ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ವಿವಿಧ ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದ್ದು, ಹಾಸನದಲ್ಲಿ ಜೆಡಿಎಸ್, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಕಾಂಗ್ರೆಸ್ ಮತ್ತು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
ಹಾಸನದಲ್ಲಿ ಜೆಡಿಎಸ್’ನ ಸ್ವರೂಪ್ ಗೆಲುವು ಸಾಧಿಸಿದ್ದಾರೆ. ಚಳ್ಳಕೆರೆ ಕ್ಷೇತ್ರದಲ್ಲಿ ಟಿ.ರಘುಮೂರ್ತಿ 47,515 ಮತಗಳ ಪಡೆದು ಸುಮಾರು 15 ಸಾವಿರ ಮತಗಳಿಂದ ಭಾರಿ ಮುನ್ನಡೆಯಲ್ಲಿ ಸಾಧಿಸಿದ್ದಾರೆ.
ಜೆಡಿಎಸ್’ನ ರವೀಶ್ ಕುಮಾರ್ 32,370 ಮತಗಳ ಪಡೆದಿದ್ದರೆ, ಬಿಜೆಪಿಯ ಅನಿಲ್ ಕುಮಾರ್ 16,835 ಮತಗಳ ಪಡೆದ ಹಿನ್ನಡೆ ಸಾಧಿಸಿದ್ದಾರೆ. ಯಲ್ಲಾಪುರ ಕ್ಷೇತ್ರದಲ್ಲಿ ಶಿವರಾಮ ಹೆಬ್ಬಾರ್ ಜಯ ದಾಖಲಿಸಿದ್ದಾರೆ.
ಒಟ್ಟಾರೆ 224 ಕ್ಷೇತ್ರಗಳ ಮತ ಎಣಿಕೆ ಭರದಿಂದ ಸಾಗಿಸಿದೆ. ಕಾಂಗ್ರೆಸ್ 199 ಕ್ಷೇತ್ರಗಳ ಮುನ್ನಡೆ ಸಾಧಿಸಿ, ಸರಳ ಬಹುಮತದತ್ತ ಸಾಗುತ್ತಿದೆ. ಆಡಳಿತಾರೂಢ ಬಿಜೆಪಿ 72 ಕ್ಷೇತ್ರಗಳ ಮತ್ತು ಜೆಡಿಎಸ್ 25 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ – 1, ಎನ್’ಸಿಪಿ – 1, ಸರ್ವೋದಯ ಕರ್ನಾಟಕ ಪಕ್ಷ ಒಂದು ಕಡೆ ಮುನ್ನಡೆಯಲ್ಲಿದ್ದು, 5 ಕ್ಷೇತ್ರಗಳಲ್ಲಿ ಪಕ್ಷೇತರರು ಮುನ್ನಡೆ ಕಾಯ್ದುಕೊಂಡಿದ್ದಾರೆ.














