ಮನೆ ತಂತ್ರಜ್ಞಾನ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ವೇಗವಾಗಿ ಬೆಳವಣಿಗೆ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ವೇಗವಾಗಿ ಬೆಳವಣಿಗೆ

0

ಬೆಂಗಳೂರು: ವಿಲ್ಲಾ ಮಾರಾಟದ ಬೆಲೆ ನಿಮ್ಮನ್ನು ಸಂಪೂರ್ಣವಾಗಿ ಆಶ್ಚರ್ಯಗೊಳಿಸಬಹುದು.  ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಇಳಿಕೆ? ಇಲ್ಲಿದೆ ಸಂಪೂರ್ಣ ಮಾಹಿತಿ ‘2020 ರಿಂದ 2022ರೊಳಗೆ ದೇಶದ ಇವಿ ಉದ್ಯಮದಲ್ಲಿ ಉದ್ಯೋಗದ ಪ್ರಮಾಣ ಶೇಕಡ 110% ವಾರ್ಷಿಕ ದರದಲ್ಲಿ ಬೆಳವಣಿಗೆ ಕಂಡಿದೆ.

Join Our Whatsapp Group

ಕಳೆದ ವರ್ಷ ಈ ಕ್ಷೇತ್ರದಲ್ಲಿ ಬೆಂಗಳೂರಿನಲ್ಲಿ 0.4 ಮಿಲಿಯನ್ ಅಂದರೆ, ಶೇಕಡ 28% ಉದ್ಯೋಗ ಸೃಷ್ಟಿಯಾಗಿದ್ದವು. ಇದನ್ನು ಗಮನಿಸಿದಾಗ ನಗರವು ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಹಾಗೂ ಆವಿಷ್ಕಾರದಲ್ಲಿ ಮುಂದಿದ್ದು, ಭಾರತದ ಇವಿ ಹಬ್ ಆಗಿ ಹೊರಹೊಮ್ಮಲಿದೆ’ ಎಂದು ಕೆರೀರ್ನೆಟ್ ಚೀಫ್ ಬ್ಯುಸಿನೆಸ್ ಆಫೀಸರ್ ನೀಲಭ್ ಶುಕ್ಲಾ ಹೇಳಿದ್ದಾರೆ. ಬಹುನಿರೀಕ್ಷಿತ ಹೊಸ ಹೋಂಡಾ ಎಲಿವೇಟ್ ವಾಕ್‌ ರೌಂಡ್ ವೀಡಿಯೊ ಎಲೆಕ್ಟ್ರಿಕ್ ವಾಹನಗಳ ಹೆಚ್ಚು ಸಂಶೋಧನೆಗಳು ಬೆಂಗಳೂರು ಕೇಂದ್ರೀಕೃತವಾಗಿ ನಡೆಯುತ್ತಿದ್ದು, ನಗರದ ಸುತ್ತಲೂ ನಿಧಾನವಾಗಿ ಉತ್ಪಾದನಾ ಚಟುವಟಿಕೆಗಳು ಹೆಚ್ಚಾಗಲಿವೆ. ಅದರಲ್ಲಿಯೂ ಇವಿ ಉದ್ಯಮಕ್ಕೆ ಮುಖ್ಯವಾಗಿ ಬೇಕಾಗಿರುವುದು ಕೌಶಲ್ಯತೆ. ಅದಕ್ಕೆ ಸಂಬಂಧಿಸಿದ ತರಬೇತಿಗಳು ಕೂಡ ಶುರುವಾಗುತ್ತಿವೆ. ಜೊತೆಗೆ ಈ ಕ್ಷೇತ್ರದಲ್ಲಿ ಹೇಗೆ ಉದ್ಯೋಗ ಸೃಷ್ಟಿಯಾಗುತ್ತದೆಯೋ ಅದಕ್ಕೆ ತಕ್ಕಂತೆ ವೇತನವು ಹೆಚ್ಚಾಗುತ್ತದೆ ಎಂದು ವರದಿ ಹೇಳಿದೆ.

ದೇಶದ ಬಹುತೇಕ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯನ್ನು ಬೆಂಗಳೂರು ಮೂಲದ ಕಂಪನಿಗಳೇ ಆವರಿಸಿಕೊಂಡಿವೆ. ಪ್ರಮುವಾಗಿ ಓಲಾ, ಎಥರ್, ಸಿಂಪಲ್ ಎನರ್ಜಿ, ಅಲ್ಟ್ರಾವೈಲೆಟ್ ಹಾಗೂ ಪ್ರವೇಗ್ ಇವೆ. ಅದರಲ್ಲೂ ಓಲಾ ತನ್ನ ಕೈಗೆಟುಕುವ ಬೆಲೆಯ ಎಸ್1 ಸರಣಿ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದ ಮೂಲಕ ಇವಿ ದ್ವಿಚಕ್ರ ಮಾರುಕಟ್ಟೆಯಲ್ಲಿ ಕೆಲವು ತಿಂಗಳಿಂದ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಎಥರ್ ಸಹ 450X ಸ್ಕೂಟರ್ ಮೂಲಕ ಖ್ಯಾತಿಗಳಿಸಿದೆ.

ಸಿಂಪಲ್ ಎನರ್ಜಿ ತನ್ನ ಬಹುನೀರಿಕ್ಷಿತ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ ನ್ನು ಕೆಲವೇ ದಿನಗಳ ಹಿಂದೆ, ಬಿಡುಗಡೆ ಮಾಡಿ, ವಿತರಣೆಯನ್ನು ಪ್ರಾರಂಭಿಸಿದೆ. ಇದು ಫುಲ್ ಚಾರ್ಜಿನಲ್ಲಿ 212 km ರೇಂಜ್ ನೀಡಲಿದ್ದು, ರೂ.1.45 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಬೆಂಗಳೂರಿನ ಪ್ರವೈಗ್ ಇವಿ ಕೂಡ ತನ್ನ ಕಾರಿನ ಮೂಲಕ ದೊಡ್ಡಮಟ್ಟದಲ್ಲಿ ಸುದ್ದಿ ಮಾಡಿತ್ತು. ಈಗಾಗಲೇ ಓಲಾ ಹಾಗೂ ಸಿಂಪಲ್ ಎನರ್ಜಿ ಕಂಪನಿಗಳು ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯನ್ನು ಪ್ರವೇಶಿಸುವುದಾಗಿ ಘೋಷಿಸಿವೆ.

ಇವೆಲ್ಲ ಬೆಳವಣಿಗೆಯನ್ನು ಗಮನಿಸಿದಾಗ ಬೆಂಗಳೂರು ಮಹಾನಗರಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯ ಶಕ್ತಿ ಕೇಂದ್ರವಾಗುವುದರಲ್ಲಿ ಎರಡು ಮಾತಿಲ್ಲ. ಆದರೆ, ಇಲ್ಲಿ ಕನ್ನಡಿಗರಿಗೆ ಎಷ್ಟು ಉದ್ಯೋಗಳು ದೊರೆಯುತ್ತವೆ ಎಂಬುದು ಮುಂಬರುವ ದಿನಗಳಲ್ಲಿ ತಿಳಿಯಲಿದೆ. ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.