು ವಿತರಣೆ ಮಾಡಿದರು ನಗದು ಬಹುಮಾನವನ್ನು ಸಹ ನೀಡಲಾಯಿತು.

ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಕುಲ ಸಚಿವರಾದ ಬಸವರಾಜು, ಡಾಕ್ಟರ್ ಸರಳ ಚಂದ್ರಶೇಖರ್ ಅಧ್ಯಕ್ಷರು ಸುರಕ್ಷಾ ಎಜುಕೇಶನ್ ಟ್ರಸ್ಟ್ ವ್ಯವಸ್ಥಾಪಕರು, ಕಾವೇರಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಡಾ.ಗುರುಕಾರ್ ಮಾತಾನ್, ಪ್ರೊಫೆಸರ್ ರಾಜ ಕಣ್ಣನ್, ಅರವಿಂದ್ ಪ್ರಿನ್ಸಿಪಾಲ್, ಪ್ರೊಫೆಸರ್ ಪವನ್, ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಭಾಗಿಯಾಗಿದ್ದರು.