ಜಪಾನಿನ ಕಾರು ತಯಾರಕರು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ಎಲೆಕ್ಟ್ರಿಕ್ ಪೋರ್ಟ್ಫೋಲಿಯೊವನ್ನು ಹೆಚ್ಚಿಸಲು ಗಮನಹರಿಸಿದ್ದಾರೆ. ಆದರೆ ಭಾರತದಲ್ಲಿ ಹೋಂಡಾ ICE ಆಧಾರಿತ ಮತ್ತು ಹೈಬ್ರಿಡ್ ಕಾರುಗಳ ಮೇಲೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವುದನ್ನು ಮುಂದುವರೆಸಿದೆ.
ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಹೋಂಡಾ ತನ್ನ ಹೊಸ ಹೋಂಡಾ e:Ny1 ಎಲೆಕ್ಟ್ರಿಕ್ ಎಸ್ ಯುವಿಯನ್ನು ಅನಾವರಣಗೊಳಿಸಿದೆ. ಈ ಹೊಸ ಹೋಂಡಾ e:Ny1 ಎಸ್ ಯುವಿಯು ಜಪಾನಿನ ಕಾರು ತಯಾರಕರ ಎರಡನೇ ಎಲೆಕ್ಟ್ರಿಕ್ ಕಾರ್ ಆಗಿದೆ. ಹೊಸ ಹೋಂಡಾ e:Ny1 ಎಲೆಕ್ಟ್ರಿಕ್ ಎಸ್ ಯುವಿಯನ್ನು ಜರ್ಮನಿಯ ಆಫೆನ್ ಬ್ಯಾಕ್ ನಲ್ಲಿ ಸಂಸ್ಥೆಯ ಯುರೋಪಿಯನ್ ಮೀಡಿಯಾ ಈವೆಂಟ್‌ನಲ್ಲಿ ಅನಾವರಣಗೊಳಿಸಿದರು.
ಯುರೋಪಿಯನ್ ಮಾರುಕಟ್ಟೆಗೆ ಹೋಂಡಾದ ಹೊಚ್ಚಹೊಸ ಎಲೆಕ್ಟ್ರಿಕ್ ಕಾರ್ ಆದ e:Ny1 ಕಾಂಪ್ಯಾಕ್ಟ್ ಎಸ್ ಯುವಿ ಆಗಿದೆ. ಇದನ್ನು ಮೊದಲು e:Ny1 ಪ್ರೊಟೊಟೈಪ್ ಎಂದು ಪ್ರದರ್ಶಿಸಲಾಯಿತು. ಇದು ಚೀನೀ ಮಾರುಕಟ್ಟೆಯಲ್ಲಿ ಲಭ್ಯವಿರುವ e:NS1 ಮತ್ತು e:NP1 ಎಂಬ ಟ್ವಿನ್ ಮಾದರಿಗಳಿಗೆ ಹೋಲುತ್ತದೆ. ಹೋಂಡಾ e:Ny1 ಪರಿಚಿತವಾಗಿದೆ, ಏಕೆಂದರೆ ಎಸ್ ಯುವಿ ಮೂಲಭೂತವಾಗಿ HR-V ಯ ಎಲೆಕ್ಟ್ರಿಕ್ ಆವೃತ್ತಿಯಾಗಿದೆ.
ಹೊಸ ಹೋಂಡಾ e:Ny1 ಎಲೆಕ್ಟ್ರಿಕ್ ಎಸ್ ಯುವಿಯು HR-V ನಂತೆ ತೋರುತ್ತಿದೆಯಾದರೂ, ಹೋಂಡಾ ತನ್ನ ಹೊಸ e:Ny1 ಎಲೆಕ್ಟ್ರಿಕ್ ಎಸ್ ಯುವಿ ಸಂಪೂರ್ಣವಾಗಿ ಹೊಸ e:N ಆರ್ಕಿಟೆಕ್ಚರ್ ಎಫ್ ಅನ್ನು ಆಧರಿಸಿದೆ ಎಂದು ಹೇಳಿದೆ. ಇದು ಕೆಲವು ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದೆ, ಡ್ರೈವ್ ಡೈನಾಮಿಕ್ಸ್ ಅನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ. ಪ್ರಮುಖ ಮುಖ್ಯಾಂಶಗಳಲ್ಲಿ ಒಂದು ಫ್ರಂಟ್ ಡ್ರೈವ್ ಆಗಿದೆ.
ಈ ಹೊಸ ಹೋಂಡಾ e:Ny1 ಎಲೆಕ್ಟ್ರಿಕ್ ಎಸ್ ಯುವಿಯು 68.8 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಎಸ್ ಯುವಿಯು ತ್ರೀ-ಇನ್-ಒನ್ ಇಂಟಿಗ್ರೇಟೆಡ್ ಪವರ್ ಡ್ರೈವ್ ಯೂನಿಟ್ ಅನ್ನು ಹೊಂದಿದ್ದು ಅದು 201 hp ಮತ್ತು 310 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು WLTP ಪ್ರಕಾರ, ಹೋಂಡಾ e:Ny1 ಎಲೆಕ್ಟ್ರಿಕ್ ಎಸ್ ಯುವಿಯು 412 ಕಿ.ಮೀ ರೇಂಜ್ ಅನ್ನು ನೀಡುತ್ತದೆ.
ಇನ್ನು ಈ ಹೋಂಡಾ e:Ny1 ಎಲೆಕ್ಟ್ರಿಕ್ ಎಸ್ ಯುವಿಯು ಕೇವಲ 45 ನಿಮಿಷಗಳಲ್ಲಿ 10% ರಿಂದ 80% ವರೆ ಚಾರ್ಜ್ ಆಗುತ್ತದೆ. ಈ ಹೊಸ ಎಸ್ ಯುವಿಯು ಬಾಡಿ ರಚನೆ ಮತ್ತು ಅಂಡರ್-ಫ್ಲೋರ್ ಏರೋಡೈನಾಮಿಕ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಎಲ್ಲಾ ವೈಶಿಷ್ಟ್ಯಗಳು ಎಸ್ ಯುವಿ ಚಾಲನೆ ಮಾಡುವಾಗ ಬಳಕೆದಾರರಿಗೆ ಹೆಚ್ಚಿನ ವಿಶ್ವಾಸವನ್ನು ಖಚಿತಪಡಿಸುತ್ತದೆ ಮತ್ತು ಪ್ರಯಾಣವನ್ನು ಹೆಚ್ಚು ಮೋಜಿನ ಅನುಭವವನ್ನು ನೀಡುತ್ತದೆ. ಹೋಂಡಾ e:Ny1 ಗಾಗಿ ಹೊಸದಾಗಿ ಅಭಿವೃದ್ಧಿಪಡಿಸಲಾದ ಚಾಸಿಸ್ ಅನ್ನು ಒಳಗೊಂಡಿದೆ.
ಹೆಚ್ಚಿನ ಆಕರ್ಷಕ ಸ್ಟೀಲ್ ಬಳಕೆಯಿಂದ ಇದನ್ನು ಮಾಡಲಾಗಿದೆ. ಹೊಸ ಪ್ಲಾಟ್ ಫಾರ್ಮ್ ಮತ್ತು ಚಾಸಿಸ್ ನೊಂದಿಗೆ ಬರುತ್ತಿದೆ. ಇದು HR-V ಯಿಂದ ಹೇಗೆ ಭಿನ್ನವಾಗಿದೆ ಎಂಬುದರ ವಿಷಯದಲ್ಲಿ, ಹೋಂಡಾ e:Ny1 ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್ ಯುವಿ ಹೊಸ ಹೆಡ್‌ಲ್ಯಾಂಪ್‌ಗಳು, ಗ್ರಿಲ್ ಮತ್ತು ಹೊಸ ಬಂಪರ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಎಸ್ ಯುವಿಯು ಅಲಾಯ್ ವ್ಹೀಲ್ ಗಳ ವಿಶಿಷ್ಟ ಸೆಟ್ ಅನ್ನು ಸಹ ಪಡೆಯುತ್ತದೆ.
ಇನ್ನು ಚಾರ್ಜಿಂಗ್ ಫ್ಲಾಪ್ ಮತ್ತು ಸ್ಟೀರಿಂಗ್ ವೀಲ್ ನಲ್ಲಿ ಬಿಳಿ ಬಣ್ಣದ ‘H’ ಲೋಗೋದೊಂದಿಗೆ ನೋಡಬಹುದಾದಂತೆ ಬ್ರ್ಯಾಂಡಿಂಗ್ ಅಂಶಗಳು ಸಹ ಹೊಸದು. ಇದು ಹೋಂಡಾದ ಎಲೆಕ್ಟ್ರಿಕ್ ಕಾರುಗಳಿಗೆ ಹೊಸ ಗುರುತಾಗಿದೆ. ಹೋಂಡಾ e:Ny1 ಎಲೆಕ್ಟ್ರಿಕ್ ಎಸ್ ಯುವಿಯು ಲೋಗೋ ಹೊಂದಿರುವ ಟೈಪ್ R ರೂಪಾಂತರಗಳಿಗೆ ಹೋಂಡಾ ಇದೇ ವಿಧಾನವನ್ನು ಅನುಸರಿಸುತ್ತದೆ. ಅದೇ ರೀತಿ, ಹೋಂಡಾ ಹೈಬ್ರಿಡ್ ಕಾರುಗಳು ನೀಲಿ ಬಣ್ಣದ ಹಿನ್ನೆಲೆಯ ಎಚ್ ಲೋಗೋವನ್ನು ಹೊಂದಿವೆ. ಮತ್ತೊಂದು ವಿಶಿಷ್ಟ ಅಂಶವೆಂದರೆ ಹಿಂಭಾಗದಲ್ಲಿ ‘ಹೊಂಡಾ’ ಬ್ಯಾಡ್ಜಿಂಗ್‌ಗಾಗಿ ಹೊಸ ಟೈಪ್ ಫೇಸ್.














