ಮನೆ ರಾಜಕೀಯ ಅಕ್ಕಿ ಪೂರೈಕೆಗೆ ಕೇಂದ್ರ ಸರ್ಕಾರ ಅಡ್ಡಗಾಲು: ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಟೀಕೆ

ಅಕ್ಕಿ ಪೂರೈಕೆಗೆ ಕೇಂದ್ರ ಸರ್ಕಾರ ಅಡ್ಡಗಾಲು: ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಟೀಕೆ

0

ಬೆಂಗಳೂರು:  ಅನ್ನಭಾಗ್ಯ ಯೋಜನೆಗೆ ಹಣ ನೀಡಿದರೂ ಅಕ್ಕಿ ಪೂರೈಕೆಗೆ ಕೇಂದ್ರ ಸರ್ಕಾರ ನಿರಾಕರಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಆರೋಪಿಸಿದ್ದು, ಕೇಂದ್ರದ ನಡೆ ಬಗ್ಗೆ ಆಹಾರ ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪ ಕಿಡಿಕಾರಿದ್ದಾರೆ.

Join Our Whatsapp Group

ಈ ಕುರಿತು ಮಾತನಾಡಿರುವ ಸಚಿವ ಕೆ.ಎಚ್ ಮುನಿಯಪ್ಪ,  ಕೇಂದ್ರ ಸರ್ಕಾರ ಅಕ್ಕಿ ನೀಡಲು ಉದ್ದೇಶಪೂರ್ವಕವಾಗಿ ತಡೆ ನೀಡಿದೆ.  ಆದರೆ  ನಾವು ಕೆಲ ರಾಜ್ಯಗಳಲ್ಲಿ ಅಕ್ಕಿ ಬಗ್ಗೆ ಮಾಹಿತಿ ಕೇಳಿದ್ದೇವೆ. ನಾವು ಕೊಟ್ಟ ಭರವಸೆಯನ್ನ ಈಡೇರಿಸುತ್ತೇವೆ. ಏನಾದ್ರೂ ಆಗಲಿ ರಾಜ್ಯದ ಜನತೆಗೆ ಅಕ್ಕಿ ಪೂರೈಕೆ ಮಾಡುತ್ತೇವೆ   ಎಂದರು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ, ನಾವು ಪುಕ್ಕಟೆ ಅಕ್ಕಿ ಕೊಡಿ ಅಂತಾ ಕೇಳುತ್ತಿಲ್ಲ.  ದುಡ್ಡು ಕೊಟ್ಟರೂ ಅಕ್ಕಿ ಕೊಡಲ್ಲ ಅಂದ್ರೆ ಯಾಕೆ ಉತ್ತರ ನೀಡಲಿ. ಯಾಕೆ ಕೇಂಧ್ರ ಸರ್ಕಾರ ಅಕ್ಕಿ ಕೊಡಲು ತಯಾರಿಲ್ಲ.    ಕೇಂದ್ರ ಯಾಕೆ ಅಡ್ಡಗಾಲು ಹಾಕುತ್ತಿದೆ/  ಕೇಂದ್ರ ಸರ್ಕಾರ ದುರುದ್ದೇಶದಿಂದ ಹೀಗೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.