ಮನೆ ಮನರಂಜನೆ ಯಶ್​ ಮನೆಗೆ ಬಂತು ಹೊಸ ಐಷಾರಾಮಿ ಕಾರು: ಯಾವುದು ಗೊತ್ತಾ ?

ಯಶ್​ ಮನೆಗೆ ಬಂತು ಹೊಸ ಐಷಾರಾಮಿ ಕಾರು: ಯಾವುದು ಗೊತ್ತಾ ?

0

ನಟ ಯಶ್​ ಅವರು ಕೇವಲ ಸ್ಯಾಂಡಲ್​ ವುಡ್ ​ಗೆ ಸೀಮಿತ ಆಗಿಲ್ಲ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬ್ಲಾಕ್​ ಬಸ್ಟರ್​ ಹಿಟ್​ ಆದ ಬಳಿಕ ಅವರ ಡಿಮ್ಯಾಂಡ್​ ಹೆಚ್ಚಿದೆ. ಅನೇಕ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿರುವ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಅದಕ್ಕೆ ತಕ್ಕಂತೆ ಅವರ ಲೈಫ್​ ಸ್ಟೈಲ್​ ಕೂಡ ಬದಲಾಗಿದೆ.

Join Our Whatsapp Group

ಈಗ ಯಶ್​ ಮನೆಗೆ ಹೊಸ ಐಷಾರಾಮಿ ಕಾರು ಬಂದಿದೆ. ರೇಂಜ್​ ರೋವರ್​ ಕಾರನ್ನು ‘ರಾಕಿಂಗ್​ ಸ್ಟಾರ್​’ ಯಶ್​ ಖರೀದಿಸಿದ್ದಾರೆ. ಕಪ್ಪು ಬಣ್ಣದ ಕಾರಿನಲ್ಲಿ ಅವರು ಪತ್ನಿ ರಾಧಿಕಾ ಪಂಡಿತ್​ ಜೊತೆ ಸುತ್ತಾಡಿದ್ದಾರೆ. ಈ ಖುಷಿಯ ಸಂದರ್ಭದಲ್ಲಿ ಯಶ್​ ಅವರ ಮಕ್ಕಳಾದ ಯಥರ್ವ್​ ಮತ್ತು ಆಯ್ರಾ ಕೂಡ ಪೋಸ್​ ನೀಡಿದ್ದಾರೆ. ಹೊಸ ಕಾರಿನಲ್ಲಿ ಸುತ್ತಾಡಿದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದರ ಬೆಲೆ ಎಷ್ಟು ಎಂದು ಕೂಡ ಅಭಿಮಾನಿಗಳು ಗೂಗಲ್ ​ನಲ್ಲಿ ಹುಡುಕಾಡುತ್ತಿದ್ದಾರೆ.

ಹೊಸ ಕಾರು ಖರೀದಿಸಿರುವ ಯಶ್​ ಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅವರು ವೃತ್ತಿಜೀವನದಲ್ಲಿ ಇನ್ನಷ್ಟು ಯಶಸ್ಸು ಕಾಣಲಿ ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ. ಈ ಹೊಸ ರೇಂಜ್​ ರೋವರ್​ ಕಾರಿನ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿ! ಅನೇಕ ಐಷಾರಾಮಿ ಸೌಲಭ್ಯಗಳು ಈ ಕಾರಿನಲ್ಲಿವೆ. ಯಶ್​ ನಟಿಸಲಿರುವ ಹೊಸ ಸಿನಿಮಾ ಇನ್ನಷ್ಟೇ ಸೆಟ್ಟೇರಬೇಕಿದೆ. ಅದಕ್ಕೂ ಮುನ್ನವೇ ಅವರು ದುಬಾರಿ ಬೆಲೆಯ ಕಾರನ್ನು ಖರೀದಿಸಿ ಸುದ್ದಿ ಆಗಿದ್ದಾರೆ.

ಯಶ್​ ಅವರ 19ನೇ ಸಿನಿಮಾ ಬಗ್ಗೆ ತುಂಬ ಕುತೂಹಲ ಇದೆ. ಈ ಸಿನಿಮಾಗೆ ಯಾರು ನಿರ್ದೇಶನ ಮಾಡುತ್ತಾರೆ? ಬಂಡವಾಳ ಹೂಡಲಿರುವುದು ಯಾರು? ಸಿನಿಮಾದ ಶೀರ್ಷಿಕೆ ಏನು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಫ್ಯಾನ್ಸ್​ ಕಾತುರರಾಗಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ಗೆಲುವಿನ ಬಳಿಕ ಅವರು ದೀರ್ಘವಾದ ಬ್ರೇಕ್​ ಪಡೆದುಕೊಂಡಿದ್ದಾರೆ. ಸೂಕ್ತ ತಯಾರಿಯೊಂದಿಗೆ ಹೊಸ ಸಿನಿಮಾಗೆ ಚಾಲನೆ ನೀಡಬೇಕು ಎಂಬುದು ಅವರ ಉದ್ದೇಶ. ಹಾಗಾಗಿ ಹೊಸ ಚಿತ್ರ ಅನೌನ್ಸ್ ಆಗುವ ಸಮಯ ಹಿಡಿಯುತ್ತಿದೆ.