ಮನೆ ರಾಷ್ಟ್ರೀಯ ಕಣ್ಣೂರು: ಬೀದಿ ನಾಯಿಗಳ ದಾಳಿ; ಮೂಗ ಬಾಲಕ ಸಾವು

ಕಣ್ಣೂರು: ಬೀದಿ ನಾಯಿಗಳ ದಾಳಿ; ಮೂಗ ಬಾಲಕ ಸಾವು

0
ಸಾಂದರ್ಭಿಕ ಚಿತ್ರ

ಕಣ್ಣೂರು(ಕೇರಳ): ಬೀದಿ ನಾಯಿ ಕಚ್ಚಿ 10 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕಣ್ಣೂರಿನ ಮುಝಾಪಿಲಂಗಾಡ್​ ನಲ್ಲಿ ಭಾನುವಾರ ಸಂಜೆ ನಡೆದಿದೆ.

Join Our Whatsapp Group

ಮೂಗನಾಗಿದ್ದ ನಿಹಾಲ್ ಮೃತಪಟ್ಟಿದ್ದಾನೆ.

ನಿಹಾಲ್ ಬಹ್ರೇನ್ ಮತ್ತು ನುಸೀಫಾದಲ್ಲಿ ಕೆಲಸ ಮಾಡುವ ನೌಶಾದ್ ಅವರ ಮಗ. ನಿಹಾಲ್​ಗೆ ಚಿಕ್ಕ ವಯಸ್ಸಿನಿಂದಲೂ ಮಾತನಾಡಲು ಬರುವುದಿಲ್ಲ. ಭಾನುವಾರ ಸಂಜೆ 5 ಗಂಟೆ ಸುಮಾರು ನಿಹಾಲ್​ ಮನೆಯ ಗೇಟ್​ ನಿಂದ ಹೊರಗೆ ತೆರಳಿದ್ದಾನೆ. ಈ ವೇಳೆ ರಕ್ಕಸ ಬೀದಿ ನಾಯಿಗಳು ನಿಹಾಲ್​ ಮೇಲೆ ದಾಳಿ ನಡೆಸಿವೆ.

ನಿಹಾಲ್​ ಕೆಲ ಗಂಟೆಗಳ ಬಳಿಕ ಕಾಣದೇ ಇದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಸುಮಾರು 8.30ರ ವೇಳೆ ಮನೆಯಿಂದ 300 ಮೀಟರ್ ದೂರದಲ್ಲಿರುವ ಖಾಲಿ ಮನೆಯೊಂದರ ಬಳಿ ನಿಹಾಲ್​ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದನು.

ನಿಹಾಲ್‌ ನನ್ನು ಸ್ಥಳೀಯರು ಪತ್ತೆ ಮಾಡಿ, ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ, ನಿಹಾಲ್​ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇನ್ನು ನಿಹಾಲ್​ ಮೃತದೇಹವನ್ನು ತಲಶ್ಶೇರಿ ಆಸ್ಪತ್ರೆಗೆ ರವಾನಿಸಲಾಗಿತ್ತು.