ಮನೆ ಅಪರಾಧ ಶಿವಪುರ ಗ್ರಾ.ಪಂ ವಸ್ತುಗಳನ್ನು ಮಾರಿರುವ ಸದಸ್ಯರ ಬಂಧಿಸುವಂತೆ ಪ್ರತಿಭಟನೆ

ಶಿವಪುರ ಗ್ರಾ.ಪಂ ವಸ್ತುಗಳನ್ನು ಮಾರಿರುವ ಸದಸ್ಯರ ಬಂಧಿಸುವಂತೆ ಪ್ರತಿಭಟನೆ

0

ಗುಂಡ್ಲುಪೇಟೆ: ತಾಲ್ಲೂಕಿನ ಶಿವಪುರ ಗ್ರಾಮ ಪಂಚಾಯಿತಿ ಗೆ ಸಂಬಂದಿಸಿದ ಕಬ್ ಇನದ ವಸ್ತುಗಳನ್ನು ಗ್ರಾ.ಪಂ ಸದಸ್ಯರು ಗ್ರಾ.ಪಂ ಪಿಡಿಓ ಹಾಗೂ ಅಧ್ಯಕ್ಷರ ಗಮನಕ್ಕೆ ಬಾರದಂತೆ ಮಾರಾಟ ಮಾಡಿದ್ದಾರೆಂದು ಕಳೆದ ಆರಿ ದಿನದಿಂದ ಗ್ರಾ.ಪಂ ಮುಂಭಾಗ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕೆಲವು ದಿನಗಳ ಹಿಂದೆ ಸರ್ಕಾರದ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕೆಲವು ಹಳೆಯ ಕಬ್ಬಿಣದ ಸಾಮಾನುಗಳನ್ನು ಶಿವಪುರ ಗ್ರಾಮದಲ್ಲಿ ಚುನಾಯಿತರಾಗಿರುವ ಕೆಲವು ಸದಸ್ಯರು ಪಿಡಿಓ ಹಾಗೂ ಅಧ್ಯಕ್ಷರ ಗಮನಕ್ಕೆ ತರದೆ ಮಾರಿದ್ದಾರೆ ಇದು ಕಾನೂನುಬಾಹಿರವಾಗಿ ಉಲ್ಲೇಖವಾಗಿರುತ್ತದೆ ಹಾಗೂ 27/03/2022 ರಂದು ಪಂಚಾಯಿತಿ ಆವರಣದಲ್ಲಿ ನೋಡಲ್ ಅಧಿಕಾರಿಗಳ ಗೈರು ಹಾಜರಿಯಲ್ಲಿ ತಾವು ನಡೆಸಿರುವ ಗ್ರಾಮ ಸಭೆಯು ಏಕಪಕ್ಷಿಯವಾಗಿರುವುದರಿಂದ ನಾವು ದಿನಾಂಕ20/03/2022 ರಿಂದ ಶಿವಪುರ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆಯ ಹಮ್ಮಿಕೊಂಡಿದ್ದು, ಪಿಡಿಓ ಅವರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಹಳೆಯ ಕಬ್ಬಿಣದ ವಸ್ತುಗಳನ್ನು ಮಠದ ಆವರಣದಲ್ಲಿ ಇದ್ದಿದ್ದರಿಂದ ವಾಟರ್ ಮ್ಯಾನ್ ಅವರನ್ನು ಸ್ಥಳಕ್ಕೆ ಕರೆದುಕೊಂಡು ಮಾಜಾರ್ ಮಾಡಿದರು.
ನಂತರ ಆ ವಸ್ತುಗಳು ಪಂಚಾಯಿತಿಗೆ ಸೇರಿದ ವಸ್ತುಗಳು ಅಂತ ಅವರ ಸಿಬ್ಬಂದಿ ಅವರು ಖಚಿತ ಪಡಿಸಿರುವ ಹಿನ್ನೆಲೆಯಲ್ಲಿ ಸದಸ್ಯರಾದ ಮಹದೇವಪ್ಪ, ಚನ್ನಬಸಪ್ಪ ಹಾಗೂ ವಾಟರ್ ಮ್ಯಾನ್ ಇವರ ಮೂರು ಜನರ ಮೇಲೆ ಪಿಡಿಓ ಅವರು ಪೋಲಿಸ್ ಇಲಾಖೆಗೆ ವರದಿ ಸಲ್ಲಿಸಿ ಕಂಪ್ಲೈಂಟ್ ಮಾಡಿ ಅವರ ಮೇಲೆ ವಂಚನೆ ಕಳ್ಳತನ ಹಿನ್ನೆಲೆಯಲ್ಲಿ 420 ಕೇಸ್ ದಾಖಲಾಗಿದೆ ಎಂದು ತಿಳಿಸಿದರು.
ಇಂದು ನಡೆದ 6ನೇ ದಿನದ ಪ್ರತಿಭಟನೆ ಹಿನ್ನೆಲೆಯಲ್ಲಿ ಪಿಡಿಓ 420 ಕೇಸ್ ಹಾಕಿರುವ ದಾಖಲೆಯನ್ನ ತೆಗೆದುಕೊಂಡು ಪೋಲಿಸ್ ಇಲಾಖೆ ಈ ಕೂಡಲೇ ಅವರನ್ನು ಬಂದಿಸಬೇಕು ಎಂದು ಪಿಡಿಓ ಅವರಿಗೆ ನಮ್ಮ ವಿವಿಧ ಬೇಡಿಕೆಯನ್ನು ಸಲ್ಲಿಸಿ ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆ ಇಡೇರರಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಆಗ್ರಹಿಸಿ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಕೈಬಿಟ್ಟರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ದಪ್ಪ,ಪುಟ್ಟಲಿಂಗಯ್ಯ ಪುಟ್ಟಸ್ವಾಮಿ,ಸಿದ್ದರಾಜು ಹಿರಿಯರಾದ ಎಸ್ ಎನ್ ಶಿವಮೂರ್ತಿ, ಉದಯಕುಮಾರ್ ಸ್ವಾಮಿ, ಅಂಕರಾಜಪ್ಪ, ಶಿವಮಲ್ಲಪ್ಪ ಮಂಜುನಾಥ್, ರಾಚಯ್ಯ ಗುರುಸ್ವಾಮಿ ಮುಖಂಡರಾದ ನಮೋ ಮಂಜು ನಂದೀಶ್ ಜಗದೀಶ್ ಸಿದ್ಧಪ್ಪ ತಮ್ಮಯ್ಯ ಮಹೇಶ್ ಮತ್ತಿತರರಿದ್ದರು.