ಮನೆ ಸುದ್ದಿ ಜಾಲ ವರ್ಣಿಕಾ ಇಂಕ್ ಉತ್ಪಾದನಾ ಘಟಕ ಉದ್ಘಾಟಿಸಿದ ಆರ್ ಬಿಐ ಗವರ್ನರ್

ವರ್ಣಿಕಾ ಇಂಕ್ ಉತ್ಪಾದನಾ ಘಟಕ ಉದ್ಘಾಟಿಸಿದ ಆರ್ ಬಿಐ ಗವರ್ನರ್

0

ಮೈಸೂರು: ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್ (ಬಿಆರ್​ಬಿಎನ್​ಎಂಪಿಎಲ್) ವರ್ಣಿಕಾ ಇಂಕ್ ಉತ್ಪಾದನಾ ಘಟಕವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್​ ಶಕ್ತಿಕಾಂತ ದಾಸ್ ಅವರು ಉದ್ಘಾಟಿಸಿದ್ದಾರೆ.

ಇದರೊಂದಿಗೆ ಲರ್ನಿಂಗ್ ಅಂಡ್​​​ ಡೆವಲಪ್​ಮೆಂಟ್ ಸೆಂಟರ್ ( ಎಲ್ ಡಿಸಿ) ಸ್ಥಾಪನೆಗೆ ಗವರ್ನರ್​ ಶಂಕುಸ್ಥಾಪನೆ ಮಾಡಿದರು.

ಈ ಸಂದರ್ಭ ಮಾತನಾಡಿದ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್, ಬ್ಯಾಂಕ್ ನೋಟುಗಳ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಬಿಆರ್​ಬಿಎನ್​ಎಂಪಿಎಲ್​, ವರ್ಣಿಕಾ ಇಂಕ್ ಘಟಕವನ್ನು ವಾರ್ಷಿಕವಾಗಿ 1500 ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯದಲ್ಲಿ ಸ್ಥಾಪಿಸಿದ್ದಾರೆ. ಈ ಘಟಕದಿಂದ ಬ್ಯಾಂಕ್ ನೋಟುಗಳ ಪ್ರಿಂಟಿಂಗ್​ಗೆ ಅವಶ್ಯವಿರುವ ಇಂಕ್ ಅನ್ನು ಉತ್ಪಾದಿಸಲಾಗುತ್ತದೆ‌. ಇದು ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಭಾಗವಾಗಿದೆ.ಈ ಘಟಕವು ಕಲರ್ ಶಿಫ್ಟ್ ಇಂಟಾಗ್ಲಿಯೋ ಇಂಕ್ (ಸಿಎಸ್ಐಐ) ಉತ್ಪಾದಿಸುತ್ತಿದ್ದು, ಭಾರತದಲ್ಲಿರುವ ಬ್ಯಾಂಕ್ ನೋಟು ಮುದ್ರಣಗಳಿಗೆ ಅವಶ್ಯಕವಾಗಿರುವ ಇಂಕ್ ಪೂರೈಸುವ ಉದ್ದೇಶ ಹೊಂದಿದೆ. ಜೊತೆಗೆ ಪರಿಣಾಮಕಾರಿಯಾಗಿ ಬ್ಯಾಂಕ್ ನೋಟು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಾಗುತ್ತದೆ ಎಂದು ತಿಳಿಸಿದರು.

ಲರ್ನಿಂಗ್ ಅಂಡ್​ ಡೆವಲಪ್​ಮೆಂಟ್ ಸೆಂಟರ್ ಅನ್ನು ಭದ್ರತಾ ಮುದ್ರಣ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್​ಪಿಎಂಸಿಐಎಲ್) ಸಹಯೋಗದೊಂದಿಗೆ, ಬ್ಯಾಂಕ್ ನೋಟು ಪೇಪರ್ ಮಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಎಸ್​ಪಿಎಂಸಿಎಲ್ ಜಂಟಿ ಸಹಯೋಗದೊಂದಿಗೆ ಸ್ಥಾಪಿಸಲಾಗುತ್ತಿದೆ.ಲರ್ನಿಂಗ್ ಅಂಡ್​ ಡೆವಲಪ್​ಮೆಂಟ್ ದೃಢವಾದ ಜ್ಞಾನ ಪ್ರಸರಣ ವೇದಿಕೆಯಾಗಿ ಕಾರ್ಯನಿರ್ವಹಿಸಲಿದ್ದು, ಈ ಕೇಂದ್ರವನ್ನು ಬಿಆರ್​ಬಿಎನ್​ಎಂಪಿಎಲ್ ನಿರ್ವಹಣೆ ಮಾಡುತ್ತದೆ ಎಂದರು.