ಮನೆ ರಾಜ್ಯ ಶಿವಮೊಗ್ಗ: ಇಂದಿನಿಂದ ಸಿಗಂದೂರು ಲಾಂಚ್ ನಲ್ಲಿ ವಾಹನಗಳಿಗೆ ಅವಕಾಶವಿಲ್ಲ

ಶಿವಮೊಗ್ಗ: ಇಂದಿನಿಂದ ಸಿಗಂದೂರು ಲಾಂಚ್ ನಲ್ಲಿ ವಾಹನಗಳಿಗೆ ಅವಕಾಶವಿಲ್ಲ

0

ಶಿವಮೊಗ್ಗ: ಇಂದಿನಿಂದ ಸಿಗಂದೂರು ಲಾಂಚ್ ನಲ್ಲಿ ವಾಹನಗಳಿಗೆ ಅವಕಾಶ ನೀಡದೇ, ಕೇವಲ ಜನರನ್ನು ಮಾತ್ರ ಶರಾವತಿ ಹಿನ್ನೀರಿನ ಒಂದು ಬದಿಯಿಂದ ಇನ್ನೊಂದು ಬದಿಗೆ ಸಾಗಣೆ ಮಾಡಲು ನಿರ್ಧರಿಸಲಾಗಿದೆ.

Join Our Whatsapp Group

ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ‌ ಗಣನೀಯವಾಗಿ ತಗ್ಗಿರುವ ಕಾರಣದಿಂದಾಗಿ ಹಿನ್ನೀರಿನಲ್ಲಿ‌ ವಾಹನಗಳನ್ನು ಹೇರಿಕೊಂಡು ಲಾಂಚ್ ಚಾಲನೆ ಮಾಡಲು ಸಾಧ್ಯವಾಗದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇನ್ನು ವಾಹನಗಳ ಮೂಲಕ ಸಿಗಂದೂರಿಗೆ ತೆರಳಬೇಕೆಂದರೆ 130 ಕಿಲೋಮೀಟರ್ ಸುತ್ತಿಕೊಂಡು ಬರಬೇಕು.

ಇಲ್ಲವೇ ಶರಾವತಿ ಹಿನ್ನೀರಿನ ಅಂಬಾರಗೋಡ್ಲು ಭಾಗದಲ್ಲಿ ವಾಹನಗಳನ್ನು ನಿಲ್ಲಿಸಿ ಲಾಂಚ್ ಮೂಲಕ ಶರಾವತಿ ಹಿನ್ನೀರನ್ನು ದಾಟಿ ಬಳಿಕ ಆ ಭಾಗದಲ್ಲಿ‌ ಸಿಗುವ ಬಾಡಿಗೆ ವಾಹನಗಳಲ್ಲಿ ಸಿಗಂದೂರಿಗೆ ಭೇಟಿ ನೀಡಬೇಕಿದೆ.

ಲಾಂಚ್ ನಲ್ಲಿ ವಾಹನ ಸಾಗಣೆ ಸ್ಥಗಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದ್ವೀಪವಾಸಿಗಳು ಅತಂತ್ರರಾಗಲಿದ್ದಾರೆ.

ಶರಾವತಿ ಹಿನ್ನೀರಿನ ಆಚೆಗಿನ ದ್ವೀಪ ಪ್ರದೇಶದಲ್ಲಿ 30 ಸಾವಿರಕ್ಕೂ ಅಧಿಕ ಜನರಿದ್ದಾರೆ. ಇವರು ತಾಲೂಕು ಕೇಂದ್ರ ಸಾಗರಕ್ಕೆ ಹಾಗೂ ತಾವು ಕೆಲಸ ಮಾಡುವ ಸ್ಥಳಗಳಿಗೆ ತೆರಳಲು ಹಿನ್ನೀರನ್ನು ದಾಟಿ ಬರಲೇಬೇಕು.

ಇದೀಗ ಲಾಂಚ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸುತ್ತಿರುವುದರಿಂದ ತಮ್ಮ ವಾಹನಗಳಿಲ್ಲದೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ.