ದೆಹಲಿ: ದೆಹಲಿಯ ಜಾಮಾ ಮಸೀದಿ ಬಳಿ ದುಷ್ಕರ್ಮಿಗಳು ಗುಂಡು ಹಾರಿಸಿ ಯುವಕನನ್ನು ಹತ್ಯೆ ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಅವರು ಚಾವ್ರಿ ಬಜಾರ್ ನಿವಾಸಿ ಸಮೀರ್ ಎಂದು ಗುರುತಿಸಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಮಸೀದಿಯ ಗೇಟ್ ನಂಬರ್ 1ರ ಬಳಿ ಹಲವು ಸುತ್ತು ಗುಂಡು ಹಾರಿಸಲಾಗಿದೆ. ಈ ಗುಂಡಿನ ದಾಳಿಯಲ್ಲಿ ಸಮೀರ್ ಗೆ ಗುಂಡು ತಗುಲಿದೆ. ಸಮೀರ್ ಆ ಪ್ರದೇಶದ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು, ಕೆಲವು ಕಿಡಿಗೇಡಿಗಳು ಹೋಟೆಲ್ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಜಗಳದ ವೇಳೆ ಸಮೀರ್ ಮಧ್ಯ ಪ್ರವೇಶಿಸಿದ್ದರು, ಆದರೆ ದುಷ್ಕರ್ಮಿಗಳು ಅಲ್ಲಿಯೇ ಗುಂಡು ಹಾರಿಸಲು ಶುರು ಮಾಡಿದ್ದರು. ಗಾಯಗೊಂಡಿದ್ದ ಸಮೀರ್ ನನ್ನು ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.
ಹಲವು ಸುತ್ತುಗಳ ಗುಂಡು ಹಾರಿಸಿ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.














