ಮನೆ ಆಟೋ ಮೊಬೈಲ್ ಹೋಂಡಾ ಡಿಯೋ ಹೆಚ್-ಸ್ಮಾರ್ಟ್ ಸ್ಕೂಟರ್ ಬಿಡುಗಡೆ

ಹೋಂಡಾ ಡಿಯೋ ಹೆಚ್-ಸ್ಮಾರ್ಟ್ ಸ್ಕೂಟರ್ ಬಿಡುಗಡೆ

0

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿರುವ ಹೋಂಡಾ ಟು ವ್ಹೀಲರ್ ಕಂಪನಿಯು ತನ್ನ ಪ್ರಮುಖ ದ್ವಿಚಕ್ರ ವಾಹನಗಳಲ್ಲಿ ವಿಶೇಷ ಫೀಚರ್ಸ್ ಹೊಂದಿರುವ ಹೆಚ್-ಸ್ಮಾರ್ಟ್ ವೆರಿಯೆಂಟ್ ಬಿಡುಗಡೆ ಮಾಡುತ್ತಿದ್ದು, ಇದೀಗ ಜನಪ್ರಿಯ ಡಿಯೋ ಸ್ಕೂಟರ್ ನಲ್ಲೂ ಕೂಡಾ ಹೆಚ್-ಸ್ಮಾರ್ಟ್ ವೆರಿಯೆಂಟ್ ಪರಿಚಯಿಸಿದೆ.

Join Our Whatsapp Group

ವಿಶೇಷ ಫೀಚರ್ಸ್ ಹೊಂದಿರುವ ಡಿಯೋ ಹೆಚ್-ಸ್ಮಾರ್ಟ್ ವೆರಿಯೆಂಟ್ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 77,712 ಬೆಲೆ ಹೊಂದಿದ್ದು, ಇದು ಈ ಹಿಂದೆ ಬಿಡುಗಡೆಯಾದ ಆಕ್ಟೀವಾ 6ಜಿ ಹೆಚ್-ಸ್ಮಾರ್ಟ್ ಮಾದರಿಯಲ್ಲಿ ಹೊಸ ಫೀಚರ್ಸ್ ಪಡೆದುಕೊಂಡಿದೆ.

ಡಿಯೋ ಸ್ಕೂಟರ್ ಮಾದರಿಯು ಮಾರುಕಟ್ಟೆಯಲ್ಲಿ ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ವೆರಿಯೆಂಟ್ ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಇದೀಗ ಹೋಂಡಾ ಕಂಪನಿಯು ಡಿಲಕ್ಸ್ ವೆರಿಯೆಂಟ್ ಆಧರಿಸಿ ಹೆಚ್-ಸ್ಮಾರ್ಟ್ ವೆರಿಯೆಂಟ್ ಪರಿಚಯಿಸಿದೆ. ಹೊಸ ಆವೃತ್ತಿಯು ಡಿಲಕ್ಸ್ ವೆರಿಯೆಂಟ್ ಗಿಂತಲೂ ರೂ. 3,500 ಹೆಚ್ಚುವರಿ ಬೆಲೆ ಹೊಂದಿದ್ದು, ವಿಶೇಷ ಫೀಚರ್ಸ್ ಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಹೆಚ್-ಸ್ಮಾರ್ಟ್ ವೆರಿಯೆಂಟ್ ವಿಶೇಷತೆಗಳೇನು? ಹೋಂಡಾ ಕಂಪನಿಯು ಗ್ರಾಹಕರಿಗೆ ವಿಭಿನ್ನ ಚಾಲನಾ ಅನುಭವ ನೀಡುವುದರ ಜೊತೆಗೆ ವಾಹನಗಳ ಸುರಕ್ಷತೆ ಹೆಚ್ಚಿಸಲು ನಿಟ್ಟಿನಲ್ಲಿ ಹೊಸದಾಗಿ ಹೆಚ್-ಸ್ಮಾರ್ಟ್ ಫೀಚರ್ಸ್ ಹೊಂದಿರುವ ವೆರಿಯೆಂಟ್ ಪರಿಚಯಿಸುತ್ತಿದ್ದು, ಹೊಸ ವೆರಿಯೆಂಟ್ ನಲ್ಲಿ ಹಲವಾರು ಸ್ಮಾರ್ಟ್ ಫೀಚರ್ಸ್ ಒಳಗೊಂಡ ಪ್ಯಾಕೇಜ್ ನೀಡಲಾಗುತ್ತಿದೆ.

ಹೆಚ್-ಸ್ಮಾರ್ಟ್ ಪ್ಯಾಕೇಜ್ ನಲ್ಲಿ ಸ್ಮಾರ್ಟ್ ಸೇಫ್, ಸ್ಮಾರ್ಟ್ ಅನ್ ಲಾಕ್, ಸ್ಮಾರ್ಟ್ ಫೈಂಡ್ ಜೊತೆಗೆ ಸುಧಾರಿತ ಡಿಸ್ ಪ್ಲೇ ಸೌಲಭ್ಯ ಜೋಡಣೆ ಮಾಡಲಾಗಿದ್ದು, ಹೊಸ ಡಿಸ್ ಪ್ಲೇ ನಲ್ಲಿ ಇದೀಗ ರಿಯಲ್ ಟೈಮ್ ಮೈಲೇಜ್ ಮಾಹಿತಿಯನ್ನು ಸಹ ಪಡೆಯಬಹುದಾಗಿದೆ. ಹಾಗೆಯೇ ಹೊಸ ಸ್ಕೂಟರ್ ನಲ್ಲಿಆ್ಯಂಟಿ ಥೆಫ್ಟ್ ಮತ್ತು ರೀಮೊಟ್ ಕೀ ಸೌಲಭ್ಯಗಳನ್ನು ಜೋಡಿಸಲಾಗಿದ್ದು, ಇವು ಹೊಸ ವಾಹನಕ್ಕೆ ಹೆಚ್ಚಿನ ಸುರಕ್ಷತೆ ನೀಡುವುದರ ಜೊತೆ ಗ್ರಾಹಕರಿಗೆ ವಿಭಿನ್ನ ಅನುಭವ ನೀಡಲಿವೆ.

ಇನ್ನು ಹೊಸ ಡಿಯೋ ಹೆಚ್-ಸ್ಮಾರ್ಟ್ ಸ್ಕೂಟರ್ ನಲ್ಲಿ ಸಾಮಾನ್ಯ ಮಾದರಿಯಲ್ಲಿರುವಂತೆಯೇ 7.65 ಹಾರ್ಸ್ ಪವರ್ ಉತ್ಪಾದನೆ ಪ್ರೇರಿತ 109.51 ಸಿಸಿ ಎಂಜಿನ್ ಜೋಡಿಸಲಾಗಿದ್ದು, ಇದು ಕಳೆದ ಏಪ್ರಿಲ್ 1ರಿಂದ ಜಾರಿಗೆ ಬಂದಿರುವ ಬಿಎಸ್6 2ನೇ ಹಂತದ ಮಾಲಿನ್ಯ ನಿಯಂತ್ರಣ ಮಾನದಂಡದೊಂದಿಗೆ ಉತ್ತಮ ಇಂಧನ ದಕ್ಷತೆ ಹೊಂದಿದೆ.