ಮನೆ ಮನರಂಜನೆ ಸಾವರ್ಕರ್ ಜೀವನಾಧಾರಿತ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಚಿತ್ರದ ಟೀಸರ್ ಬಿಡುಗಡೆ

ಸಾವರ್ಕರ್ ಜೀವನಾಧಾರಿತ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಚಿತ್ರದ ಟೀಸರ್ ಬಿಡುಗಡೆ

0

ಮುಂಬೈ: ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿಂದುತ್ವ ಸಿದ್ಧಾಂತವಾದಿ ವಿನಾಯಕ್ ದಾಮೋದರ್ (ವಿ.ಡಿ) ಸಾವರ್ಕರ್ ಜೀವನಾಧಾರಿತ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

Join Our Whatsapp Group

ಚಿತ್ರವನ್ನು ನಟ ರಣದೀಪ್ ಹೂಡಾ ನಿರ್ದೇಶಿಸಿದ್ದಾರೆ. ಉತ್ಕರ್ಷ್ ನೈತಾನಿ ಕಥೆ ಬರೆದಿದ್ದಾರೆ.

ಸಂಭಾವ್ಯ ವಿವಾದಾತ್ಮಕ ಚಿತ್ರದ ಟೀಸರ್ ರಣದೀಪ್ ಅವರ ಧ್ವನಿಯೊಂದಿಗೆ ಪ್ರಾರಂಭವಾಗುತ್ತದೆ. ಹೂಡಾ ವೀರ್ ಸಾವರ್ಕರ್ ಪಾತ್ರ ಪರಕಾಯ ಪ್ರವೇಶ ಮಾಡಿದ್ದಾರೆ. ಥೇಟ್‌ ಸಾವರ್ಕರ್‌ ಅವರಂತೆ ಕಾಣಿಸುತ್ತಿದ್ದಾರೆ.

ಟೀಸರ್‌ ನಲ್ಲಿ 90 ವರ್ಷಗಳ ಕಾಲ ಸ್ವಾತಂತ್ರ್ಯ ಹೋರಾಟ ನಡೆಯಿತು. ಆದರೆ ಕೆಲವೇ ಜನರು ಈ ಯುದ್ಧದಲ್ಲಿ ಹೋರಾಡಿದರು. ಉಳಿದವರೆಲ್ಲ ಅಧಿಕಾರಕ್ಕಾಗಿ ಹಂಬಲಿಸಿದ್ದರು. “ಮಹಾತ್ಮ ಗಾಂಧೀಜಿ ಕೆಟ್ಟವರಲ್ಲ. ಆದರೆ ಅವರು ತಮ್ಮ ಅಹಿಂಸಾತ್ಮಕ ಚಿಂತನೆಗೆ ಅಂಟಿಕೊಳ್ಳದಿದ್ದರೆ ದೇಶ 35 ವರ್ಷಗಳ ಹಿಂದೆಯೇ ಸ್ವತಂತ್ರವಾಗುತ್ತಿತ್ತು” ಡೈಲಾಗ್‌ ಗಳು ಕೇಳಿ ಬರುತ್ತವೆ.

ಟೀಸರ್​​ನಲ್ಲಿರುವಂತೆ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಖುದಿರಾಮ್ ಬೋಸ್ ಮತ್ತು ಸಶಸ್ತ್ರ ಕ್ರಾಂತಿಗೆ ಪ್ರೇರಣೆ ನೀಡಿದವರು ವೀರ್ ಸಾವರ್ಕರ್. ಬ್ರಿಟಿಷರು ಅತ್ಯಂತ ಭಯಪಡುತ್ತಿದ್ದ ಕ್ರಾಂತಿಕಾರಿಗಳಲ್ಲಿ ಅವರು ಒಬ್ಬರು ಎಂದು ಹೇಳಲಾಗುತ್ತದೆ. ಶಕ್ತಿಯುತ ಡೈಲಾಗ್‌ಗಳು ಟೀಸರ್‌ನ ಪ್ರಮುಖ ಆಕರ್ಷಣೆಯಾಗಿವೆ.

“ಸಾವರ್ಕರ್ ಅವರು ಅದ್ಭುತ ಜೀವನ ನಡೆಸಿದರು. ನಾನು ಚಲನಚಿತ್ರಕ್ಕಾಗಿ ಸಂಶೋಧಿಸುವಾಗ ಅವರ ಬಗ್ಗೆ ಹೆಚ್ಚು ತಿಳಿದುಕೊಂಡೆ. ಆಗ ನಾನು ಅವರನ್ನು ಅಪಾರವಾಗಿ ಮೆಚ್ಚಿದೆ. ಈಗ ಅವರ 140 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಚಿತ್ರದ ಟೀಸರ್​ ಬಿಡುಗಡೆ ಮಾಡಲು ನನಗೆ ಅಪಾರ ಸಂತೋಷವಾಗಿದೆ”- ರಣದೀಪ್ ಹೂಡಾ.

ಈ ವರ್ಷ ಬಿಡುಗಡೆಯಾಗಲಿರುವ ಐತಿಹಾಸಿಕ ಚಿತ್ರ ರಣದೀಪ್ ಹೂಡಾ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಚಿತ್ರಕ್ಕಾಗಿ ನಟ ಸಾಕಷ್ಟು ಶ್ರಮಿಸಿದ್ದಾರೆ ಎಂಬುದು ಟೀಸರ್‌ನಿಂದಲೇ ತಿಳಿಯುತ್ತದೆ.