ಬೆಂಗಳೂರು: ಇದೀಗ ತೀವ್ರ ಕುತೂಹಲ ಮೂಡಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು ನಗರ ಉಸ್ತುವಾರಿ ಸಚಿವರಾಗಿ ಡಿ.ಕೆ.ಶಿವಕುಮಾರ್
ತುಮಕೂರು ಜಿಲ್ಲಾ ಉಸ್ತುವಾರಿ-ಡಾ.ಜಿ.ಪರಮೇಶ್ವರ್
ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹೆಚ್.ಕೆ.ಪಾಟೀಲ್
ಬೆಂಗಳೂರು ಗ್ರಾಮಾಂತರ-ಕೆ.ಹೆಚ್.ಮುನಿಯಪ್ಪ
ರಾಮಲಿಂಗಾರೆಡ್ಡಿ-ರಾಮನಗರ,
ಕೆ.ಜೆ.ಜಾರ್ಜ್-ಚಿಕ್ಕಮಗಳೂರು
ಎಂ.ಬಿ.ಪಾಟೀಲ್-ವಿಜಯಪುರ
ದಿನೇಶ್ ಗುಂಡೂರಾವ್-ದಕ್ಷಿಣ ಕನ್ನಡ
ಹೆಚ್.ಸಿ.ಮಹದೇವಪ್ಪ-ಮೈಸೂರು,
ಸತೀಶ್ ಜಾರಕಿಹೊಳಿ-ಬೆಳಗಾವಿ
ಪ್ರಿಯಾಂಕ್ ಖರ್ಗೆ-ಕಲಬುರಗಿ,
ಶಿವಾನಂದಪಾಟೀಲ್-ಹಾವೇರಿ
ಜಮೀರ್ ಅಹ್ಮದ್ ಖಾನ್-ವಿಜಯನಗರ
ಶರಣಬಸಪ್ಪ ದರ್ಶನಾಪುರ-ಯಾದಗಿರಿ
ಈಶ್ವರ್ ಖಂಡ್ರೆ-ಬೀದರ್,
ಚಲುವರಾಯಸ್ವಾಮಿ-ಮಂಡ್ಯ
ಎಸ್.ಎಸ್.ಮಲ್ಲಿಕಾರ್ಜುನ್-ದಾವಣಗೆರೆ
ಸಂತೋಷ್ ಲಾಡ್-ಧಾರವಾಡ
ಶರಣಪ್ರಕಾಶ್ ಪಾಟೀಲ್-ರಾಯಚೂರು
ಆರ್.ಬಿ.ತಿಮ್ಮಾಪುರ-ಬಾಗಲಕೋಟೆ
ಕೆ.ವೆಂಕಟೇಶ್-ಚಾಮರಾಜನಗರ
ಕೊಪ್ಪಳ-ಶಿವರಾಜ್ ತಂಗಡಗಿ
ಜಿಲ್ಲೆಗಳ ಉಸ್ತುವಾರಿ ಸ್ಥಾನಕ್ಕೆ ಪೈಪೋಟಿ ಶುರುವಾಗಿತ್ತು, ಅದರಲ್ಲೂ ಮುಖ್ಯವಾಗಿ ಒಂದೇ ಜಿಲ್ಲೆಯ ಇಬ್ಬರು ಸಚಿವರುಗಳ ನಡುವೆ ಭಾರೀ ಲಾಬಿಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ತಲೆನೋವಾಗಿತ್ತು. ಆದರೆ, ಇದೀಗ ಎಲ್ಲಾ ಗೊಂದಲಗಳನ್ನು ನಿವಾರಿಸಿ ಅಂತಿಮವಾಗಿ ಜಿಲ್ಲಾ ಉಸ್ತುವಾರಿಗಳನ್ನ ನೇಮಕ ಮಾಡಲಾಗಿದೆ.