ವಿಜಯಪುರ: ಮದ್ಯ ಸೇವಿಸಿ ನಿರ್ಲಕ್ಷದಿಂದ ಕಾರು ಚಲಾಯಿಸಿದ್ದರಿಂದ ಆಟೋ ಪಲ್ಟಿಯಾಗಿದ್ದು, ಕುಪಿತ ಪ್ರಯಾಣಿಕ ಮಹಿಳೆ ಕಾರು ಚಾಲಕನಿಗೆ ಚಪ್ಪಲಿಯಿಂದ ಹೊಡೆದಿರುವ ಘಟನೆ ನಗರದಲ್ಲಿ ಜರುಗಿದೆ.
ನಗರದ ಸ್ಟೇಷನ್ ರಸ್ತೆಯಲ್ಲಿ ಭಾನುವಾರ ರಾತ್ರಿ ಮದ್ಯ ಸೇವಿಸಿದ್ದ ಚಾಲಕ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ್ದರಿಂದ ಎರಡು ಆಟೋ, ಒಂದು ಬೈಕ್ ಮಧ್ಯೆ ಅಪಘಾತ ಸಂಭವಿದ್ದು, ಇದರಲ್ಲಿ ಒಂದು ಆಟೋ ಪಟ್ಟಿಯಾಗಿದೆ.
ಪಲ್ಟಿಯಾದ ಅಟೋದಲ್ಲಿದ್ದ ಮಹಿಳೆಯಿಂದ ಕೋಪಗೊಂಡು ಕಾರು ಚಾಲಕನಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ.
ಮಹಿಳೆ ಕಾರು ಚಾಲಕನಿಗೆ ಚಪ್ಪಲಿಯಿಂದ ಹೊಡೆಯುವ ವಿಡಿಯೊ ಇದೀಗ ವೈರಲ್ ಆಗಿದೆ. ಕಾರು ಚಾಲಕನನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.














