ಬೆಂಗಳೂರು: ವಾರ್ತಾ ಮತ್ತು ಪ್ರಸಾರ ಇಲಾಖೆ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ.
1998ನೇ ಬ್ಯಾಚಿನ ಕರ್ನಾಟಕ ಕೆಡರ್ ನ ಐಪಿಎಸ್ ಅಧಿಕಾರಿಯಾಗಿರುವ ನಿಂಬಾಳ್ಕರ್ ಅವರ ಈ ನೂತನ ಹುದ್ದೆಯು ಮೈಸೂರು ದಕ್ಷಿಣ ವ್ಯಾಪ್ತಿಯ ಐಜಿಪಿ ಹುದ್ದೆ ಮತ್ತು ಜವಾಬ್ದಾರಿಗೆ ತತ್ಸಮಾನವಾಗಿದೆಯೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.
2022ರಿಂದ ಹೇಮಂತ್ ನಿಂಬಾಳ್ಕರ್ ಅವರಿಗೆ ಅಧ್ಯಯನಕ್ಕಾಗಿ ರಜೆ ನೀಡಲಾಗಿತ್ತು.ಪ್ರಸ್ತುತ ಅಧ್ಯಯನ ರಜೆ ರದ್ದುಗೊಳಿಸಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಈ ಮಹತ್ವದ ಹುದ್ದೆಯ ಜವಾಬ್ದಾರಿಯನ್ನು ಈ ಹಿರಿಯ ಐಪಿಎಸ್ ಅಧಿಕಾರಿಗೆ ವಹಿಸಿಕೊಟ್ಟಿದೆ.
ಈ ಹಿಂದೆ ಡಿಐಪಿಆರ್ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವಿನೋತ್ ಪ್ರಿಯಾ ಅವರನ್ನು ಆ ಸೇವೆಯಿಂದ ಬಿಡುಗಡೆ ಮಾಡಿದೆ.