ಮನೆ ರಾಷ್ಟ್ರೀಯ ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ: ವಿಪಕ್ಷಗಳ ನಡೆ ‘ದುರಾದೃಷ್ಟಕರ’ ಎಂದ ಪ್ರಲ್ಹಾದ್ ಜೋಶಿ

ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ: ವಿಪಕ್ಷಗಳ ನಡೆ ‘ದುರಾದೃಷ್ಟಕರ’ ಎಂದ ಪ್ರಲ್ಹಾದ್ ಜೋಶಿ

0

ಹೊಸ ದಿಲ್ಲಿ: ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭಕ್ಕೆ ಗೈರು ಹಾಜರಾಗಲು ನಿರ್ಧರಿಸಿರುವ 19 ವಿರೋಧ ಪಕ್ಷಗಳ ನಿರ್ಧಾರವನ್ನು ಕೇಂದ್ರ ಸರ್ಕಾರ ದುರಾದೃಷ್ಟಕರ ಎಂದು ಹೇಳಿದ್ದು, ವಿರೋಧ ಪಕ್ಷಗಳು ತಮ್ಮ ತೀರ್ಮಾನವನ್ನು ಪುನರ್ ವಿಮರ್ಶೆ ಮಾಡಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಕೋರಿದ್ದಾರೆ.

Join Our Whatsapp Group

ಇದೇ ಭಾನುವಾರ ಮೇ 28 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನ ಕಟ್ಟಡವನ್ನು ಉದ್ಘಾಟನೆ ಮಾಡಲಿದ್ದಾರೆ. ಆದರೆ, ವಿರೋಧ ಪಕ್ಷಗಳು ಮಾತ್ರ ನೂತನ ಸಂಸತ್ ಭವನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಉದ್ಘಾಟನೆ ಮಾಡಬೇಕು ಎಂದು ಪಟ್ಟು ಹಿಡಿದಿವೆ. ರಾಷ್ಟ್ರಪತಿಗಳು ರಾಷ್ಟ್ರದ ಮುಖ್ಯಸ್ಥರಷ್ಟೇ ಅಲ್ಲ, ಸಂಸತ್ ನ ಅವಿಭಾಜ್ಯ ಅಂಗ ಎಂದು ವಿಪಕ್ಷಗಳು ವಾದ ಮಂಡಿಸಿವೆ.

ವಿಪಕ್ಷಗಳ ಈ ನಡೆಗೆ ಬೇಸರ ವ್ಯಕ್ತಪಡಿಸಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಇದೊಂದು ದುರಾದೃಷ್ಟಕರ ಬೆಳವಣಿಗೆ ಎಂದಿದ್ದಾರೆ. ವಿವಾದವೇ ಇಲ್ಲದ ವಿಷಯದಲ್ಲಿ ವಿವಾದ ಸೃಷ್ಟಿ ಮಾಡಲಾಗುತ್ತಿದೆ. ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕುವ ಮೂಲಕ ವಿರೋಧ ಪಕ್ಷಗಳು ಭಿನ್ನ ರಾಗ ಹಾಡುತ್ತಿವೆ. ಹೀಗಾಗಿ, ವಿಪಕ್ಷಗಳು ತಮ್ಮ ತೀರ್ಮಾನವನ್ನು ಪುನರ್ ಪರಿಶೀಲನೆಗೆ ಒಳಪಡಿಸಬೇಕು ಎಂದಿದ್ದಾರೆ.

ಲೋಕಸಭೆಯ ಸಭಾಧ್ಯಕ್ಷರು ಸಂಸತ್ನ ಪಾಲಕರಾಗಿದ್ದಾರೆ. ಅವರೇ ಖುದ್ದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಉದ್ಘಾಟನೆ ಮಾಡುವಂತೆ ಆಹ್ವಾನ ನೀಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.