ಮನೆ ರಾಷ್ಟ್ರೀಯ ನೂತನ ಸಂಸತ್ ಭವನ ಉದ್ಘಾಟನೆಯ ಸ್ಮರಣಾರ್ಥ  ₹ 75 ವಿಶೇಷ ನಾಣ್ಯ ಬಿಡುಗಡೆ

ನೂತನ ಸಂಸತ್ ಭವನ ಉದ್ಘಾಟನೆಯ ಸ್ಮರಣಾರ್ಥ  ₹ 75 ವಿಶೇಷ ನಾಣ್ಯ ಬಿಡುಗಡೆ

0

ನವದೆಹಲಿ: ಮೇ 28 ರಂದು ಹೊಸ ಸಂಸತ್ ಕಟ್ಟಡದ ಉದ್ಘಾಟನೆಯ ಸ್ಮರಣಾರ್ಥವಾಗಿ ಹಣಕಾಸು ಸಚಿವಾಲಯವು ವಿಶೇಷವಾಗಿ 75 ರೂಪಾಯಿ ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಲಿದೆ.

Join Our Whatsapp Group

ಸ್ಮರಣಾರ್ಥ ನಾಣ್ಯವು ದೇಶ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವುದಕ್ಕೆ ಗೌರವ ಸೂಚಕವಾಗಿದೆ.

ನಾಣ್ಯದ ಒಂದು ಭಾಗದಲ್ಲಿ ಅಶೋಕ ಸ್ತಂಭದ ಸಿಂಹ ಲಾಂಛನ ಇರಲಿದ್ದು, ಅದರ ಕೆಳಗೆ ‘ಸತ್ಯ ಮೇವ ಜಯತೇ‘ ಎಂದು ಬರೆಯಲಾಗಿದೆ. ಎಡಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ‘ಭಾರತ್‘ ಎಂದು ಬರೆಯಲಾಗಿದ್ದು, ಬಲಭಾಗದಲ್ಲಿ ‘ಇಂಡಿಯಾ‘ ಎಂದು ಇಂಗ್ಲೀಷ್ ನಲ್ಲಿ ಬರೆಯಲಾಗಿದೆ.

ಇನ್ನೊಂದು ಭಾಗದಲ್ಲಿ ಸಂಸತ್ ಸಂಕೀರ್ಣದ ಚಿತ್ರ ಇದ್ದು, ಮೇಲ್ಭಾಗದಲ್ಲಿ ‘ಸಂಸದ್ ಸಂಕುಲ್‘ ಎಂದು ದೇವನಾಗರಿ ಲಿಪಿಯಲ್ಲೂ, ಕೆಳಭಾಗದಲ್ಲಿ ‘ಪಾರ್ಲಿಮೆಂಟ್ ಕಾಂಪ್ಲೆಕ್ಸ್‘ ಎಂದೂ ಇಂಗ್ಲೀಷ್ ನಲ್ಲಿ ಬರೆಯಲಾಗಿದೆ.

ವೃತ್ತಾಕಾರದಲ್ಲಿರುವ ಈ ನಾಣ್ಯ 44 ಮಿಲಿ ಮೀಟರ್ ವ್ಯಾಸ ಹೊಂದಿರಲಿದೆ. 35 ಗ್ರಾಂ ತೂಕ ಇರಲಿದೆ. ಶೇ 50 ಬೆಳ್ಳಿ, ಶೇ 40 ತಾಮ್ರ, ಶೇ 5 ಬಿಳಿಲೋಹ, ಹಾಗೂ ಶೇ 5 ರಷ್ಟು ಸತು ಬಳಸಿ ಈ ನಾಣ್ಯವನ್ನು ತಯಾರಿಸಲಾಗಿದೆ.

ಮೇ 28ರ ಭಾನುವಾರ ನೂತನ ಸಂಸತ್ ಭವನದ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.