ಮನೆ ರಾಜ್ಯ ನಮ್ಮ ಸರ್ಕಾರ ಎದುರಿಸಲು ಬಿಜೆಪಿಯಲ್ಲಿ ಸಮರ್ಥ ವಿಪಕ್ಷ ನಾಯಕ ಇಲ್ಲದಿರುವುದು ದುರಂತ: ಕಾಂಗ್ರೆಸ್

ನಮ್ಮ ಸರ್ಕಾರ ಎದುರಿಸಲು ಬಿಜೆಪಿಯಲ್ಲಿ ಸಮರ್ಥ ವಿಪಕ್ಷ ನಾಯಕ ಇಲ್ಲದಿರುವುದು ದುರಂತ: ಕಾಂಗ್ರೆಸ್

0

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸರ್ಕಾರ ರಚಿಸಿದ್ದೇವೆ. ಆದರೆ, ನಮ್ಮ ಸರ್ಕಾರವನ್ನು ಎದುರಿಸಲು ಬಿಜೆಪಿಯಲ್ಲಿ ಸಮರ್ಥ ವಿರೋಧ ಪಕ್ಷದ ನಾಯಕ ಇಲ್ಲದಿರುವುದು ದುರಂತ ಎಂದು ಕಾಂಗ್ರೆಸ್‌ ಟೀಕಿಸಿದೆ.

Join Our Whatsapp Group

ಸಿದ್ದರಾಮಯ್ಯ ಸರ್ಕಾರದ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿ ವಿರುದ್ಧ ಚಾಟಿ ಬೀಸಿರುವ ಕಾಂಗ್ರೆಸ್‌, ನಾವು ಗೆದ್ದೂ ಆಯ್ತು, ಸಿಎಂ–ಡಿಸಿಎಂ ಆಯ್ಕೆಯೂ ಆಯ್ತು, ಸಚಿವ ಸಂಪುಟವೂ ರೆಡಿ ಆಯ್ತು, ಸರ್ಕಾರದ ರಚನೆಯೂ ಆಯ್ತು. ಇದುವರೆಗೂ ನಮ್ಮ ಸರ್ಕಾರವನ್ನು ಎದುರಿಸಲು ಬಿಜೆಪಿಗೆ ಸಮರ್ಥ ವಿರೋಧ ಪಕ್ಷದ ನಾಯಕ ಸಿಗದಿರುವುದು ದುರಂತ! ಎಂದು ಛೇಡಿಸಿದೆ.‌

ಸರ್ಕಾರವನ್ನು ಎದುರಿಸಲು ಬಿಜೆಪಿಗೆ ನೈತಿಕತೆಯೇ ಇಲ್ಲ ಎಂದು ಕುಟುಕಿರುವ ಕಾಂಗ್ರೆಸ್‌, ನೈತಿಕತೆ ಇರದಿದ್ದರೇನಂತೆ, ಕನಿಷ್ಠ ವಿರೋಧ ಪಕ್ಷದ ನಾಯಕನನ್ನು ಮುಂದಿಟ್ಟುಕೊಂಡಾದರು ಬಿಜೆಪಿ ನಮ್ಮನ್ನು ವಿರೋಧಿಸಲಿ ಎಂದು ತಿವಿದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜತೆಗೆ ಕಾಂಗ್ರೆಸ್‌ ಹೈಕಮಾಂಡ್‌ ಸತತ ಮೂರು ದಿನಗಳ ಕಾಲ ಸಮಾಲೋಚನೆ ನಡೆಸಿ ಸಂಪುಟ ವಿಸ್ತರಣೆಯ ಕಗ್ಗಂಟನ್ನು ಬಗೆಹರಿಸಿದೆ. 24 ನಾಯಕರು ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.