ಮನೆ ರಾಜಕೀಯ ಜನರ ಸಂಕಷ್ಟಕ್ಕೆ ಸ್ಪಂದಿಸದಿದ್ದರೇ ಮುಲಾಜಿಲ್ಲದೆ ಕ್ರಮ: ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಿಎಂ ಸಿದ್ಧರಾಮಯ್ಯ

ಜನರ ಸಂಕಷ್ಟಕ್ಕೆ ಸ್ಪಂದಿಸದಿದ್ದರೇ ಮುಲಾಜಿಲ್ಲದೆ ಕ್ರಮ: ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಿಎಂ ಸಿದ್ಧರಾಮಯ್ಯ

0

ದಾವಣಗೆರೆ: ಜನರು ಬದಲಾವಣೆ ಬಯಸಿ ನಮ್ಮನ್ನ ಆಯ್ಕೆ ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸದಿದ್ದರೇ ಯಾರ ಮೇಲೆ ಸಹ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ಧರಾಮಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Join Our Whatsapp Group

ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಜನಪ್ರತಿನಿಧಿಗಳಿಗೆ ವಿಳಂಬ ಮಾಡದೇ ಸ್ಪಂದಿಸಬೇಕು. ಒಂದು ವೇಳೆ ವಿಳಂಬವಾದ್ರೆ ಅದು ಒಂದು ರೀತಿಯಲ್ಲಿ ಭ್ರಷ್ಟಾಚಾರವೇ ಸರಿ ಎಂದು ಹೇಳಿದರು.

ಜನರ ಸಂಕಷ್ಟಕ್ಕೆ ಸ್ಪಂದಿಸುವ ಮತ್ತು ಜನರ ಜೊತೆ ಸೌಜನ್ಯತೆಯಿಂದ ನಡೆದುಕೊಳ್ಳಬೇಕು. ಜನರ ಸಮಸ್ಯೆಗೆ ಬಗ್ಗೆ ಅಸಡ್ಡೆ ಉಡಾಫೆ ಮಾಡಿದರೆ, ಅಂತಹ ಅಧಿಕಾರಿಗಳಿಗೆ ಜಾಗ ಇಲ್ಲ ಎಂದರು.

ಕಂದಾಯ, ಕೃಷಿ, ಪೊಲೀಸ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಬರುವ ಜನರ ಸಮಸ್ಯೆಗಳಿಗೆ ಸ್ಪಂದಿಸಿ. ತಹಶೀಲ್ದಾರ ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಹೆಚ್ಚಿದೆ‌. ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕು ಹಾಗೂ ಹೊಬಳಿ‌ ಮಟ್ಟಕ್ಕೆ ಭೇಟಿ ನೀಡಬೇಕು. ಯಾವುದೇ ವಿಚಾರದ ಬಗ್ಗೆ ಮಾಧ್ಯಮಗಳಲ್ಲಿ ಬಂದರೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ರೈತರಿಗೆ ಬೀಜ, ಗೊಬ್ಬರ ಪೂರೈಕೆ ಸೂಚನೆ

ಎಸಿ ಕಚೇರಿಗಳಲ್ಲಿ‌ಕುಳಿತು ಕಾರ್ಯಬಾರ ಮಾಡಿ. ನಿಮಗೆ ಸರ್ಕಾರವೇ ಬೇಕಾದಷ್ಟು ಸೌಲಭ್ಯ ನೀಡಿದೆ. ಈ ಸೌಲಭ್ಯಗಳು ಜನರ ಕಲ್ಯಾಣಕ್ಕಾಗಿ ನೀಡಲಾಗಿದೆ. 20 ಸಾವಿರ ಹೆಕ್ಟೇರ ಪ್ರದೇಶದಲ್ಲಿ ಅಲಿಕಲ್ಲು ಮಳೆಗೆ ದಾವಣಗೆರೆ ಜಿಲ್ಲೆಯಲ್ಲಿ ಆಗಿದೆ. ತಕ್ಷಣ ವರದಿ ಕೊಡಿ. ಜೂನ್ 9 ಮಳೆಗಾಲ ಶುರುವಾಗುತ್ತದೆ. ಆಗ ಕೃಷಿ ಚಟುವಟಿಕೆ ಆರಂಭವಾಗುತ್ತದೆ‌. ರೈತರಿಗೆ ಬೀಜ, ಗೊಬ್ಬರ, ಕೀಟನಾಶಕ ಅಗತ್ಯ ಪೂರೈಕೆ ಮಾಡಬೇಕು. ವಿಳಂಬಕ್ಕೆ ಅವಕಾಶವಿಲ್ಲ ಎಂದರು.