ಮನೆ ಕ್ರೀಡೆ IPL 2023: ಸ್ಟೋಯಿನಿಸ್ ಸಿಡಿಲಬ್ಬರದ ಆಟಕ್ಕೆ ಧೂಳಿಪಟವಾದ ಮುಂಬೈ ಇಂಡಿಯನ್ಸ್

IPL 2023: ಸ್ಟೋಯಿನಿಸ್ ಸಿಡಿಲಬ್ಬರದ ಆಟಕ್ಕೆ ಧೂಳಿಪಟವಾದ ಮುಂಬೈ ಇಂಡಿಯನ್ಸ್

0

ಲಕ್ನೋ: ಆರಂಭಿದಲ್ಲಿ ವಿಕೆಟ್ ಕಳೆದುಕೊಂಡು ಆಘಾತ ಸಿಲುಕಿದ ತಂಡಕ್ಕೆ ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್ ತಂಡಕ್ಕೆ ಆಸರೆಯಾದರು.

ಪ್ಲೇ ಆಫ್ ಪ್ರವೇಶದ ಕನಸಿನ ಹಿನ್ನೆಲೆಯಲ್ಲಿ ಮಂಗಳವಾರದ ಐಪಿಎಲ್ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 3 ವಿಕೆಟ್ ಗೆ 177 ರನ್ ಗಳಿಸಿತ್ತು.

Join Our Whatsapp Group

ಲಕ್ನೋ ಕೈಲ್ ಮೇಯರ್ ಗೈರಲ್ಲಿ ಆಟ ಆರಂಭವಾಗಿದ್ದು, ಜೇಸನ್ ಬೆಹ್ರೆಂಡರ್ಫ್ ತಮ್ಮ ದ್ವಿತೀಯ ಓವರ್ ನಲ್ಲಿ ಮೊದಲೆರಡು ಎಸೆತಗಳಲ್ಲಿ ದೀಪಕ್ ಹೂಡಾ (5) ಮತ್ತು ಪ್ರೇರಕ್ ಮಂಕಡ್ (0)ವಿಕೆಟ್ ಪೆಡದರು.ಪವರ್ ಪ್ಲೇ ಅಂತ್ಯಕ್ಕೆ ಲಕ್ನೋ 2 ವಿಕೆಟಿಗೆ 35 ರನ್ ಗಳಿಸಿತು.

7ನೇ ಓವರ್ ನ ಮೊದಲ ಎಸೆತದಲ್ಲೇ ಪೀಯೂಷ್ ಚಾವ್ಲಾ. ಕ್ವಿಂಟನ್ ಡಿ ಕಾಕ್ (16)ಗಳಿಸಿ ಪೆವಿಲಿಯನ್ ಕೆಡೆ  ಮುಖ ಮಾಡಿದರು. 35ಕ್ಕೆ 3 ವಿಕೆಟ್ ಬಿತ್ತು. ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ನಾಯಕ ಕೃಣಾಲ್ ಪಾಂಡ್ಯ ಮತ್ತು ಮಾರ್ಕಸ್ ಸ್ಟೋಯಿನಿಸ್ ಜೊತೆಯಾಟದಲ್ಲಿ    ಲಕ್ನೋ ತಂಡವನ್ನು 117ಕ್ಕೆ ತಲುಪಿಸಿದರು.

ನಾಯಕನಾಗಿ ಕಣಕ್ಕಿಳಿದ ಅವರು 42 ಎಸೆತಗಳಿಂದ 49 ರನ್ ಸಿಡಿಸಿದರು. ಆಗ ಕ್ರುನಾಲ್ ಪಾಂಡ್ಯ ಇಂಜೂರಿಯಾಗಿ  ಹೊರ ಹೋದರು.

3 ಓವರ್ ಗಳಲ್ಲಿ. ಈ ಅವಧಿಯಲ್ಲಿ 54 ರನ್ ಹರಿದು ಬಂತು. ಇದಕ್ಕೆ ಕಾರಣ, ಸ್ಟೋಯಿನಿಸ್ ಅವರ ಸಿಡಿಲಬ್ಬರದ ಬ್ಯಾಟಿಂಗ್. ಕ್ರಿಸ್ ಜೋರ್ಡನ್ ಅವರ 18ನೇ ಓವರ್ನಲ್ಲಿ ಸ್ಟೋಯಿನಿಸ್ 24 ರನ್ ಚಚ್ಚಿದರು. 2 ಸಿಕ್ಸರ್ ಹಾಗೂ 3 ಬೌಂಡರಿಗಳನ್ನು ಇದು ಒಳಗೊಂಡಿತ್ತು. ಬೆಹ್ರೆಂಡರ್ಫ್  ಅವರ 19ನೇ ಓವರ್ನಲ್ಲಿ ಮತ್ತು ಆಕಾಶ್ ಮಧ್ವಾಲ್ ಅವರ ಅಂತಿಮ ಓವರ್ ನಲ್ಲಿ ತಲಾ 15 ರನ್ ಹರಿದು ಬಂತು. ಆರಂಭದಲ್ಲಿ ಅಮೋಘ ಹಿಡಿತ ಸಾಧಿಸಿದ್ದ ಮುಂಬೈ ಬೌಲರ್ ಕೊನೆಯ ಹಂತದಲ್ಲಿ ಪಂದ್ಯವನ್ನು ಕೈಚೆಲ್ಲಿದರು.