ಮನೆ ಕಾನೂನು ವನ್ನಿಯಾರ್ ಸಮುದಾಯಕ್ಕೆ ನೀಡಿದ್ದ ಮೀಸಲಾತಿ ರದ್ದುಗೊಳಿಸಿದ ಸುಪ್ರೀಂ

ವನ್ನಿಯಾರ್ ಸಮುದಾಯಕ್ಕೆ ನೀಡಿದ್ದ ಮೀಸಲಾತಿ ರದ್ದುಗೊಳಿಸಿದ ಸುಪ್ರೀಂ

0

ನವದೆಹಲಿ: ತಮಿಳುನಾಡಿನ ಅತ್ಯಂತ ಹಿಂದುಳಿದ ವನ್ನಿಯರ್‌ ಸಮುದಾಯದವರಿಗೆ ನೀಡಲಾಗಿದ್ದ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಪಡಿಸಿದೆ.

ನ್ಯಾಯಮೂರ್ತಿಗಳಾದ ನಾಗೇಶ್ವರ ರಾವ್‌ ಮತ್ತು ಬಿ.ಆರ್‌. ಗವಾಯಿ ಅವರನ್ನೊಳಗೊಂಡ ಪೀಠವು, ಮೀಸಲಾತಿಯನ್ನು ರದ್ದುಗೊಳಿಸಿ ನೀಡಲಾಗಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.

ತಮಿಳುನಾಡಿನ ಸರ್ಕಾರಿ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳ ಪ್ರವೇಶದಲ್ಲಿ ಶೇ 10.5ರಷ್ಟು ಮೀಸಲಾತಿಯನ್ನು ವನ್ನಿಯರ್‌ ಸಮುದಾಯದವರಿಗೆ ನೀಡಲಾಗಿತ್ತು.

‘ಅತ್ಯಂತ ಹಿಂದುಳಿದ 115 ಸಮುದಾಯಗಳಿಗಿಂತ ಭಿನ್ನವೆಂದು ವನ್ನಿಯರ್‌ ಸಮುದಾಯವನ್ನು ಪರಿಗಣಿಸಲು ಸಾಧ್ಯವಿಲ್ಲ. ಇದಕ್ಕೆ ಯಾವುದೇ ಆಧಾರವಿಲ್ಲ. ಆದ್ದರಿಂದ, 2021ರ ಕಾನೂನಿನ ಪ್ರಕಾರ, 14, 15 ಮತ್ತು 16 ನೇ ವಿಧಿಗಳನ್ನು ಈ ಮೀಸಲಾತಿಯು ಉಲ್ಲಂಘಿಸುತ್ತದೆ. ನಾವು ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿಯುತ್ತೇವೆ’ ಎಂದು ಪೀಠ ತಿಳಿಸಿದೆ.

ಕಳೆದ ವರ್ಷದ ಫೆಬ್ರವರಿಯಲ್ಲಿ, ಆಗಿನ ಆಡಳಿತಾರೂಢ ಎಐಎಡಿಎಂಕೆ ಸರ್ಕಾರವು ವನ್ನಿಯರ್‌ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿತ್ತು. ಇದರ ಪ್ರಕಾರ, ವನ್ನಿಯರ್‌ ಸಮುದಾಯದವರಿಗೆ ಶೇ 10.5ರಷ್ಟು ಆಂತರಿಕ ಮೀಸಲಾತಿಯನ್ನು ಒದಗಿಸಲಾಗಿತ್ತು. ಜುಲೈ 2021ರಲ್ಲಿ ಡಿಎಂಕೆ ಸರ್ಕಾರವು ಮಸೂದೆಯನ್ನು ಅನುಷ್ಠಾನಗೊಳಿಸಿತ್ತು.