ಮನೆ ರಾಷ್ಟ್ರೀಯ ಮಹಿಳೆ ಜೊತೆ ಸಂಬಂಧ: ಬ್ಲ್ಯಾಕ್‌ ಮೇಲ್ ಆರೋಪ ಮಾಡಿ ಲೈವ್‌ ನಲ್ಲೇ ವಿಷ ಸೇವಿಸಿದ ನಟ

ಮಹಿಳೆ ಜೊತೆ ಸಂಬಂಧ: ಬ್ಲ್ಯಾಕ್‌ ಮೇಲ್ ಆರೋಪ ಮಾಡಿ ಲೈವ್‌ ನಲ್ಲೇ ವಿಷ ಸೇವಿಸಿದ ನಟ

0

ಮುಂಬಯಿ: ಜನಪ್ರಿಯ ಟಿವಿ ಶೋ ʼಕಪಿಲ್‌ ಶರ್ಮಾʼ ನಲ್ಲಿ ಸಹ ನಟನಾಗಿ ಕಾಣಿಸಿಕೊಂಡ ತೀರ್ಥಾನಂದ ರಾವ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ನಡೆದಿದೆ.

Join Our Whatsapp Group

ಫೇಸ್‌ ಬುಕ್‌ ನಲ್ಲಿ ಲೈವ್‌ ಬಂದು ಅವರು ಆತ್ಮಹತ್ಯೆಗೆ ಯತ್ನಿಸಿದ್ದು, ಸ್ನೇಹಿತರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ ಕಾರಣ, ಸದ್ಯ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

“ಕಳೆದ ಕೆಲ ಸಮಯದಿಂದ ನಾನು ರಿಲೇಷನ್‌ ಶಿಪ್‌ ನಲ್ಲಿದ್ದೆ. ಆ ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಾವಿಬ್ಬರು ಒಟ್ಟಿಗೆ ವಾಸಿಸುತ್ತಿದ್ದೆವು. ದಿನಗಳು ಹೋಗುತ್ತಿದ್ದಂತೆ, ಆಕೆ ವೇಶ್ಯೆಯ ಕೆಲಸವನ್ನು ಮಾಡುತ್ತಿದ್ದಾಳೆ ಎನ್ನುವುದು ನನಗೆ ಗೊತ್ತಾಯಿತು. ನಾನು ಅವಳನ್ನು ಇದರಿಂದ ಹೊರ ತರಲು ಯತ್ನಿಸಿದೆ. ಆದರೆ ಆಕೆ ಇದಕ್ಕೆ ವ್ಯತ್ತಿರಿಕ್ತವಾಗಿ ನನ್ನ ಮೇಲೆ ಕೇಸ್‌ ದಾಖಲಿಸಿದಳು. ಅವಳು ಹಾಗೆ ಯಾಕೆ ಮಾಡಿದಳು ಅಂಥ ಗೊತ್ತಿಲ್ಲ. ಆ ಬಳಿಕ ನನಗೆ ಕರೆ ಮಾಡಿ ಭೇಟಿ ಆಗಬೇಕು ಎನ್ನುತ್ತಿದ್ದಳು. ನಾನು ಅವಳ ಮಾತಿಗೆ ಮತ್ತೆ ಮರುಳಾಗಿ ಎರಡು ದಿನ ನಾವಿಬ್ಬರೂ ಸುತ್ತಾಡಿ ಹೊಟೇಲ್‌ ನಲ್ಲಿ ಇದ್ದೆವು. ಆದರೆ ಅವಳು ಮತ್ತೆ ನನ್ನನು ಬ್ಲ್ಯಾಕ್‌ ಮೇಲ್‌ ಮಾಡಲು ಶುರು ಮಾಡಿದಳು. ನಿನ್ನ ಮೇಲೆ ಅತ್ಯಾಚಾರದ ಕೇಸ್‌ ದಾಖಲಿಸುತ್ತೇನೆ ಎಂದು ಬೆದರಿಸುತ್ತಿದ್ದಳು. ಅದೇ ಭೀತಿಯಿಂದ ನನ್ನ ಜೀವನದ ಮೇಲೆ ತುಂಬಾ ಪರಿಣಾಮ ಬೀರಿದೆ. ಹಲವು ದಿನಗಳಿಂದ ನನ್ನ ಮನೆಗೆ ಹೋಗಲಾಗದೆ ಫುಟ್‌ಪಾತ್‌ನಲ್ಲಿ ಮಲಗಿದ್ದೆ. ನನಗೆ 3-4 ಲಕ್ಷ ಸಾಲವಿದೆ. ಇದಕ್ಕೆ ಅವಳೇ ಕಾರಣ. ನಾನು ತುಂಬಾ ನೊಂದಿದ್ದೇನೆ. ಈ ಕಾರಣದಿಂದ ನಾನು ಸಾಯಲು ನಿರ್ಧರಿಸಿದ್ದೇನೆ” ನಟ ಲೈವ್‌ ನಲ್ಲಿ ಹೇಳಿದ್ದಾರೆ.

ನಾನು ನಿನ್ನ ಮೇಲೆ ಹಾಕಿದ ಪ್ರಕರಣವನ್ನು ವಾಪಾಸ್‌ ತೆಗೆದುಕೊಳ್ಳುತ್ತೇನೆ. ನೀನು ನನ್ನ ಜೊತೆ ಕೋರ್ಟ್‌ ಮ್ಯಾರೇಜ್‌ ಮಾಡಿಕ್ಕೋ ಎಂದಳು. ನಾನು ಎಮೋಷನಲ್‌  ವ್ಯಕ್ತಿ. ನಾನು ಜನರನ್ನು ಮನರಂಜನೆ ಮಾಡುತ್ತೇನೆ. ನನ್ನೊಬ್ಬ ಕಲಾವಿದ. ನನ್ನಿಂದ ಇದೆಲ್ಲ ಸಹಿಸಲು ಆಗಲ್ಲ. ನಾನು ಒಂದು ವೇಳೆ ಸತ್ತರೆ, ನನಗೆ ನ್ಯಾಯ ಸಿಗಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.

ವಿಡಿಯೋದಲ್ಲಿ ನಟ ಮಹಿಳೆಯ ಹೆಸರನ್ನು ಹೇಳಿದ್ದಾರೆ. ಈ ವಿಡಿಯೋವನ್ನು ನೋಡಿದ ನಟನ ಸ್ನೇಹಿತರು ಕೂಡಲೇ ಪಕ್ಕದ ಠಾಣೆಗೆ ಕರೆ ಮಾಡಿ ವಿಚಾರವನ್ನು ಹೇಳಿದ್ದಾರೆ.

ತೀರ್ಥಾನಂದ ರಾವ್ ಅವರ ಸ್ನೇಹಿತರ ಕರೆಯ ಬಳಿಕ ನಾವು ನೇರವಾಗಿ ಮೀರಾ ರಸ್ತೆಯ ಶಾಂತಿ ನಗರದಲ್ಲಿರುವ ಬಿ 51 ಕಟ್ಟಡದ 703 ನಂಬರ್‌ ನ ಕೋಣೆಗೆ ಹೋಗಿದ್ದೇವೆ. ಅಲ್ಲಿ ಮನೆಯ ಬಾಗಿಲು ತೆರೆದಿತ್ತು. ನಾವು ತೀರ್ಥಾನಂದ ಅವರನ್ನು ಕರೆದಿದ್ದೇವೆ. ಯಾವುದೇ ಪ್ರತಿಕ್ರಿಯೆ ಬರದೇ ಇದ್ದಾಗ ಒಳಗೆ ಹೋಗಿ ನೋಡಿದ್ದೇವೆ. ಆಗ ನಟ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅವರನ್ನು ಕೂಡಲೇ ಪಕ್ಕದ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ವರ್ಷವೂ ಸಾಲದ ವಿಚಾರವಾಗಿ ತೀರ್ಥಾನಂದ ರಾವ್ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು.