ಲಾಸ್ ಏಂಜಲೀಸ್: ಪ್ರಸಕ್ತ ಸಾಲಿನ ಅಕಾಡೆಮಿ ಆಸ್ಕರ್ ಪ್ರಶಸ್ತಿಗಳು ಘೋಷಣೆಯಾಗಿದ್ದು, ಜಪಾನ್‌ನ ‘ಡ್ರೈವ್ ಮೈ ಕಾರ್’ಗೆ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರೆತಿದೆ.
‘ಡ್ಯೂನ್’ ಚಿತ್ರಕ್ಕೆ ಆರು ಆಸ್ಕರ್ ಪ್ರಶಸ್ತಿಗಳು ಲಭಿಸಿವೆ. ‘ಕೊಡ’ ಚಿತ್ರದಲ್ಲಿನ ಅಭಿನಯಕ್ಕಾಗಿ ‘ಟ್ರಾಯ್ ಕೊಟ್ಸೂರ್’ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರೆತಿದೆ.
ಇದರೊಂದಿಗೆ ಈ ಪ್ರಶಸ್ತಿ ಗಳಿಸಿದ ಎರಡನೇ ಕಿವುಡ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸ್ಟೀವನ್ ಸ್ಪೀಲ್‌ಬರ್ಗ್ ನಿರ್ದೇಶನದ ‘ವೆಸ್ಟ್ ಸೈಡ್’ ಚಿತ್ರದಲ್ಲಿನ ಅಭಿನಯಕ್ಕಾಗಿ ‘ಅರಿಯಾನಾ ಡಿಬೋಸ್’ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಆಸ್ಕರ್ ಪ್ರಶಸ್ತಿಗೆ ಗಳಿಸಿದ ಚಿತ್ರ ಹಾಗೂ ಕಲಾವಿದರ ವಿವರ ಇಲ್ಲಿದೆ.
ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ: ಡ್ರೈವ್ ಮೈ ಕಾರ್ (ಜಪಾನ್)
ಅತ್ಯುತ್ತಮ ಪೋಷಕ ನಟ: ಟ್ರಾಯ್ ಕೊಟ್ಸೂರ್(ಕೊಡ)
ಅತ್ಯುತ್ತಮ ಪೋಷಕ ನಟಿ: ಅರಿಯಾನಾ ಡಿಬೋಸ್ (ವೆಸ್ಟ್ ಸೈಡ್)
ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್: ಡ್ಯೂನ್
ಅತ್ಯುತ್ತಮ ಧ್ವನಿ ವಿನ್ಯಾಸ: ಡ್ಯೂನ್
ಅತ್ಯುತ್ತಮ ಸಂಕಲನ: ಡ್ಯೂನ್
ಅತ್ಯುತ್ತಮ ಛಾಯಾಗ್ರಹಣ: ಡ್ಯೂನ್
ಅತ್ಯುತ್ತಮ ಮೂಲ ಚಿತ್ರಕಥೆ: ಬೆಲ್‌ಫಾಸ್ಟ್
ಅತ್ಯುತ್ತಮ ಸಾಕ್ಷ್ಯಚಿತ್ರ: ಸಮ್ಮರ್ ಆಫ್ ಸೋಲ್
ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ: ಎನ್ಕಾಂಟೊ