ಮನೆ ರಾಜಕೀಯ ಆಝಾನ್ ವಿವಾದ: ಹೈಕೋರ್ಟ್ ಆದೇಶ ಪಾಲನೆಗೆ ಕ್ರಮ-ಸಿಎಂ ಬೊಮ್ಮಾಯಿ

ಆಝಾನ್ ವಿವಾದ: ಹೈಕೋರ್ಟ್ ಆದೇಶ ಪಾಲನೆಗೆ ಕ್ರಮ-ಸಿಎಂ ಬೊಮ್ಮಾಯಿ

0

ಬೆಂಗಳೂರು(Bengaluru): ಆಝಾನ್(Ajaan) ವಿವಾದ(Controversy) ರಾಜ್ಯಾದ್ಯಂತ ಚರ್ಚೆಯಲ್ಲಿದ್ದು, ಈ ಕುರಿತು ಮುಖ್ಯಮಂತ್ರಿ(Chief minister) ಬಸವರಾಜ ಬೊಮ್ಮಾಯಿ(Basavaraja Bommai) ಪ್ರತಿಕ್ರಿಯಿಸಿ ಶಬ್ಧ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹಂತ ಹಂತವಾಗಿ ಹೈಕೋರ್ಟ್(Highcourt) ಆದೇಶ(Order) ಪಾಲನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ‘ಆಝಾನ್ ಬಗ್ಗೆ ಹೈಕೋರ್ಟ್ ಆದೇಶ ಇದೆ. ಈ ಆದೇಶ ಪಾಲಿಸಿಲ್ಲ ಅಂತ ಹೈಕೋರ್ಟ್ ಮತ್ತೊಂದು ಆದೇಶ ಮಾಡಿದೆ. ಎಷ್ಟು ಡೆಸಿಬಲ್ ಶಬ್ಧ ಇರಬೇಕು ಅಂತ ಕೂಡಾ ಆದೇಶ ಇದೆ. ಡೆಸಿಬಲ್ (decibel ) ಯಂತ್ರಗಳನ್ನು ಜಿಲ್ಲಾ ಮಟ್ಟದಲ್ಲಿ ಖರೀದಿ ಮಾಡಿ ಅಂತ ಆದೇಶದಲ್ಲಿ ಹೇಳಲಾಗಿದೆ. ಹೈಕೋರ್ಟ್ ನೀಡಿರುವ ಹಿಂದಿನ ಆದೇಶಗಳನ್ನು ಹಂತ ಹಂತವಾಗಿ ಪಾಲನೆಗೆ ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲರನ್ನೂ ವಿಶ್ವಾಸದಲ್ಲಿ ತೆಗೆದುಕೊಂಡು ಮಾಡುವ ಕೆಲಸ ಇದು. ಯಾವುದೇ ರೀತಿಯ ಬಲವಂತ ಮಾಡಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಆಝಾನ್‌ ವಿವಾದದ ಬಗ್ಗೆ ಕೆಲವು ಸಂಘಟನೆಗಳು ಪ್ರಚೋದನೆ ನೀಡುತ್ತಿರುವ ವಿಚಾರವಾಗಿ ಮಾತನಾಡಿ ‘ಹಲವು ಸಂಘಟನೆಗಳ ಜತೆ ಪೊಲೀಸ್ ಠಾಣೆ(Police station) ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನೂ ಮಾಡಿದ್ದೇವೆ. ಮುಂದೆಯೂ ಈ‌ ರೀತಿಯ ಸಭೆಗಳನ್ನು ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಸರ್ಕಾರಕ್ಕೆ ಭೇದ-ಭಾವ ಇಲ್ಲ: ಅಲ್ಲದೇ, ‘ಹಲವು ವಿಚಾರಗಳು ಇವಾಗ ಚರ್ಚೆಗೆ ಬಂದಿವೆ, ಅವೆಲ್ಲ ಹಿಂದೆ ಇದ್ದ ವಿಚಾರಗಳೇ ಆಗಿವೆ. ಸರ್ಕಾರ ಯಾವುದೇ ಹೊಸ ಆದೇಶ ಮಾಡಿಲ್ಲ. ಎಲ್ಲವನ್ನೂ ಗಮನದಲ್ಲಿ ಇಟ್ಕೊಂಡಿದ್ದೇವೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲ ಕ್ರಮ ತೆಗೆದುಕೊಳ್ಳುತ್ತೇವೆ. ಸರ್ಕಾರದ ದೃಷ್ಟಿಯಲ್ಲಿ ಎಲ್ಲರೂ ಸಮಾನರೇ.‌ ಯಾವುದೇ ಭೇದ ಭಾವ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.