ಮನೆ ಯೋಗಾಸನ ಯೋಗಾಮುದ್ರಾಸನ

ಯೋಗಾಮುದ್ರಾಸನ

0

ಯೋಗಾಮುದ್ರಾಸನ ಕುಂಡಲಿನೀ ಶಕ್ತಿಯನ್ನು ವಿಶೇಷವಾಗಿ ಉದ್ದೀಪನಗೊಳಿಸುವುದರಲ್ಲಿ ಸಹಕಾರಿ ಅಲ್ಲದೆ ಧ್ಯಾನಕ್ಕೂ ಉತ್ತಮವಾದುದು.

Join Our Whatsapp Group

ಮಾಡುವ ಕ್ರಮ

ಯೋಗಾಭ್ಯಾಸಿಯು ಎದೆಯೆತ್ತಿ, ನೇರವಾಗಿ ಮೊದಲು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು. ಆನಂತರ ಎರಡೂ ಕೈಗಳನ್ನು ಬೆನ್ನಿನ ಮೇಲೆ ಒಂದು ಇನ್ನೊಂದನ್ನು ಛೇದಿಸುವಂತೆ ಇಡಬೇಕು ಮತ್ತು ಅದೇ ಸ್ಥಿತಿಯಲ್ಲಿ ಎಡಗೈಯಿಂದ ಎಡ ಗಾಲಿನ ಹೆಬ್ಬೆರಳನ್ನೂ, ಬಲಗೈಯಿಂದ ಬಲಗಾಲಿನ ಹೆಬ್ಬೆರಳನ್ನೂ ಹಿಡಿಯಬೇಕು. ಒಮ್ಮೆ ದೀರ್ಘವಾಗಿ ಉಸಿರನ್ನು ತೆಗೆದುಕೊಂಡು ನಿಧನವಾಗಿ ಉಸಿರನ್ನು ಹೊರಕ್ಕೆ ಬಿಡುತ್ತಾ ಮುಂದಕ್ಕೆ ಚಿತ್ರದಲ್ಲಿ ತೋರಿಸುವಂತೆ ಬಾಗಬೇಕು.  ಒಮ್ಮೆ ಬಗ್ಗಿದನಂತರ ಆ ಸ್ಥಿತಿಯಲ್ಲಿ ಅತಿ ನಿಧನವಾಗಿ ಉಸಿರಾಡಬೇಕು.  ಈ ಸ್ಥಿತಿಯಲ್ಲಿ ಪೃಷ್ಠಭಾಗ, ಕಾಲಿನ ತೊಡೆಗಳು ಮತ್ತು ಹಣೆ ನೆಲದ ಮೇಲೆ ಇರುತ್ತವೆ. ಈ ಸ್ಥಿತಿಯಲ್ಲೇ ಸಮತೋಲನವನ್ನು ಪಡೆಯಲು ಸಾಧ್ಯ. ಪೃಷ್ಠಭಾಗವು ನೆಲದಲ್ಲಿದ್ದರೆ ಯೋಗಾಭ್ಯಾಸಿಯು ಪಕ್ಕಕ್ಕೆ ವಾಲುವ ಸಂಭವವಿದೆ. ಮೂರರಿಂದ ಐದು ನಿಮಿಷಗಳವರೆಗೆ ಯೋಗಮುದ್ರಾಸನದಲ್ಲಿದ್ದು ಅನಂತರ ಕಾಲುಗಳನ್ನು ಬದಲಾಯಿಸಬೇಕು.

ಲಾಭಗಳು: ಈ ಆಸನವು ವಿಶೇಷವಾಗಿ ಕೈ, ಕಾಲು, ಹೊಟ್ಟೆ, ಸೊಂಟ ಮುಂತಾದ ಶರೀರದ ಅವಯವಗಳಿಗೆ ಹೆಚ್ಚಿನ ವ್ಯಾಯಾಮವನ್ನು ಒದಗಿಸುತ್ತದೆ. ಎದೆ ಮತ್ತು ಶ್ವಾಸಕೋಶಗಳು ಸಾಕಷ್ಟು ಬಲಿಷ್ಠವಾಗುವವು. ವಿಶೇಷವಾಗಿ ಮಲಬದ್ಧತೆಯು ನಿವಾರಣೆಯಾಗುವುದರೊಂದಿಗೆ ಜೀರ್ಣಶಕ್ತಿಯೂ ಹೆಚ್ಚುವುದು. ಮೂಳೆರೋಗಿಗಳಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.