ಮನೆ ರಾಜಕೀಯ ಬಹುಮತ ಕಳೆದುಕೊಂಡ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

ಬಹುಮತ ಕಳೆದುಕೊಂಡ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

0

ಇಸ್ಲಾಮಾಬಾದ್ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ)ನ ಪ್ರಮುಖ ಮೈತ್ರಿ ಪಕ್ಷ ಮುತ್ತಾಹಿದಾ ಕ್ವಾಮಿ ಮೂವ್‌ಮೆಂಟ್ (ಎಂಕ್ಯೂಎಂ) ಹೊರಬಂದು ಪ್ರಮುಖ ವಿರೋಧ ಪಕ್ಷ ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ)ಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಇಮ್ರಾನ್ ಖಾನ್ ಅವರಿಗೆ ತೀವ್ರ ಮುಖಭಂಗವಾಗಿದೆ.

ಸಂಯುಕ್ತ ವಿಪಕ್ಷ ಮತ್ತು ಎಂಕ್ಯೂಎಂ ಒಪ್ಪಂದ ಮಾಡಿಕೊಂಡಿವೆ. ರಬ್ತಾ ಸಮಿತಿ MQM ಮತ್ತು PPP CEC ಈ ಒಪ್ಪಂದವನ್ನು ಅನುಮೋದಿಸುತ್ತದೆ. ನಾಳೆ ಸುದ್ದಿಗೋಷ್ಠಿಯಲ್ಲಿ ಸಂಪೂರ್ಣ ವಿವರ ನೀಡಲಿದ್ದೇವೆ. ಪಾಕಿಸ್ತಾನಕ್ಕೆ ಅಭಿನಂದನೆಗಳು ಎಂದು ಪಿಪಿಪಿ ಅಧ್ಯಕ್ಷ ಬಿಲವಲ್ ಭಟ್ಟೋ ಜರ್ದಾರಿ ಟ್ವೀಟ್ ಮಾಡಿದ್ದಾರೆ.

ನಾಳೆ ಅಂದರೆ ಮಾರ್ಚ್ 31 ರಂದು ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆ ಮೊದಲು ಕಳೆದ ತಡರಾತ್ರಿ ನಡೆದ ಬೆಳವಣಿಗೆಯ ನಂತರ ಪಿಟಿಐ ಸರ್ಕಾರವು ಸಂಸತ್ತಿನ ಕೆಳಮನೆಯಲ್ಲಿ ಬಹುಮತವನ್ನು ಕಳೆದುಕೊಂಡಿತು.

ಆಡಳಿತಾರೂಢ ಸಂಯುಕ್ತ ಪಾಲುದಾರ ಪಕ್ಷ MQM-P ಇಮ್ರಾನ್ ಖಾನ್ ನೇತೃತ್ವದ ಸರ್ಕಾರದಿಂದ ಹೊರಬಂದ ಕಾರಣ 177 ಸದಸ್ಯ ಬಲದ ಸಂಸತ್ತಿನಲ್ಲಿ 164 ಸದಸ್ಯರು ಹೊರಬಂದಿದ್ದಾರೆ.ಇಲ್ಲಿ ನಾಳೆ ನಡೆಯಲಿರುವ ವಿಶ್ವಾಸ ಮತದಲ್ಲಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು 172 ಸದಸ್ಯರ ಬೆಂಬಲ ಅಗತ್ಯವಿದೆ.

ಈ ಮಧ್ಯೆ ವಿದೇಶಿ ಅನುದಾನ ಪಡೆಯುವ ಮೂಲಕ ತಮ್ಮ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಇಮ್ರಾನ್ ಖಾನ್ ಅವರು ಆರೋಪ ಮಾಡಿದ ನಂತರ ಪ್ರತಿಕ್ರಿಯೆ ನೀಡಿರುವ ಫೆಡರಲ್ ಸಚಿವ ಅಸದ್ ಉಮರ್, ತಮ್ಮ ಸರ್ಕಾರಕ್ಕೆ ಬಹುಮತ ಇರುವುದನ್ನು ಸಾಬೀತುಪಡಿಸಲು ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಸಿದ್ದವಿದ್ದಾರೆ ಎಂದರು.

ಪಾಕಿಸ್ತಾನದಲ್ಲಿ ಸರ್ಕಾರ ಬದಲಿಸಲು ವಿದೇಶಿ ಹಣದ ಮೂಲಕ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ಜನರನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಕೆಲವರು ನಮ್ಮ ವಿರುದ್ಧ ಹಣವನ್ನು ಬಳಸುತ್ತಿದ್ದಾರೆ. ಯಾವ ಸ್ಥಳಗಳಿಂದ ನಮ್ಮ ಮೇಲೆ ಒತ್ತಡ ಹೇರುವ ಪ್ರಯತ್ನಗಳು ನಡೆಯುತ್ತಿವೆ ಎಂಬುದು ನಮಗೆ ತಿಳಿದಿದೆ. ನಮಗೆ ಲಿಖಿತವಾಗಿ ಬೆದರಿಕೆ ಹಾಕಲಾಗಿದೆ. ಆದರೆ ನಾವು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ನೀಡಿದ್ದರು.