ಮನೆ ಅಪರಾಧ ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತಿದ್ದ ಹಡಗಿನಲ್ಲಿ ಸಿಕ್ಕ ಡ್ರಗ್ಸ್​ ಮೌಲ್ಯ ಬರೋಬ್ಬರಿ 25 ಸಾವಿರ ಕೋಟಿ ರೂ

ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತಿದ್ದ ಹಡಗಿನಲ್ಲಿ ಸಿಕ್ಕ ಡ್ರಗ್ಸ್​ ಮೌಲ್ಯ ಬರೋಬ್ಬರಿ 25 ಸಾವಿರ ಕೋಟಿ ರೂ

0

ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತಿದ್ದ ಹಡಗೊಂದನ್ನು ನಾರ್ಕೋಟಿಕ್ಸ್​ ಕಂಟ್ರೋಲ್ ಬ್ಯೂರೋ ವಶಪಡಿಸಿಕೊಂಡಿದ್ದು ಅದರಲ್ಲಿದ್ದುದು 12 ಸಾವಿರ ಕೋಟಿ ರೂ ಡ್ರಗ್ಸ್​ ಅಲ್ಲ ಬದಲಾಗಿ 25 ಸಾವಿರ ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು ಎನ್ನುವ ವಿಚಾರ ಬೆಳಕಿಗೆ ಬಂದಿದೆ.

Join Our Whatsapp Group

ಎನ್‌’ಸಿಬಿ ಅಧಿಕಾರಿಗಳ ಪ್ರಕಾರ, ಎನ್‌’ಸಿಬಿ ಮತ್ತು ಭಾರತೀಯ ನೌಕಾಪಡೆ ವಶಪಡಿಸಿಕೊಂಡ ಹೈ-ಪ್ಯೂರಿಟಿ ಮೆಥಾಂಫೆಟಮೈನ್‌ನ’ ಎಣಿಕೆ ಪೂರ್ಣಗೊಂಡಿದೆ. ಎನ್‌’ಸಿಬಿಯಿಂದ ಪಡೆದ ಅಧಿಕೃತ ಮಾಹಿತಿಯ ಪ್ರಕಾರ ಒಟ್ಟು ವಶಪಡಿಸಿಕೊಳ್ಳುವಿಕೆಯು 2,525 ಕೆಜಿ ಎಂದು ದೃಢೀಕರಿಸಲ್ಪಟ್ಟಿದೆ ಮತ್ತು ಇದರ ಮೌಲ್ಯ 25,000 ಕೋಟಿ ರೂಪಾಯಿಗಳು.

23 ಗಂಟೆಗಳಲ್ಲಿ ಗಣತಿ ಕಾರ್ಯ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಉನ್ನತ ದರ್ಜೆಯ ಮೆಥಾಂಫೆಟಮೈನ್ ಆಗಿರುವುದರಿಂದ ಮೌಲ್ಯ ಹೆಚ್ಚಾಗಿದೆ. ವಶಪಡಿಸಿಕೊಂಡ ಡ್ರಗ್ಸ್ 134 ಚೀಲಗಳಲ್ಲಿತ್ತು. ಮೆಥಾಂಫೆಟಮೈನ್ ಅನ್ನು ತಲಾ ಒಂದು ಕಿಲೋ ಪ್ಯಾಕೆಟ್‌’ಗಳಲ್ಲಿ ಇರಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಬಂಧ ಈಗಾಗಲೇ ಓರ್ವ ಶಂಕಿತ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಲಾಗಿದೆ.

ವಶಪಡಿಸಿಕೊಂಡ ವಿವರಗಳನ್ನು ನೀಡಿದ ಎನ್‌’ಸಿಬಿ ಉಪ ಮಹಾನಿರ್ದೇಶಕ (ಕಾರ್ಯಾಚರಣೆ) ಸಂಜಯ್ ಕುಮಾರ್ ಸಿಂಗ್, ಇದನ್ನು ಆಪರೇಷನ್ ಸಮುದ್ರಗುಪ್ತ ಭಾಗವಾಗಿ ನಡೆಸಲಾಗಿದೆ ಎಂದು ಹೇಳಿದರು.