ಮನೆ ಪ್ರಕೃತಿ ದಾವಣಗೆರೆಯಲ್ಲಿನ ಈ ಪ್ರವಾಸಿ ಸ್ಥಳಗಳನ್ನು ಮಿಸ್ ಮಾಡ್ಕೋಬೇಡಿ

ದಾವಣಗೆರೆಯಲ್ಲಿನ ಈ ಪ್ರವಾಸಿ ಸ್ಥಳಗಳನ್ನು ಮಿಸ್ ಮಾಡ್ಕೋಬೇಡಿ

0

ದಾವಣಗೆರೆ ಬೆಂಗಳೂರಿನಿಂದ ಸುಮಾರು 264 ಕಿ.ಮೀ ದೂರದಲ್ಲಿದ್ದರೆ, ಮೈಸೂರಿನಿಂದ 348 ಕಿ,ಮೀ ದೂರದಲ್ಲಿದೆ. ದಾವಣಗೆರೆಯಲ್ಲಿ ದೋಣಿ ವಿಹಾರ, ಸರೋವರ, ಪ್ರಕೃತಿ ನಡಿಗೆ, ಐತಿಹಾಸಿಕ ದೇವಾಲಯಗಳು ಸೇರಿದಂತೆ ಇನ್ನು ಸಾಕಷ್ಟು ಪ್ರವಾಸಿ ಆಕರ್ಷಣೆಗಳಿವೆ.

Join Our Whatsapp Group

ರಜಾ ದಿನಗಳಲ್ಲಿ ಅಥವಾ ವಾರಾಂತ್ಯದ ಸಮಯದಲ್ಲಿ ನೀವು ದಾವಣಗೆರೆಯ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಬಹುದು. ಟ್ರೆಕ್ಕಿಂಗ್ ಮಾಡಲು ಬಯಸುವ ಸಾಹಸಿಗಳಿಗೆ ಹಾಗು ಪ್ರಕೃತಿಯನ್ನು ಆರಾಧಿಸುವ ಮಂದಿಗೆ ಉಸಿರುಕಟ್ಟುವ ಆಕರ್ಷಣೆಗಳಿವೆ. ಪ್ರವಾಸಿಗರು ವಿಶ್ರಾಂತಿ ಹಾಗು ಅನೇಕ ಮನರಂಜನಾ ಚಟುಚಟಿಕೆಗಳನ್ನು ಇಲ್ಲಿ ಆನಂದಿಸಬಹುದು. ಹಾಗಾದರೆ ದಾವಣಗೆರೆಯಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯಿರಿ.

ಕುಂದುವಾಡ ಕೆರೆ

ದಾವಣಗೆರೆಯ ಆಹ್ಲಾದಕರವಾದ ಸರೋವರ ಅಥವಾ ಕೆರೆಗಳಲ್ಲಿ ಈ ಕುಂದುವಾಡ ಕೆರೆಯು ಒಂದಾಗಿದೆ. 32 ಎಕರೆ ಪ್ರದೇಶದಲ್ಲಿ ಹರಡಿರುವ ಈ ಸರೋವರವು ನಗರದ ಪ್ರಮುಖ ಪ್ರವಾಸಿ ಆಕರ್ಷಣೆಯು ಹೌದು. ಕುಟುಂಬದ ಜೊತೆ ಪಿಕ್ನಿಕ್ ಕೈಗೊಳ್ಳಲು ಇದು ಪರ್ಫೆಕ್ಟ್ ತಾಣವಾಗಿದೆ. ಸರೋವರವು ಶ್ರೀಮಂತ ಹಸಿರಿನ ಭೂದೃಶ್ಯಗಳಿಂದ ಹೆಸರುವಾಸಿಯಾಗಿದ್ದು, ನೆಮ್ಮದಿಯ ನಡಿಗೆ ಹಾಗು ದೋಣಿ ವಿಹಾರವನ್ನು ಸಂದರ್ಶಕರು ಆನಂದಿಸಬಹುದು.

ಬೀದಿ ಬದಿಯ ಅಂಗಡಿಗಳಲ್ಲಿ ಬಗೆ ಬಗೆಯ ಸ್ಥಳೀಯ ತಿಂಡಿಗಳು ದೊರೆಯುತ್ತವೆ. ಅವುಗಳನ್ನು ಸವಿಯುತ್ತಾ ಸಂಜೆಯ ಸುತ್ತಾಟವನ್ನು ಮುಂದುವರೆಸಬಹುದು.

ಬಾತಿ ಗುಡ್ಡ

ದಾವಣಗೆರೆಯಲ್ಲಿ ನೀವು ಫೋಟೋಶೂಟ್ ಮಾಡಿಸಿಕೊಳ್ಳಲು ಸ್ಥಳದ ಹುಡುಕಾಟದಲ್ಲಿದ್ದರೆ ಈ ಬಾತಿ ಗುಡ್ಡಕ್ಕೆ ಭೇಟಿ ನೀಡಿ. ಮುಖ್ಯವಾಗಿ ಇಲ್ಲಿಗೆ ಪ್ರಕೃತಿಯ ಆಸಕ್ತರು ಹಾಗು ಸಾಹಸ ಪ್ರಿಯರು ಭೇಟಿ ನೀಡಲೇಬೇಕಾದ ತಾಣವಾಗಿದೆ. ವಿಶಾಲವಾದ ಪ್ರದೇಶದಲ್ಲಿ ಎತ್ತರದ ಮರಗಳಿಂದ ಸುತ್ತುವರೆದಿರುವ ಬೆಟ್ಟವು ಪ್ರದೇಶದ ಅದ್ಭುತ ನೋಟಗಳನ್ನು ಒದಗಿಸುತ್ತದೆ. ಹಲವಾರು ಜಾತಿಯ ಪಕ್ಷಿಗಳು ಇಲ್ಲಿ ಕಂಡುಬರುತ್ತವೆ. ಪಕ್ಷಿವೀಕ್ಷಣೆಯನ್ನು ಆನಂದಿಸಲು ಅಥವಾ ಛಾಯಾಗ್ರಹಣಕ್ಕೆ ಬಾತಿ ದುಡ್ಡಕ್ಕೆ ಬರಲೇಬೇಕು.

ಶಾಂತಿ ಪ್ರಿಯರಿಗೆ ಹಾಗು ಟ್ರೆಕ್ಕಿಂಗ್ ನಂತಹ ಸಾಹಸಕ್ಕೂ ಕೂಡ ಈ ಸ್ಥಳ ಸೂಕ್ತವಾಗಿದೆ.

ದೊಡ್ಡಬಸಪ್ಪ ದೇವಾಲಯ

ಕರ್ನಾಟಕದ ಅತ್ಯಂತ ಪುರಾತನ ದೇವಾಲಯಗಳಲ್ಲಿ ಈ ದೊಡ್ಡಬಸಪ್ಪ ದೇವಾಲಯವು ಒಂದು. ಸೂಕ್ಷ್ಮವಾದ ಕೆತ್ತನೆಗಳಿಂದ ಕಂಗೊಳಿಸುತ್ತಿರುವ ಈ ಆಲಯವು 12 ನೇ ಶತಮಾನಕ್ಕೆ ಸೇರಿದ್ದು ಎಂದು ನಂಬಲಾಗಿದೆ. ದೇವತೆಗಳ ಶಿಲ್ಪಗಳು ದೇವಾಲಯದ ಹೊರಭಾಗವನ್ನು ಆವರಿಸಿವೆ. ದೊಡ್ಡ ಬಸಪ್ಪ ಆಲಯದಲ್ಲಿ ಮಹಾಶಿವನು ಲಿಂಗ ರೂಪದಲ್ಲಿ ವಿರಾಜಮಾನನಾಗಿ ನೆಲೆಸಿದ್ದಾನೆ.

ಶೈವರಿಗೆ ಹಾಗು ಇತಿಹಾಸ ಆಸಕ್ತರಿಗೆ ಈ ದೇವಾಲಯ ಅತ್ಯುತ್ತಮ ಸ್ಥಳವು ಹೌದು. ದಾವಣಗೆರೆಯ ಈ ಐತಿಹಾಸಿಕ ಆಲಯವು ಶಿವರಾತ್ರಿಯ ಸಮಯದಲ್ಲಿ ಸಾವಿರಾರು ಭಕ್ತರನ್ನು ಸ್ವಾಗತಿಸುತ್ತದೆ.

ಗಾಂಧಿ ಪಾರ್ಕ್

ಒಂದು ವೇಳೆ ನೀವು ಮಕ್ಕಳ ಜೊತೆ ದಾವಣಗೆರೆ ಪ್ರವಾಸ ಮಾಡುತ್ತಿದ್ದರೆ ಗಾಂಧಿ ಪಾರ್ಕ್ಗೆ ಹೋಗಿ. ಇದು ನಗರದ ಸಾರ್ವಜನಿಕ ಉದ್ಯಾನವನವಾಗಿದೆ. ಪ್ರವಾಸಿಗರಿಗೆ ಹಚ್ಚ ಹಸಿರಿನ ನಡುವೆ ವಿಶ್ರಾಂತಿ ಪಡೆಯಲು ಇದೊಂದು ಅತ್ಯುತ್ತಮ ಸ್ಥಳ ಎಂದು ಪರಿಗಣಿಸಲಾಗಿದೆ. 14 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಹರಡಿರುವ ಈ ಪಾರ್ಕ್ ಕೃತಕ ಸರೋವರವನ್ನು ಹೊಂದಿದೆ.

ಮಕ್ಕಳಿಗೆ ಪ್ರತ್ಯೇಕವಾದ ಆಟದ ಸ್ಥಳವು ಇದೆ. ಸರೋವರದಲ್ಲಿ ದೋಣಿ ವಿಹಾರವನ್ನು ಆನಂದಿಸಬಹುದು. ಉದ್ಯಾನವು ಮಕ್ಕಳ ಆಟದ ಪ್ರದೇಶದ ಜೊತೆಗೆ ಸಣ್ಣ ಮೃಗಾಲಯ ಮತ್ತು ಟಾಯ್ ಟ್ರೈನ್ ಕೂಡ ಹೊಂದಿದೆ.

ಬಾತಿ ಗುಡ್ಡ

ದಾವಣಗೆರೆಯ ಇತರೆ ಆಕರ್ಷಣೆಗಳು

ಆನೆಕೊಂಡ

ದುರ್ಗಾಂಬಿಕಾ ದೇವಸ್ಥಾನ

ಸಿದ್ದೇಶ್ವರ ದೇವಸ್ಥಾನ

ಕೊಂಡಜ್ಜಿ ಬಸಪ್ಪ ದೇವಸ್ಥಾನ

ಶ್ರೀ ರಾಘವೇಂದ್ರ ಸ್ವಾಮಿ ಮಠ

ಚನ್ನಗಿರಿ