ಮನೆ ರಾಜ್ಯ ಬೇಸಿಗೆ ಶಿಬಿರಗಳಿಂದ ಪಠ್ಯದಾಚೆಗಿನ ಜ್ಞಾನಶಾಖೆ ಪರಿಚಯ: ಸಜಗೌ

ಬೇಸಿಗೆ ಶಿಬಿರಗಳಿಂದ ಪಠ್ಯದಾಚೆಗಿನ ಜ್ಞಾನಶಾಖೆ ಪರಿಚಯ: ಸಜಗೌ

0

ಮೈಸೂರು:ಬಹುಮುಖಿ ಸಾಂಸ್ಕೃತಿಕ ಚಟುವಟಿಕೆಗಳನ್ನು ತನ್ನೊಡಲಲ್ಲಿ ಹೊಂದಿರುವ ಬೇಸಿಗೆ ಶಿಬಿರಗಳು ಮಕ್ಕಳಿಗೆ ಶಾಲಾ ಪಠ್ಯದ ಆಚೆಗಿನ ಜ್ಞಾನಶಾಖೆಗಳನ್ನು ಪರಿಚಯಿಸುತ್ತವೆ ಎಂದು ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಅಭಿಪ್ರಾಯಪಟ್ಟರು.

Join Our Whatsapp Group


ನಗರದ ಕುವೆಂಪು ರಂಗಮಂದಿರದಲ್ಲಿ ಅದಮ್ಯ ರಂಗಶಾಲೆಯ ವತಿಯಿಂದ ನಡೆದ ‘ಬಾಲಂಗೋಚಿ’ ಚಿಣ್ಣರ ಬೇಸಿಗೆ ಶಿಬಿರದ ಸಮಾರೋಪ ಹಾಗೂ ಮಕ್ಕಳ ನಾಟಕ ಪ್ರದರ್ಶನದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಮಕ್ಕಳು ಇಂತಹ ಬೇಸಿಗೆ ಶಿಬಿರಗಳ ಮೂಲಕ ವಿಶಾಲ ಮನೋಭಾವನೆಯೊಂದಿಗೆ ಸಹಬಾಳ್ವೆಯ ಗುಣ ಕಲಿಯುತ್ತಾರೆ ಎಂದರು.
ಪೋಷಕರು ತಮ್ಮ ಮಕ್ಕಳನ್ನು ಕೇವಲ ಶಾಲೆಯ ಪಠ್ಯ, ಅದರ ಓದಿಗೆ ಸೀಮಿತಗೊಳಿಸಬಾರದು. ಅವರಲ್ಲಿನ ಸುಪ್ತ ಪ್ರತಿಭೆ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ, ಅವರ ವ್ಯಕ್ತಿತ್ವ ವಿಕಾಸವಾಗ
ಬೇಕಾದರೆ ಸೃಜನಶೀಲ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸುವ ವಾತಾವರಣ ಕಲ್ಪಿಸಬೇಕು ಎಂದು ಸಲಹೆ ನೀಡಿದರು.
ಕರೋನ‌ ಕಾಲದ ಜಡತೆ,ಏಕಾತನತೆ, ಓದಿನ ಒತ್ತಡ ತೊಡೆದು ಹಾಕಿ, ಮಕ್ಕಳಲ್ಲಿ ಏಕಾಗ್ರತೆ ಮತ್ತು ಚೈತನ್ಯಶೀಲತೆ ತುಂಬಿ, ಮಾನವೀಯ ಮೌಲ್ಯಗಳನ್ನು ಬೆಳೆಸಿ, ಸಾಂಸ್ಕೃತಿಕ ವ್ಯಕ್ತಿತ್ವ ರೂಪುಗೊಳ್ಳಲು ಬೇಸಿಗೆ ಶಿಬಿರಗಳು ಹೆದ್ದಾರಿಗಳಾಗಿವೆ. ಇಂತಹ‌ ಶಿಬಿರಗಳಲ್ಲಿ ತೊಡಗುವಂತೆ ಪೋಷಕರು ಉತ್ತೇಜನ ಕೊಡಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ.ಡಿ.ಕೆ.ರಾಜೇಂದ್ರ ಮಾತನಾಡಿ, ಮಕ್ಕಳಲ್ಲಿರುವ ಸಾಹಿತ್ಯ, ಸಂಗೀತ, ರಂಗಶಿಕ್ಷಣ, ಕ್ರೀಡಾಸಕ್ತಿಯನ್ನು ಪೋಷಕರು ಗುರುತಿಸಿ, ಅದಕ್ಕನುಗುಣವಾಗಿ ಅವರಲ್ಲಿ ಆಂತರಿಕವಾಗಿ ಹುದುಗಿರುವ ಪ್ರತಿಭೆಯನ್ನು ವಿಕಾಸಗೊಳಿ
ಸುವಂತಹ ಶಿಕ್ಷಣ ಕೊಡಿಸಲು ಪೋಷಕರು ಮುಂದಾಗಬೇಕು ಎಂದರು.
ಮಕ್ಕಳನ್ನು ವರ್ಷವಿಡೀ ಶಾಲೆಗೆ ಕಳುಹಿಸುವುದು, ಅಮೇಲೆ ಮನೆಯಲ್ಲಿ ನಾಲ್ಕು ಗೋಡೆ ಮಧ್ಯೆ ಕೂಡಿ ಹಾಕಿ ಓದಲು ಕೂರಿಸುವುದು, ಹೆಚ್ಚಿನ ಅಂಕಗಳ ಗಳಿಸುವ ಬಗ್ಗೆ ಒತ್ತಾಯ ಹೇರುವುದರತ್ತ ಮಾತ್ರ ಪೋಷಕರು ಗಮನಹರಿಸುತ್ತಾರೆ ಹೊರತು, ಅವರ ಆಸಕ್ತಿ ಏನೆಂಬುದನ್ನು ತಿಳಿಯುವ ಪ್ರಯತ್ನ ಮಾಡುವುದಿಲ್ಲ. ಇದರಿಂದ ಮಕ್ಕಳಲ್ಲಿನ ಬೇರೆ ಬೇರೆ ಕ್ಷೇತ್ರದ ಆಸಕ್ತಿ ನಶಿಸುತ್ತಿದೆ ಎಂದು ಅವರು ವಿಷಾದಿಸಿದರು.
ವೇದಿಕೆಯಲ್ಲಿ ದಕ್ಷ ಪದವಿ ಕಾಲೇಜಿನ ಅಧ್ಯಕ್ಷರಾದ ಡಾ.ಬಿ.ಜಯಚಂದ್ರ ರಾಜು, ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ಅಧ್ಯಕ್ಷೆ ಹೆಚ್.ಎಲ್. ಯುಮುನಾ, ಅದಮ್ಯ ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ, ಸಾಹಿತಿಗಳಾದ ಟಿ. ಲೋಕೇಶ್ ಹುಣಸೂರು, ಡಾ.ಬಿ. ಬಸವರಾಜು, ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಕೆ.ಎಸ್. ಸತೀಶ್ ಕುಮಾರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಕ್ಕಳಿಂದ ರಂಗಗೀತೆಗಳ ಗಾಯನ, ಜಾನಪದ ಗೀತೆಗಳಿಗೆ ನೃತ್ಯ, ಡಾ.ಎಚ್.ಎಸ್. ವೆಂಕಟೇಶ್ ಮೂರ್ತಿ ರಚನೆಯ ‘ಕಂಸಾಯಣ’ ಹಾಗೂ ಮೇಳೆಹಳ್ಳಿ ದೇವರಾಜ್ ರಚನೆಯ ‘ಗಡಿಬಿಡಿ ರಾಜ’ ಎಂಬ ಮಕ್ಕಳ ನಾಟಕ ಪ್ರದರ್ಶನ ನಡೆಯಿತು. ಈ ಎಲ್ಲಾ ಕಾರ್ಯಕ್ರಮಗಳು ರಂಗಮಂದಿ
ರದಲ್ಲಿ ಕಿಕ್ಕಿರಿದಿದ್ದ ಪೋಷಕರು ಮತ್ತು ಪ್ರೇಕ್ಷಕರ ಮನ ಸೆಳೆದು ರಂಜಿಸುವಲ್ಲಿ ಯಶಸ್ವಿಯಾದವು.