ಮನೆ ಕಾನೂನು ಭಾರತೀಯ ಸ್ಪರ್ಧಾ ಆಯೋಗದ ಅಧ್ಯಕ್ಷರಾಗಿ ರವನೀತ್ ಕೌರ್ ನೇಮಕ

ಭಾರತೀಯ ಸ್ಪರ್ಧಾ ಆಯೋಗದ ಅಧ್ಯಕ್ಷರಾಗಿ ರವನೀತ್ ಕೌರ್ ನೇಮಕ

0

ಅಶೋಕ್ ಕುಮಾರ್ ಗುಪ್ತಾ ಅವರು ಕಳೆದ ವರ್ಷ ಅಕ್ಟೋಬರ್’ನಲ್ಲಿ ನಿವೃತ್ತರಾದ ನಂತರ ಸಿಸಿಐ ಅಧ್ಯಕ್ಷ ಹುದ್ದೆ ಖಾಲಿ ಇತ್ತು.

Join Our Whatsapp Group

ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ನೂತನ ಅಧ್ಯಕ್ಷರನ್ನಾಗಿ 1988ರ ಪಂಜಾಬ್ ಕೇಡರ್ ಐಎಎಸ್ ಅಧಿಕಾರಿ ರವನೀತ್ ಕೌರ್ ಅವರನ್ನು ಕೇಂದ್ರ ಸರ್ಕಾರ ಸೋಮವಾರ ನೇಮಿಸಿದೆ.

ಕೌರ್ ಪ್ರಸ್ತುತ ಚಂಡೀಗಢದಲ್ಲಿ ಕಂದಾಯ, ಪುನರ್ವಸತಿ ಹಾಗೂ ವಿಪತ್ತು ನಿರ್ವಹಣಾ ಇಲಾಖೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಹಣಕಾಸು ಆಯುಕ್ತರಾಗಿದ್ದಾರೆ.

ಮೇ 15 ರ ಆದೇಶದ ಪ್ರಕಾರ ಕೌರ್ ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಐದು ವರ್ಷಗಳವರೆಗೆ ಅಥವಾ ಅವರಿಗೆ 65 ವರ್ಷವಗಳಾಗುವವರೆಗೆ ಇಲ್ಲವೇ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಹುದ್ದೆಯಲ್ಲಿರುತ್ತಾರೆ.

ಅಶೋಕ್ ಕುಮಾರ್ ಗುಪ್ತಾ ಅವರು ಕಳೆದ ವರ್ಷ ಅಕ್ಟೋಬರ್ ನಲ್ಲಿ ನಿವೃತ್ತರಾದ ನಂತರ ಸಿಸಿಐ ಅಧ್ಯಕ್ಷ ಹುದ್ದೆ ಖಾಲಿ ಇತ್ತು. ಸಂಗೀತಾ ವರ್ಮಾ ಹಂಗಾಮಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.