ಸಿಲಿಗುರಿ: ಕೆಲ ದಿನಗಳ ಹಿಂದೆ ಕರ್ನಾಟಕದ ಕೊಪ್ಪಳದಲ್ಲಿ ಕೆಜಿಗೆ 2.70 ಲಕ್ಷ ರೂ. ಮಾರಾಟವಾಗಿದ್ದ ಮಿಯಾಝಕಿ ಮಾವು ಪಶ್ಚಿ ಬಂಗಾಳದಲ್ಲೂ ಭಾರೀ ಬೆಲೆಗೆ ಮಾರಾಟವಾಗಿದೆ.
ಜಪಾನ್ ಮೂಲದ ವಿಶ್ವ ಅತಿ ದುಬಾರಿ ಮಾವು ಎನ್ನುವ ಖ್ಯಾತಿ ಪಡೆದಿರುವ ಮಿಜಾಝಕಿ ಮಾವನ್ನು ಕೆಜಿಗೆ 2.75 ಲಕ್ಷ ರೂ. ನೀಡಿ ಖರೀದಿಸಲಾಗಿದೆ.
ಪಶ್ಚಿಮ ಬಂಗಾಳ ರಾಜ್ಯದ ಗಿರಿ ಪ್ರದೇಶ ಸಿಲಿಗುರಿಯಲ್ಲಿ ಆಯೋಜಿಲಾಗಿರುವ ಮೂರು ದಿನಗಳ ಮಾವು ಉತ್ಸವದಲ್ಲಿ ದಾಖಲೆ ಬೆಲೆಗೆ ಮಾರಾಟವಾಗಿರುವುದು ವಿಶೇಷ. ಸಿಲಿಗುರಿಯ ಮಾಡೆಲ್ಲಾ ಕೇರ್ ಟೇಕರ್ ಸೆಂಟರ್ ಹಾಗೂ ಶಾಲೆಯಲ್ಲಿ ಪ್ರವಾಸೋದ್ಯಮ ಸಂಸ್ಥ ಸಹಯೋಗದೊಂದಿಗೆ ಮಾವು ಉತ್ಸವ ಆಯೋಜಿಸಲಾಗಿದೆ.
ಇಲ್ಲಿ 262 ಬಗೆಯ ಮಾವುಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ. ಇದರಲ್ಲಿ ಮಿಯಾಝಕಿಯೇ ಪ್ರಮುಖ ಆಕರ್ಷಣೆಯಾಗಿತ್ತು.
ಈ ಮಾವಿನ ತಳಿ ಮಾರಾಟಕ್ಕೆ ಇಟ್ಟಿದ್ದ ಮಾಲೀಕರಿಂದ ಮಾಹಿತಿಗಳನ್ನು ಪಡೆದ ಕೆಲವರು ಖರೀದಿ ಮಾಡಿದ್ದಾರೆ.
ಕಳೆದ ತಿಂಗಳು ಕೊಪ್ಪಳದಲ್ಲಿ ತೋಟಗಾರಿಕೆ ಇಲಾಖೆ ನಡೆಸಿದ್ದ ಮಾವು ಮೇಳದಲ್ಲಿ ಮಿಯಾಝಕಿ ಮಾವು ಎಲ್ಲರ ಗಮನ ಸೆಳೆದಿತ್ತು . ನೂರಾರು ಮಾವುಗಳ ನಡುವೆಯೂ ಮಿಯಾಝಕಿ ನೆನೆದವರ ಕಣ್ಣು ಕಕ್ಕುವಂತಿತ್ತು.