ಮನೆ ರಾಜ್ಯ ನಿಸ್ವಾರ್ಥದಿಂದ ದಾನ, ಧರ್ಮ ಮಾಡಿ: ಎಸ್ ಪ್ರಕಾಶ್ ಪ್ರಿಯಾದರ್ಶನ

ನಿಸ್ವಾರ್ಥದಿಂದ ದಾನ, ಧರ್ಮ ಮಾಡಿ: ಎಸ್ ಪ್ರಕಾಶ್ ಪ್ರಿಯಾದರ್ಶನ

0

ಮೈಸೂರು: ದಾನ ಧರ್ಮ ಮಾಡುವುದರಿಂದ ಇರುವ ಸಂಪತ್ತು ಕಡಿಮೆಯಾಗುವುದಿಲ್ಲ, ಬದಲಿಗೆ ಸಂಪತ್ತು ಹೆಚ್ಚಾಗುತ್ತಿದೆ. ಅದರ ಜತೆಗೆ ಆಯುಷ್ಯ ವೃದ್ಧಿಸುತ್ತದೆ ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ನಿರ್ಗತಿಕರಿಗೆ ಬಡವರಿಗೆ ಸಹಾಯ ಮಾಡಿ ಬಡವರ ಕಣ್ಣೀರೊರೆಸುವ ಧರ್ಮದ ಕೆಲಸ ಮಾಡಬೇಕೆು ಎಂದು  ಬಳಗದ ಅಧ್ಯಕ್ಷರಾದ ಎಸ್ ಪ್ರಕಾಶ್ ಪ್ರಿಯಾದರ್ಶನ ಹೇಳಿದರು.

Join Our Whatsapp Group

ಜೆ.ಎಲ್.ಬಿ. ರಸ್ತೆಯಲ್ಲಿರುವ ಆರಾಧ್ಯ ಮಹಾಸಭಾದಲ್ಲಿ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ 124 ನೇ ಕಾರ್ಯಕ್ರಮ ಹಾಗೂ  “ಕುರುಬರಿಂದ ಕುರುಬರಿಗಾಗಿ” “ಉಳ್ಳವರಿಂದ ಅವಶ್ಯಕತೆ ಇರುವವರಿಗಾಗಿ” ಎಂಬ “ಉಚಿತ ಕುರಿ” ನೀಡುವ ಯೋಜನೆಯ 7ನೇ ಕಾರ್ಯಕ್ರಮದಲ್ಲಿ 5 ಜನ ಫಲಾನುಭವಿಗಳಿಗೆ ಉಚಿತ ಕುರಿ ಮರಿಗಳನ್ನು ಹಾಗೂ ಹಣ್ಣಿನ ಗಿಡವನ್ನು, ವಾಟರ್ ಕ್ಯಾನ್‌ ಗಳನ್ನು, ಗಣ್ಯರು ಲಾಟರಿ ಎತ್ತುವ ಮುಖಾಂತರ ವಿತರಿಸಿ ಮಾತನಾಡಿದರು.

ಮನುಷ್ಯರು ಪರೋಪಕಾರ, ದಾನ, ಧರ್ಮ ಮೊದಲಾದವುಗಳನ್ನು ಹೆಸರಿಗಾಗಿ ಅಥವಾ ಸ್ವಾರ್ಥಕ್ಕಾಗಿ ಮಾಡಬಾರದು. ಹಾಗೆ ಮಾಡಿದರೆ ಅದು ನಿಷ್ಪ್ರಯೋಜಕವಾಗುತ್ತದೆ. ಪ್ರತಿಫಲಾಪೇಕ್ಷೆ ಹಾಗೂ ನಿಸ್ವಾರ್ಥದಿಂದ ಮಾಡುವ ಸೇವೆ ಭಗವಂತನಿಗೆ ಬೇಗ ತಲುಪುತ್ತದೆ. ಅಂತಹ ಗುಣಗಳನ್ನು ನಾವೆಲ್ಲ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

 ಈ ಕಾರ್ಯಕ್ರಮದಲ್ಲಿ ತಿಸ್ಸಾ ಬಂತೆೇಜಿ, ಎಸ್ ಪ್ರಕಾಶ್ ಪ್ರಿಯಾದರ್ಶನ್, ಕನ್ನಡ ವೇದಿಕೆ ಅಧ್ಯಕ್ಷರಾದ ಬಾಲಕೃಷ್ಣ, ಕಾಂಗ್ರೆಸ್ ಮುಖಂಡರು, ದಿ ಸಿಟಿ ಕೋ ಆಪರೇಟಿವ್  ಬ್ಯಾಂಕ್ ನ ನಿರ್ದೇಶಕರಾದ ಎಸ್.ಆರ್.ರವಿಕುಮಾರ್, ಸಮಾಜ ಸೇವಕರಾದ ವಿಕ್ರಮ ಅಯ್ಯಂಗಾರ್, ಬಿಜೆಪಿ ಮುಖಂಡರಾದ ಬೈರತಿ  ಲಿಂಗರಾಜು, ಪ್ರೊಫೆಸರ್ ಬಿ ಎಸ್ ಪ್ರೇಮಕುಮಾರಿ, ಎಂ ಮಾಧವಿ, ಜಾಕಿರ್, ಶ್ರೀನಿವಾಸ್ , ರವಿಚಂದ್ರ, ಇನ್ನಿತರರು ಇದ್ದರು.

ಈ ತಿಂಗಳ ಫಲಾನುಭವಿಗಳು ಚಾಮುಂಡೇಶ್ವರಿ ಕ್ಷೇತ್ರದ ಪುಟ್ಟಮ್ಮ, ಅಶ್ವಥ್, ಹುಣಸೂರು ಕ್ಷೇತ್ರದ ಕೃಷ್ಣ.ಎಚ್, ವರುಣ ಕ್ಷೇತ್ರದ ಶಿವಕುಮಾರ್. ಟಿ. ನರಸೀಪುರ ಕ್ಷೇತ್ರದ ಎಸ್. ಮಂಜುನಾಥ್ ರವರಿಗೆ ಉಚಿತ ಕುರಿ ನೀಡಲಾಯಿತು.